ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ..
ಸಣ್ಣಗೆ ಉರಿಯುತ್ತಿದೆ ದೀಪ,
ಅ೦ತರಾತ್ಮದ ದೀಪ.
ಕುಸಿದ ಜೀವನ ಮೌಲ್ಯಗಳಿ೦ದ
ದೀಪದ ಸುತ್ತಲೂ
ಕಪ್ಪು ಧೂಮ ಕವಿದು
ಮರೆಮಾಡುತ್ತಿದೆ ಪ್ರಕಾಶವನ್ನು - ತೇಜೋವಧೆ!
ಕೆಲ ದೀಪಗಳು ಹೇಳಹೆಸರಿಲ್ಲದೆಯೇ
ಅಳಿಯುತ್ತಲಿವ.
ಇನ್ನು ಹಲವು ದೀಪಗಳು
ಸೂರ್ಯನೆತ್ತರಕ್ಕೆ ಪ್ರಜ್ವಲಿಸುತ್ತಿವೆ.
ಬುದ್ಧನದೋ? ವಿವೇಕನದೋ? ಇನ್ಯಾವ ಮಹಾತ್ಮನದೋ?..
ಅರೆರೇ! ಇದೇನಿದು ಆಶ್ಚರ್ಯ!
ಈ ದೀಪಗಳ ಬುಡದಲ್ಲಿ
ನೆರಳೇ ಇಲ್ಲ!
ಇನ್ಕೆಲವು ಜ್ಯೋತಿಗಳು ಒದ್ದಾಡುತ್ತಲಿವೆ
ತಮ್ಮ ಬುಡಮೂಲದ ನೆರಳ ಬೇರಲ್ಲಿ ಸಿಲುಕಿ.
ಇವಕೆ ಎಷ್ಟೊ೦ದು ಇತಿ-ಮಿತಿಗಳು!
ಹಪಹಪಿಸುತ್ತಿವೆ ಈ ದೀಪಗಳು
ಮಾರ್ಗದರ್ಶನದ ಪ್ರಭೆಗಾಗಿ,
ಸುತ್ತಲಿರುವ ಅಧಮತೆ
ಯಾರ ಸಹಾಯಹಸ್ತಕ್ಕೂ ಎಡೆಗೊಡುತ್ತಿಲ್ಲ.
ಬಾಳ ಹಣತೆಯ ಬತ್ತಿಯನ್ನು
ನಿಷ್ಠೆಯಲಿ ಹೊಸೆಹೊಸೆದು,
ಜೀವನಾಮೃತರಸದ ಎಣ್ಣೆಯೆರೆದು,
ಜ್ಯೋತಿಯನ್ನು ಹಚ್ಚೋಣ.
ಪ್ರತಿಯೊಬ್ಬರ ಕಣ್ಗಳಲಿ ಬೆಳಗಲಿ
ಅವರವರ ಅ೦ತರಾತ್ಮ.
-ಪ್ರಸನ್ನ
Rating
Comments
ಉ: ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ..
In reply to ಉ: ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ.. by manju787
ಉ: ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ..
In reply to ಉ: ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ.. by prasannakulkarni
ಉ: ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ..
ಉ: ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ..
In reply to ಉ: ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ.. by ksraghavendranavada
ಉ: ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ..