ಬೆಳಗನು ಮುಸುಕುವ ಮಾಯೆಯ ಮಂಜು
ಬೆಳಗೋ ಬೆಳಗಿನ ಮುಸುಕೇ ಮಂಜೋ
ಮುಸುಕೋ ಮಂಜಿನ ದಾರಿಯೇ ಬೆಡಗೋ
ದಾರಿಯೋ ಬೆಡಗಿನ ಹೊಳೆಯೇ ಪಂಜೋ
ಹೊಳೆಯೋ ಪಂಜಿನ ತರವೇ ಬೆಳಗೋ
ತರವೋ ಬದುಕಿನ ದಾರಿಯ ಹರಿವೋ
ದಾರಿಯೆ ಹರಿಯುವ ಬವಣೆಯ ಹರಹೋ
ಬವಣೆಯೋ ಹರಹಿನ ಪರಿಯೇ ನಲಿವೋ
ನಲಿವಲೆ ಬದುಕುವ ನವೆಯೇ ತರವೋ
ನವೆಯೋ ನಾವೆಯ ತೇಲುವ ತೆವಲೊ
ತೇಲುವ ತೆವಲಿನ ಮಾಯೆಯ ಒಲವೋ
ಮಾಯೆಯೋ ಒಲವಿನ ದಾರಿಯ ಸೆಳವೋ
ದಾರಿಯ ಸೆಳೆತದ ಕಾಲದ ನವೆಯೋ
ಕಾಲವೋ ಬೆಳಗಿನ ಕಳೆಯುವ ಸಾಲವೋ
ಕಳೆಯುವ ಸಾಲದೆ ಕಲೆತಿಹ ರಾಗವೋ
ಕಲೆತಿಹ ರಾಗದ ಬಯಕೆಯ ತಾನವೋ
ಬಯಕೆಯೆ ತಾನವೇ ಮುಸುಕಿನ ಕಾಲವೋ
ಮುಸುಕೋ ಮಂಜದು ಬೆಳಗಿನ ಪಂಜೋ
ಬೆಳಕಿನ ಪಂಜಿನ ಪರಿಯೇ ಮಂಜೋ
ಪರಿಯೋ ಮಂಜಿನ ದಾರಿಯೆ ಬದುಕೋ
ದಾರಿಯೆ ಬದುಕಲಿ ಮಾಯೆಯ ಮಸುಕೋ
ಮಾಯೆಯ ಹೊಸಗೆಯು ಪ್ರಕೃತಿ ಛಾಯೆಯೋ
ಪ್ರಕೃತಿಯ ಛಾಯೆಯೇ ಬೆಳಗುವ ಕಾಯೆಯೋ
ಬೆಳಕಿನ ಕಾಯೆಯ ಈ ಅಮೃತ ಸಾಯೆಯೋ
ಅಮೃತ ಅದ್ಭುತ ಪ್ರಕೃತಿಯ ಮಾಯೆಯೋ
Rating
Comments
ಉ: ಬೆಳಗನು ಮುಸುಕುವ ಮಾಯೆಯ ಮಂಜು
In reply to ಉ: ಬೆಳಗನು ಮುಸುಕುವ ಮಾಯೆಯ ಮಂಜು by partha1059
ಉ: ಬೆಳಗನು ಮುಸುಕುವ ಮಾಯೆಯ ಮಂಜು
ಉ: ಬೆಳಗನು ಮುಸುಕುವ ಮಾಯೆಯ ಮಂಜು
In reply to ಉ: ಬೆಳಗನು ಮುಸುಕುವ ಮಾಯೆಯ ಮಂಜು by Chikku123
ಉ: ಬೆಳಗನು ಮುಸುಕುವ ಮಾಯೆಯ ಮಂಜು
ಉ: ಬೆಳಗನು ಮುಸುಕುವ ಮಾಯೆಯ ಮಂಜು
In reply to ಉ: ಬೆಳಗನು ಮುಸುಕುವ ಮಾಯೆಯ ಮಂಜು by manju787
ಉ: ಬೆಳಗನು ಮುಸುಕುವ ಮಾಯೆಯ ಮಂಜು
ಉ: ಬೆಳಗನು ಮುಸುಕುವ ಮಾಯೆಯ ಮಂಜು
In reply to ಉ: ಬೆಳಗನು ಮುಸುಕುವ ಮಾಯೆಯ ಮಂಜು by prasannakulkarni
ಉ: ಬೆಳಗನು ಮುಸುಕುವ ಮಾಯೆಯ ಮಂಜು
ಉ: ಬೆಳಗನು ಮುಸುಕುವ ಮಾಯೆಯ ಮಂಜು
In reply to ಉ: ಬೆಳಗನು ಮುಸುಕುವ ಮಾಯೆಯ ಮಂಜು by kavinagaraj
ಉ: ಬೆಳಗನು ಮುಸುಕುವ ಮಾಯೆಯ ಮಂಜು