ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
ನನ್ನಂತೆ ಹಲವರಿಗೆ ನಾರಾಯಣ್ ಕೃಷ್ಣನ್ ಎಂಬ ವ್ಯಯಕ್ತಿಕ ಜೀವನ ಬೇರೆಯವರಿಗೆ ಸವೆಯುವ ವ್ಯಕ್ತಿಯ ಬಗ್ಗೆ ತಿಳಿದಿರಲಿಕ್ಕಿಲ್ಲಾ,
೨೯ ವರುಷ ಪ್ರಾಯದ ಈ ವ್ಯಕ್ತಿ ಓದಿನಲ್ಲಿ ಹೋಟೆಲ್ ಮನೆಜ್ಮೆಂಟ್ ಮುಗಿಸಿದ್ದಾರೆ, ಇವರು ಒಂದು ಗುಂಪನ್ನು ಕಟ್ಟಿಕೊಂಡು ಅದೆಷ್ಟೋ ಹಸಿದ ಹೊಟ್ಟೆಗಳ ಹಸಿವನ್ನು ನೀಗಿಸುವಲ್ಲಿ ತಮ್ಮ ಜೀವನದ ಸಾರ್ಥಕತೆ ಕಾಣುತ್ತಿದ್ದಾರೆ.ಮುಂಜಾನೆಯ ೪ ರಿಂದ ಬಿಸಿಯೂಟದ ತಯಾರಿಸುವುದರೊಂದಿಗೆ ಈ ಸಾರ್ಥಕ ಜೀವಿಯ ದಿನಚರಿ ಪ್ರಾರಂಭವಾಗುತ್ತದೆ. ತಯಾರಾದ ಬಿಸಿಯೂಟವನ್ನು ಒಂದು ವಾನ್ ನಲ್ಲಿ ತುಂಬಿಸಿ ಮಧುರೈ ಸುತ್ತಮುತ್ತಲಿನ ೨೦೦ ಕಿ.ಮಿ ನಿರ್ಗತಿಕ, ಹಸಿದ ಜನರ ಕೂಗನ್ನು ಅರಸುತ್ತಾ ದಿನ ಕಳೆಯುತ್ತಾರೆ.
ಅವೆಷ್ಟೋ ಜನರಿಗೆ ತಮ್ಮ ಕೈ ತುತ್ತು ತಿನ್ನಿಸುದರಲ್ಲಿ ಹಿಂದೆ ಮುಂದೆ ನೋಡದ ಇವರು, ಅಗತ್ಯ ಬಿದ್ದವರಿಗೆ ಖುದ್ದು ತಾವೇ ಕ್ಷೌರ ಮಾಡಿಸಿದ್ದಾರೆ.
CNN ಸುದ್ದಿವಾಹಿನಿಯ ಪ್ರಕಾರ ೮ ವರುಷದ ಹಿಂದೆ ತನ್ನ ಉದ್ಯೋಗ ನಿಮಿತ್ತ ಸ್ವಿಜರ್ಲ್ಯಾಂಡ್ ಹೋಗಬೇಕಿದ್ದ ಈತ ಮಧುರೈ ದೇವಸ್ಥಾನಕ್ಕೆ ಬೇಟಿನೀಡುವ ಸಂದರ್ಭದಲ್ಲಿ ಹಸಿವನ್ನು ತಾಳಲಾರದೆ ಇಳಿವಯಸ್ಸಿನ ಅಜ್ನ್ಯಾತನೋರ್ವ ತನ್ನ ಮಲ ತಾನೇ ತಿನ್ನುತ್ತುವುದನ್ನು ನೋಡಿ ,ಮನೆಯವರ ವಿರೋಧದ ನಡುವೆಯೇ ತನ್ನ ಭವಿಷ್ಯ ಕಡೆಗಣಿಸಿ ಸಾರ್ಥಕತೆಯ ಜೀವನ ನಡೆಸಲಾರಂಬಿಸಿದ.
ಅಂದು ಪ್ರಾರಂಭವಾದ ಈ ಚೈತ್ರಯಾತ್ರೆ ಇಲ್ಲಿವರೆಗೆ ೧೨ ಲಕ್ಷಕ್ಕೂ ಹೆಚ್ಚು ಹಸಿದಹೊಟ್ಟೆಗೆ ತುತ್ತು ನೀಡುವ ಕಾರ್ಯ ಮಾಡುತ್ತಿದೆ. ಇವರು ಇವರದೇ ಅದ ಒಂದು "ಅಕ್ಷಯ " ಎಂಬ ಹೆಸರಿನ ಟ್ರಸ್ಟ್ ಕಟ್ಟಿಕೊಂಡು ನಿರಾಶ್ರಿತರಿಗೆ ಸೂರನ್ನು ಕೊಡುವ ಕೆಲಸಕ್ಕೂ ಕೈ ಹಾಕಿದ್ದಾರೆ.
CNN ನಡೆಸುತ್ತಿರುವ ವಿಶ್ವವ್ಯಾಪಿ online ಆಯ್ಕೆಯಲ್ಲಿ ಇರುವ ೧೦ ಸ್ಪರ್ದಾಳುಗಳಲ್ಲಿ ಕೃಷ್ಣನ್ ಒಬ್ಬರು, ಬಾರತೀಯ ಮೇಲಾಗಿ ಮಾನವೀಯತೆ ಇರುವ ಮಾನವನಿಗೆ ನಮ್ಮೆಲ್ಲರ ಮತ ಬಿದ್ದಲ್ಲಿ ,ಆತನ ಅಸಾಮಾನ್ಯ ಸಾಧನೆಯಲ್ಲಿ ನಾವು ಪಾಲ್ಗೊಂಡಂತೆ ಆಗುವುದು.
ಇಗಲೇ ಪಡೆದಿರುವ $ 25,000 (ಟಾಪ್-೧೦ ರಲ್ಲಿ ಸ್ಥಾನ ) ಜೊತೆಗೆ ಒಂದು ಪಕ್ಷ ಈ ವ್ಯಕ್ತಿ ಗೆದ್ದಲ್ಲಿ ಬಹುಮಾನ ಮೊತ್ತ $1 ,00,000 ಅದೆಷ್ಟೋ ಕೂಗು ನೀಗಿಸುವುದರಲ್ಲಿ ಸಂಶಯವಿಲ್ಲ.
ಮುಂದೆ ಹಿಂದೆ ಯೋಚಿಸದೆ ಇವರಿಗೆ ನಿಮ್ಮ ಮತ ಹಾಕಲು
http://heroes.cnn.com/vote.aspx ಗೆ ಬೇಟಿ ಮಾಡಿ. ದಯವಿಟ್ಟು ನವೆಂಬರ್ 18 ೬ a .m (ET) ಮೊದಲಾಗಿ ಅದೆಷ್ಟು ಸಾದ್ಯವೋ ಅಷ್ಟು ಮತ ಹಾಕಿ.
ಹಾಗೆಯೇ ಈ ಕೊಂಡಿಯನ್ನು ಬೇರೆಯವರಿಗೂ ಹಂಚಿ ಅವರಿಗೂ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಲುಹೇಳಿ.
ನಿಮ್ಮ
ಕಾಮತ್ ಕುಂಬ್ಳೆ
Comments
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
In reply to ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ by kamath_kumble
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
In reply to ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ by prasannasp
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
In reply to ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ by kamath_kumble
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
In reply to ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ by prasannasp
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
In reply to ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ by kamath_kumble
ಉ: ಕುಂಬ್ಳೆ, ಚಿತ್ರ ಸೇರಿಸಲು ಆಗುತ್ತದೆ. ಇನ್ನೊಮ್ಮೆ ಪ್ರಯತ್ನಿಸಿ
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
In reply to ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ by Jayanth Ramachar
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
ಉ: ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ