ಮುದುಡಿ ಮಲಗಿದ ನಗು ಮತ್ತೆ ಬರುವುದೇ??
ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆ
ಮು೦ಜಾವಿನ ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆ
ಹರುಷವೆ೦ಬ ಅಮೃತಧಾರೆ ಇ೦ದೇಕೋ ಅರಿಯೆ ವಿಷವಾಗಿದೆ
ಗೃಹಲಕ್ಷ್ಮಿಯ ಮೊಗದಲಿದ್ದ ನಗು ಅದೇಕೋ ಮಾಯವಾಗಿದೆ
ಸುಖ ಸಮೃದ್ಧಿಯ ಐರಾವತ ಬಾಡಿ ಇ೦ದು ಬೇಗೆಯಲಿ ಬಸವಳಿದಿದೆ
ನಲಿಯುತ ಸಾಗುತಲಿದ್ದ ಜೀವನರಥದ ಗಾಲಿ ಏಕೋ ಸ್ತಬ್ಧವಾಗಿದೆ
ಅರಿಯದ ಮಾಯೆಯ ಮುಸುಕು ಮನವ ಕವಿದು ಕಾಡುತಲಿದೆ
ಪರಿಹರಿಸುವ ದಾರಿ ಕಾಣದೆ ಮನ ನೊ೦ದು ಇ೦ದು ಮೂಕವಾಗಿದೆ
ಮಧುರ ದೈನ೦ದಿನ ಮ೦ದಸ್ಮಿತ ಕಮಲ ಮತ್ತೆ ಅರಳುವುದೇ??
ವಿಷಾದದ ಛಾಯೆಯಡಿ ಮುದುಡಿ ಮಲಗಿದ ನಗು ಮತ್ತೆ ಬರುವುದೇ??
Rating
Comments
ಉ: ಮುದುಡಿ ಮಲಗಿದ ನಗು ಮತ್ತೆ ಬರುವುದೇ??
In reply to ಉ: ಮುದುಡಿ ಮಲಗಿದ ನಗು ಮತ್ತೆ ಬರುವುದೇ?? by asuhegde
ಉ: ಮುದುಡಿ ಮಲಗಿದ ನಗು ಮತ್ತೆ ಬರುವುದೇ??
In reply to ಉ: ಮುದುಡಿ ಮಲಗಿದ ನಗು ಮತ್ತೆ ಬರುವುದೇ?? by asuhegde
ಉ: ಮುದುಡಿ ಮಲಗಿದ ನಗು ಮತ್ತೆ ಬರುವುದೇ??
ಉ: ಮುದುಡಿ ಮಲಗಿದ ನಗು ಮತ್ತೆ ಬರುವುದೇ??
In reply to ಉ: ಮುದುಡಿ ಮಲಗಿದ ನಗು ಮತ್ತೆ ಬರುವುದೇ?? by partha1059
ಉ: ಮುದುಡಿ ಮಲಗಿದ ನಗು ಮತ್ತೆ ಬರುವುದೇ??
ಉ: ಮುದುಡಿ ಮಲಗಿದ ನಗು ಮತ್ತೆ ಬರುವುದೇ??