ಚೂ- ಆಮ್ ಅನ್ನ ಹಾಗೂ ಆಲೂ ಪನ್ನೀರ್ ಟಿಕ್ಕಿ

ಚೂ- ಆಮ್ ಅನ್ನ ಹಾಗೂ ಆಲೂ ಪನ್ನೀರ್ ಟಿಕ್ಕಿ





ಚೂ- ಆಮ್ ಅನ್ನ



ನಿನ್ನೆಯ ಉಳಿದ  ಅನ್ನ ( ಕುಸುಬಲ ಅಕ್ಕಿ ಅನ್ನ/ ಕುಚ್ಚಕ್ಕಿ ಅನ್ನ) ಒಂದು ಬಟ್ಟಲು, ಬೆಳ್ಳುಳ್ಳಿ ಎಸಳು ೮-೧೦, ಒಂದು ಹಸಿಮೆಣಸು( ಸಾದಾ ಖಾರ  ಬೇಕಾದರೆ), ಒಗ್ಗರಣೆಗೆ ಎರಡು ಚಮಚ ಎಣ್ಣೆ, ಸಾಸಿವೆ ಸ್ವಲ್ಪ, ಉದ್ದಿನ ಬೇಳೆ ಕಡಲೆ ಬೇಳೆ ( ಒಂದೊಂದು ಚಮಚ) .
ಒಗ್ಗರಣೆಗಿಟ್ಟು, ಸಾಸಿವೆ ಚಟಪಟ ಅಂದ ಮೇಲೆ, ಹಸಿಮೆಣಸು ,ಉದ್ದಿನ ಮತ್ತು ಕಡಲೆ ಬೇಳೆಹಾಕಿ, ಬೆಳ್ಳುಳ್ಳಿಎಸಳುಗಳನ್ನು ಸೇರಿಸಿ, ಕರಿದ ಮೇಲೇ ಅನ್ನವನ್ನು ಅದಕ್ಕೆ ಸೇರಿಸಬೇಕು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಚೂ ಆಮ್ ಅನ್ನ ರೆಡಿ. ರುಚಿಯಾಗಿದ್ದು ಹೊಸದಾಗಿಯೇ ಮಾಡಿದಷ್ಟು ತೀರಾ ತಾಜಾ ಆಗಿರುತ್ತೆ

ಆಲೂ ಪನ್ನೀರ್ ಟಿಕ್ಕಿ

 


ಆಲೂ ಗಡ್ಡೆ  ಬೇಯಿಸಿದ್ದು ೪ ಅಥವಾ ೬, ಜೋಳದ ಹಿಟ್ಟು ( ಕಾರ್ನ್ ಫ್ಲಾರ್)  ೧೦೦ ಗ್ರಾಮ್,  ರುಚಿಗೆ ತಕ್ಕಷ್ಟು ಉಪ್ಪು. ಮತ್ತು ಕರಿಯಲು ಎಣ್ಣೆ
ಒಗ್ಗರಣೆಗೆ: ಒಂದು ಚಮಚ  ಎಣ್ಣೆ, ೧೦೦ ಗ್ರಾಮ್ ಪನ್ನೀರ್, ಎರಡು ದೊಡ್ಡ ಚಮಚ  ನೆನಸಿದ ಕಡಲೆ ಬೇಳೆ, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಒಂದು ಚಮಚ), ಹಸಿಮೆಣಸಿನ ಪೇಸ್ಟ್ ಒಂದು ಚಮಚ,

ಬೇಯಿಸಿದ ಆಲೂಗಡ್ಡೆಯನ್ನು ಗಂಟುಗಳಿಲ್ಲದಂತೆ ಹಿಸುಕಿ ಅದಕ್ಕೆ ಜೋಳದ ಹಿಟ್ಟು ಮತ್ತು ಉಪ್ಪು ಸೇರಿಸಿ ಚಪಾತಿ ಹಿಟ್ಟಿನ  ಹದಕ್ಕೆ( ನೀರು ಹಾಕದೇ) ಕಲಸಿಟ್ಟುಕೊಳ್ಳಬೇಕು.
ಹೂರಣಕ್ಕೆ: ಒಗ್ಗರಣೆಯ ( ಒಲೆಯ ಮೇಲಿಟ್ಟ)  ಎಣ್ಣೆಗೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ,ಹಸಿಮೆಣಸಿನ ಪೇಸ್ಟ್ ಹಾಕಿ ಕಡಲೇ ಬೇಳೆ ಹಾಕಿ ಸ್ವಲ್ಪ ಬಾಡಿಸಿ ಪನ್ನೀರ್ ಅನ್ನು ಪುಡಿ ಮಾಡಿ ಅದಕ್ಕೆ ಸೇರಿಸಿ ಎರಡು ನಿಮಿಷದ ನಂತರ ಕೆಳಗಿಳಿಸಿ. ತಣಿದಮೇಲೆ ಉಪ್ಪು ಸೇರಿಸಿ ಇಡಿ.
ವಿಧಾನ:
ಆಲೂಗಡ್ಡೆಯ ಹಿಟ್ಟನ್ನು ಒಂದು ಪೂರಿಗಾಗುವಷ್ಟು ಕೈಯ್ಯಲ್ಲಿ ತೆಗೆದುಕೊಂಡು ತಟ್ಟಿ ಅದರೊಳಗೆ ಒಂದೂವರೆ ಚಮಚ ಹೂರಣವನ್ನು(ಒಗ್ಗರಣೆಯ ( ಒಲೆಯ ಮೇಲಿಟ್ಟ)  ಎಣ್ಣೆಗೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ,ಹಸಿಮೆಣಸಿನ ಪೇಸ್ಟ್ ಹಾಕಿ ಕಡಲೇ ಬೇಳೆ ಹಾಕಿ ಸ್ವಲ್ಪ ಬಾಡಿಸಿ ಪನ್ನೀರ್ ಅನ್ನು ಪುಡಿ ಮಾಡಿ ಅದಕ್ಕೆ ಸೇರಿಸಿ)ಇಟ್ಟು ಹೊರಗಿನ ಹಿಟ್ಟಿನಿಂದ ಪೂರಾ ಮುಚ್ಚಿ ಸ್ವಲ್ಪ ತಟ್ಟಿ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಕಾಯಿಸಬೇಕು.
ಬಿಸಿಯಾಗಿಯೇ ತಿನ್ನಲು ಬಲು ರುಚಿ.

Rating
No votes yet

Comments