ನಾಳೆಗೆ ಅದು ನೆನ್ನೆಯಾಗುತ್ತದೆಂಬುದನ್ನು ಬಿಟ್ಟರೆ ಇಂದು ವಿಶೇಷವೇನೂ ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೧

ನಾಳೆಗೆ ಅದು ನೆನ್ನೆಯಾಗುತ್ತದೆಂಬುದನ್ನು ಬಿಟ್ಟರೆ ಇಂದು ವಿಶೇಷವೇನೂ ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೧

(೨೬೧) ಏನನ್ನು ಕಲಿಸಲಾಗುತ್ತದೆಯೋ ಅದು ಯಾರನ್ನೂ ಪ್ರೌಢರನ್ನಾಗಿಸದೆಂಬ ಗುಟ್ಟನ್ನು ಅನಕ್ಷರಸ್ಥರಿಂದ ಮುಚ್ಚಿಡುವ ಹುನ್ನಾರವನ್ನು ಶಿಕ್ಷಣ ಎನ್ನುತ್ತಾರೆ!


(೨೬೨) ಏನನ್ನಾದರೂ ಸಾಧಿಸಬೇಕೆಂಬ ಸುಡುವ ಬೇಗೆಯಂತಹ ತುಡಿತಕ್ಕಿಂತಲೂ ಸಿಡಿಗಳನ್ನು ಸುಡುವ ಅಭ್ಯಾಸವೇ ಇಂದು ಹೆಚ್ಚಿದೆ.


(೨೬೩) ಅತ್ಯಂತ ಶೋಷಿತವಾಗಿರುವ ದೇಹದ ಅಂಗವೆಂದರೆ ಅದು ’ಆರೋಗ್ಯಕರ ಹಲ್ಲುಗಳೇ’ ಇರಬೇಕು. ಅವು ಆಹಾರವನ್ನು ಸ್ವೀಕರಿಸಿ, ಮುರಿದು, ಬೆರೆಸಿ, ಮುಂದಕ್ಕೆ ದೂಡುತ್ತವೆ. ಸ್ವತಃ ಅವುಗಳ ’ಮೇಲೆ’ ಉಳಿದಿರಬಹುದಾದ ಯಃಕಶ್ಚಿತ್ ಊಟವನ್ನೂ ಸಹ ಕೂಡಲೇ ಅವುಗಳಿಂದ ಕಿತ್ತುಹಾಕಲಾಗಿಬಿಡುತ್ತದೆ!


(೨೬೪) ಅಹ್ಲಾದಕರ ಬದುಕನ್ನು ಬದುಕಿನ ಅಹ್ಲಾದದಿಂದ ಭಿನ್ನಗೊಳಿಸುವ ಸಾಮರ್ಥ್ಯವೇ ನಾಗರೀಕತೆಗಿರಬೇಕಾದ ಮೊದಲ ಯೋಗ್ಯತೆ!


(೨೬೫) ನಾಳೆ ಅದು ನೆನ್ನೆಯಾಗಿಬಿಡುತ್ತದೆಂಬ ವಿಷಯವನ್ನು ಹೊರತುಪಡಿಸಿದರೆ, ಇಂದಿನ ದಿನದ ಬಗ್ಗೆ ವಿಶೇಷವೇನೂ ಇಲ್ಲ!

Rating
No votes yet

Comments