ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
ನಮ್ಮ ದಿನನಿತ್ಯದ ಅದೆಷ್ಟೋ ನಡವಳಿಕೆಗಳು ವಿಚಿತ್ರವಾಗಿರುತ್ತವೆ. ಆದರೆ ಅವುಗಳು ಬೇರೆ ದ್ರಷ್ಟಿಕೊನದಲ್ಲಿ ಆಲೋಚಿದರೆ ಮಾತ್ರ ಅವು ವಿಚಿತ್ರವೆನಿಸುತ್ತದೆ.ಎಲ್ಲರೂ ಒಂದಲ್ಲಾ ಒಂದು ವಿಚಿತ್ರ ನಡುವಳಿಕೆಯನ್ನು ಅನುಸರಿಸುತಿರುತ್ತಾರೆ.
ನಡವಳಿಕೆ 1 :ಬೆಳಗ್ಗೆ ಎದ್ದು ಸ್ನಾನ ಮುಗಿಸಿ ಆಫೀಸ್ ಗೆ ಹೊರಡುವ ತಯಾರಿಯಲ್ಲಿ ಒಂದುಕ್ಷಣ ನೀವೂ ನನ್ನಂತೆ ಕನ್ನಡಿಯ ಮುಂದೆ ನಿಲ್ಲುತ್ತೀರಿ. ಆ ಕ್ಷಣಾರ್ಧದಲ್ಲಿ ನಾನು ನೀವೂ ಅಂತ ಅಲ್ಲಾ ಎಲ್ಲರೂ ತಮ್ಮ ಹಾವಾ ಭಾವ ಒಮ್ಮೆಗೆ ನಿಲ್ಲಿಸಿ, ಒಂದು ಕ್ಷಣಕ್ಕೆ ಮುಗುಳ್ ನಕ್ಕರೆ ಹೇಗೆ ಕಾಣುತ್ತೇನೆ ಎಂದು ನೋಡುತ್ತಾರೆ, ತಲೆಯಲ್ಲಿ ಅದೆಷ್ಟೋ ಚಿಂತೆ ಕೂತಿರಲಿ ಕನ್ನಡಿ ಮುಂದೆ ನಿಂತ ಕ್ಷಣಕ್ಕೆ ನಮಗೆ ನಮ್ಮ ಮುಖ ಬಿಟ್ಟು ಬೇರೇನೂ ಸೂಚುವುದಿಲ್ಲ.
ನಡವಳಿಕೆ 2 : ಹಾಗೆ ಬಸ್ ಗೆ ಕಾಯುತ್ತಿರಬೇಕಾದರೆ ಆಫೀಸ್ ಕಡೆಗೆ ಹೋಗುವ ಬಸ್ ನಂಬರ್ ತಿಳಿದಿದ್ದರೂ, ಬಂದ ಬಸ್ ಬೇರೆಡೆಗೆ ಹೋಗುವುದು ಖಾತ್ರಿ ಇದ್ದರೂ, ಆ ಬಸ್ ನ ಬೋರ್ಡ್ಅನ್ನು ಸಂಪೂರ್ಣವಾಗಿ ಓದುತ್ತೇವೆ.
ನಡವಳಿಕೆ 3:ಸಮಯ ಎಷ್ಟಾಗಿದೆ ಎಂದು ಗೊತ್ತಿದ್ದರು ಪ್ರತಿ ನಿಮಿಷಕ್ಕೆ ೩ ಬಾರಿ ಕೈಗಡಿಯಾರ ನೋಡುವುದು, ಬಸ್ ಸರಿಯಾದ ಟೈಮ್ ಗೆ ಬರಲಿಲ್ಲಂತಾದರೆ,ಗಡಿಯಾರದ ಸೆಕೆಂಡ್ ಮುಳ್ಳು ಸರಿಯಾದ ವೇಗದಲ್ಲಿ ಚಲಿಸುತ್ತಿದೆಯೇ ನೋಡುತ್ತೇವೆ, ಇನ್ನೂ ಬಸ್ ಬಾರದೆ ಇದ್ದಾಗ ನಮ್ಮ ನಂತರ ಬಂದು ನಿಂತವರ ವ್ಯಕ್ತಿಯ ಹತ್ತಿರ "ಅಣ್ಣಾ .. ಬಸ್ ನಂಬರ್ ೧೧೧ ಹೋಯಿತೇ ..?"ಎಂದು ಕೇಳುತ್ತೇವೆ(ಇಲ್ಲಿ ನಮ್ಮ ದೃಷ್ಟಿ ಮೇಲೆ ನಮಗೆ ನಂಬಿಕೆ ಹೊರಟು ಹೋಗಿರುತ್ತದೆ !!!)
ನಡವಳಿಕೆ 4: ಹಾಗೋ ಹೀಗೋ ಬಸ್ ಹಿಡಿದು ಆಫೀಸ್ ತಲುಪುತ್ತೇವೆ, ಲಿಫ್ಟ್ ನಲ್ಲಿ ಬಿಲ್ಡಿಂಗ್ ಹತ್ತುವಾಗ ಪ್ರತಿಯೊಬ್ಬರ ಹಾವಾ-ಭಾವ ನೋಡಲು ಮಜವಿರುತ್ತದೆ. ಒಬ್ಬ ವ್ಯಕ್ತಿ ಮೇಲೆ ದೇವರು ಪ್ರತ್ಯಕ್ಷ್ಯ ವಾದಂತೆ ಮೇಲಿನ ಫ್ಯಾನ್ ನೋಡುತ್ತಿದ್ದರೆ, ಪಕ್ಕದಲ್ಲೇ ನಿಂತ ಹೆಣ್ಣು ಮಗಳೊಬ್ಬಳು ತನ್ನ ಮೊಬೈಲ್ ನಲ್ಲಿ ಆಗಲೇ ಓದಿರುವ ಮೆಸೇಜ್ ಅನ್ನು ತನ್ನ ಮಹಡಿ ಬರುವ ವರೆಗೆ ಪುನಃ ಪುನಃ ಓದುತಿರುತ್ತಾಳೆ.ಪಕ್ಕದಲ್ಲೇ ಇದ್ದ ನಡು ವಯಸ್ಕ ವ್ಯಕ್ತಿ ಲಿಫ್ಟ್ ನಲ್ಲಿ ಮಹಡಿ ಯೊಂದಿಗೆ ಓಡುತ್ತಿರುವ ಇಂಡಿಕೇಶನ್ ಲೈಟ್ ನೋಡುತ್ತಾ ನಿಂತಿರುತ್ತಾನೆ.ಇವು ಬೇರೆಯವರ ದೃಷ್ಟಿ ಇಂದ ನಮ್ಮನ್ನು ನಾವು ರಕ್ಷೆ ಪಡೆಯಲು ನಾವೇ ಕಂಡು ಕೊಂದ ಕೆಲವು ಸುಲಭ ನಡವಳಿಕೆಗಳು.
ನಡವಳಿಕೆ 5 : ತುಂಬಾ ಹಾಸ್ಯಾಸ್ಪದ ಎನಿಸುವುದು ಈ ನಡವಳಿಕೆಗೆ, ಊರಿಗೆ ರಜೆಹಾಕಿ ರೈಲ್ವೆ ಸ್ಟೇಷನ್ ಪ್ಲಾಟ್ಫಾರ್ಮ್ ನಲ್ಲಿ ತನ್ನ ಟ್ರೈನ್ ಗೆ ಕಾಯುತ್ತ ಕುಳಿತಿರಬೇಕಾದರೆ ಬರುವ ಅನ್ನೌನ್ಸೆಮೆಂಟ್ "ಪ್ರಯಾಣಿಕರ ಗಮನಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಗಾಡಿ ನಂಬರ್ ೦೦೦೦ ಪ್ಲಾಟ್ಫಾರ್ಮ್ ನಂಬರ್ ೦೦ ನಲ್ಲಿ ಬಂದಿರುತ್ತದೆ ".ಈ ಪ್ರಕಟಣೆಯನ್ನು ಅಸಲಿಗೆ ನಾವು ಕೇಳಬೇಕಾಗಿರುತ್ತದೆ,ಆದರೆ ನಾವು ಕೇಳುವುದರ ಜೊತೆಗೆ ನೋಡುವ ಕೆಲಸವನ್ನು ಮಾಡುತ್ತೇವೆ. ಕೂಲಿ ಹೊತ್ತಿರುವ ಕೂಲಿ ಆಳಿಂದ ಹಿಡಿದು ಪೇಪರ್ ಓದುತ್ತ ಬೆಂಚ್ ಮೇಲೆ ಕುಳಿತ ಇಳಿವಯಸ್ಸಿನ ಅಜ್ಜನೂ ತನ್ನ ಕೆಲಸ ಬಿಟ್ಟು ಧ್ವನಿ ಬಂದ ಮೈಕ್ ನೋಡುತ್ತಿರುತ್ತಾನೆ(ಇಲ್ಲಿ ಮೈಕ್ ನೋಡುವ ಆವಶ್ಯಕತೆ ಇರುವುದಿಲ್ಲ,ಬರಿ ಆಲಿಸಿದರೆ ಸಾಕಾಗಿರುತ್ತೆ ).
ಇಂಥ ಹಲವು ನಡವಳಿಕೆಗಳು ನಮ್ಮ -ನಿಮ್ಮಲ್ಲಿವೆ , ಅರ್ಥ ಹುಡುಕುವುದು ಕಷ್ಟದ ವಿಷಯ, ಆದರೆ ಬೇರೆ ಕೋನದಲ್ಲಿ ಚಿಂತಿಸಿದರೆ ಒಂದು ಹನಿ ನಗು ಮೂಡುವುದು ಖಂಡಿತ.
ಕಾಮತ್ ಕುಂಬ್ಳೆ
Comments
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
In reply to ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು by vani shetty
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
In reply to ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು by Jayanth Ramachar
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
In reply to ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು by kavinagaraj
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
In reply to ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು by prasannakulkarni
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು
In reply to ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು by gopinatha
ಉ: ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳು