ಒಡೆಯರು ಯಾರಿರಬಹುದು?
ಮುಂಜಾನೆದ್ದು, ಮನೆಹೊರಗಿನ ಕಾಂಪೌಂಡ್ ಕಟ್ಟೆಯಲ್ಲಿ ಕುಳಿತು ಪೇಪರ್ ಓದುತ್ತಿದ್ದೆ. ( ಪಕ್ಕದ ಮನೆಯವರ ಪೇಪರ್ ನಮ್ಮ ಮನೆಯೊಳಗೆ ತೆಗೆದುಕೊಂಡು ಹೋಗಿ ಓದುವುದು ಸಭ್ಯರ ಲಕ್ಷಣವಲ್ಲ..ಅದಕ್ಕೆ)
ಪೇಪರ್ನಲ್ಲಿ ಪೇಟೆ ಧಾರಣೆ ನೋಡುವುದು ನನ್ನ ಈಗಿನ ಹವ್ಯಾಸ. ಯಾವ ಏರಿಯಾದ MLA ರೇಟು ಎಷ್ಟು ಏರಿತು/ಎಷ್ಟಕ್ಕೆ ಇಳಿಯಿತು... ತುಂಬಾ ಕೆಳಗೆ ಇಳಿದರೆ ಒಂದು ೩-೪ ಶೇರ್(ಕೆಲವರು ಕತ್ತೆ, ಗುಳ್ಳೆನರಿ..ಅಂತಾರೆ) ಖರೀದಿ ಮಾಡಿ ಇಟ್ಟುಕೊಳ್ಳುವುದು, ಮುಂದೆ(ಕೋರ್ಟು ಕೇಸೆಲ್ಲಾ ಮುಗಿದಾಗ) ಒಳ್ಳೆ ರೇಟು ಬಂದರೆ ಮಾರುವುದು ಅಂತ ಇದ್ದೇನೆ.
ಆಗಲೇ ಒಂದು ಕಾಗೆ ಹತ್ತಿರ ಬಂದು "ಕಾವ್ ಕಾವ್" ಎಂದಿತು. ಓಡಿಸಿದೆ.
"ಒಡೆಯರು ಕರೀತಿದ್ದಾರೆ. ಬೇಗ.." "ಹಾಳಾದವ, ನಾನು ಪೇಪರ್ ಓದಿ ಮುಗಿಸುವುದರೊಳಗೆ ಎದ್ದನಾ" ಎಂದಾಲೋಚಿಸಿ ಪೇಪರ್ ಮಡಚಿ ಪಕ್ಕದ ಮನೆಯ ಕೆಲಸದವನಿಗೆ ಕೊಡಲು ಹೊರಟರೆ....... ಅಲ್ಲಿ ಯಾರೂ ಇಲ್ಲಾ!!
ಪುನಃ - "ಒಡೆಯರು ಕರೀತಿದ್ದಾರೆ. ಬೇಗ ಬನ್ನಿ." !!
ರಾಮರಾಮ.. ಕಾಗೆ! ಕನ್ನಡದಲ್ಲಿ!! ಮಾತನಾಡುತ್ತಿದೆ!!!
ಈ ಕಾಲದಲ್ಲಿ ಏನೂ ಆಗಬಹುದು. ನನಗೆ ಆಶ್ಚರ್ಯವಾದುದನ್ನು ತೋರಿಸಿಕೊಳ್ಳದೇ "ಯಾವ ಒಡೆಯರು? ಎಲ್ಲಿಗೆ ಬರಬೇಕು?" ಕೇಳಿದೆ. "ಅದೆಲ್ಲಾ.. ಆಮೇಲೆ. ಬೇಗ ಬನ್ನಿ" ಅಂದಿತು. "ಹೀಗೆ ಹೇಳಿದರೆ ಹೇಗೆ? ಒಡೆಯರು ಎಲ್ಲಿದ್ದಾರೆ? ನಡಕೊಂಡು ಬರಲಾ? ಬೈಕಲ್ಲಾ? ಅದನ್ನಾದರೂ ಹೇಳು." ಎಂದೆ. "ಕಾ.. ಕಾ..ಕಾರ್" ಅಂದಿತು. "ಕಾರ್ಗೆ ಪೆಟ್ರೋಲ್ ನಿಮ್ಮ ಕಾಕ ಹಾಕುತ್ತಾನಾ..ಬೈಕಲ್ಲಿ ಬರುವೆ. ನಡಿ..ಸಾರಿ.. ಹಾರು" ಎಂದು ಬೈಕಲ್ಲಿ ಹೊರಟೆನು.
ಕಾಕದೃಷ್ಟಿಯಲ್ಲಿ ಬೈಕ್ ಓಡಿಸಿದ್ದೇ ಓಡಿಸಿದ್ದು..೧೧ ಗಂಟೆಗೆ ಶಿವಮೊಗ್ಗ ತಲುಪಿದ್ದೆ! ಅಂದಹಾಗೆ ಒಡೆಯರು ಯಾರಿರಬಹುದು? ಈಶ್ವರಪ್ಪ? -ಛೇ..ಹೊಡಿ ಬಡಿ ಕತ್ತರಿಸಿ ಕೊಲ್ಲು..ಈ ಕೆಲಸಕ್ಕೆ ಈ ನರಪೇತಲನನ್ನ ಕರೆಯಲಿಕ್ಕಿಲ್ಲ. ಯಡ್ಡಿ?- ಅವರು ಇಲ್ಲೆಲ್ಲಿರುತ್ತಾರೆ?ಮುಖ್ಯ ದೇವಸ್ಥಾನ,ಜಿಲ್ಲಾ ಮಟ್ಟದ ದೇವಾಲಯ, ತಾಲೂಕಿನದೇವ್ರು ಮುಗಿಸಿ ಬೀದರ್ನ ಬೀದಿ ಸುತ್ತುಹೊಡೀತಿರಬಹುದು.ಅವರೂ ಅಲ್ಲಾ..
ಬೈಕ್ ನಿಲ್ಲಿಸಿ ಇಳಿಯಲು ಹೊರಟೆ. ಕಾಗೆ ಹತ್ತಿರ ಬಂದು "ಇಲ್ಲಲ್ಲಾ. ಮುಂದೆ ಮುಂದೆ ಇನ್ನು ಹತ್ತು ಕಿ.ಮೀ. ಅಷ್ಟೇ" ಎಂದು ಸಾಗರದ ಕಡೆಗೆ ಹಾರಿತು.
ಒಡೆಯರು ಯಾರಿರಬಹುದು??
-ಗಣೇಶ.
Comments
ಉ: ಒಡೆಯರು ಯಾರಿರಬಹುದು?
ಉ: ಒಡೆಯರು ಯಾರಿರಬಹುದು?
ಉ: ಒಡೆಯರು ಯಾರಿರಬಹುದು?
ಉ: ಒಡೆಯರು ಯಾರಿರಬಹುದು?
ಉ: ಒಡೆಯರು ಯಾರಿರಬಹುದು?
In reply to ಉ: ಒಡೆಯರು ಯಾರಿರಬಹುದು? by asuhegde
ಉ: ಒಡೆಯರು ಯಾರಿರಬಹುದು?
In reply to ಉ: ಒಡೆಯರು ಯಾರಿರಬಹುದು? by kavinagaraj
ಉ: ಒಡೆಯರು ಯಾರಿರಬಹುದು?