ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...

ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...

Comments

ಬರಹ

ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...

ಇವತ್ತಿನ ಪ್ರಜಾವಾಣಿಯಲ್ಲಿ ಬಂದಿರುವ ಕನ್ನಡ ಸುದ್ದ್ದಿಓದಿ..ಖುಷಿ ಆಯ್ತು..
ತಮಿಳರು, ತೆಲುಗರು ತಮ್ಮ ತಮ್ಮ ನುಡಿಗಳನ್ನು ಹಾಗು ತಮ್ಮ ಜನರನ್ನು ಬೇರೆ ಬೇರೆ ದೇಶಗಳಲ್ಲಿ ಗಟ್ಟಿಯಾಗಿ ನೆಲೆಸಿದ್ದಾರೆ..
ಅಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿ ನೆರವಾಗ್ತಾರೆ.. ಆವಾಗಾವಗ ಔತಣಕೂಟಗಳನ್ನೂ ಏರ್ಪಡಿಸುತ್ತಾರೆ..
ಹೀಗೇಕೆ ನಮ್ಮ ಕನ್ನಡಿಗರಿಗಿಲ್ಲ ಎಂದು ತುಂಬಾ ಯೋಚಿಸಿದ್ದೆ..
ಈಗ ಈ ಸುದ್ದಿ ಕೇಳಿ ಮನಸ್ಸಿಗೆ ಒಳ್ಳೆ ನೆಮ್ಮದಿ ಸಿಕ್ಕಿತು..
ನ್ಯೂಜಿಲೆಂಡಿನಲ್ಲಾದರೂ ಈರಿತಿ ಆಗಿದೆಯಲ್ಲ ಸಾಕು ಅನಿಸಿತು..

ಕನ್ನಡ ಹೀಗೆ ಬೆಳೆದು.. ಬೇರೆ ಬೇರೆ ನೆಲಗಳಲ್ಲಿ ತನ್ನ ಪಿರಿಮೆಯನ್ನು, ನುಡಿಯ ಕಂಪನ್ನು ಪಸರಿಸಲಿ ಎನ್ನುವೆ...

ಈಗ ಜರ್ಮನಿಯಲ್ಲಿ ಸುಮಾರು 400ಕ್ಕಿಂತಲೂ ಹೆಚ್ಚು ಕನಡಿಗರಿದ್ದಾರೆ... ಆದರೆ ಅವರನ್ನು ಒಟ್ಟಿಗೆ ತರಲು ಆಗುತ್ತಿಲ್ಲ..
ಆದರೆ 4 ತಿಂಗಳು ಮುಂಚೆ ಇಲ್ಲಿನ ಸ್ಟುಟ್ ಗಾರ್ಟನಲ್ಲಿ "ಮುಂಗಾರು ಮಳೆ" ಸಿನೇಮಾ ನಡಿತು..
ಸುಮಾರು 100 ಜನರು ನೋಡಿದರು.. ಅದರಲ್ಲಿ 10 ಜನ ಜರ್ಮನಿಯರು ಇದ್ದರಂತೆ... ನೋಡಿ ಖುಷಿ ಪಟ್ಟರಂತೆ...
ಇದನ್ನ ಏರ್ಪಡಿಸಿದ್ದು ನನ್ನ ಜೊತೆಗೆಲಸಗಾರ ಗೆಳೆಯರು..
ಇದು ಜರ್ಮನಿಯಲ್ಲೇ ಮೊದಲಬಾರಿ ಒಂದು ಕನ್ನಡ ಸಿನೆಮಾದ commercial ಪ್ರದರ್ಶನ.

ಆದರೆ ಇಷ್ಟಾದರೆ ಮಾತ್ರ ಕನ್ನಡಗಿರು ಒಂದುಗೂಡಿ ಬಾಳ್ತಿದ್ದಾರೆ ಎಂದಲ್ಲ... ಅವರು ಹರಿದು ಹಂಚಿ ಹೋಗಿದ್ದಾರೆ...
ಒಬ್ಬರಿಗೊಬ್ಬರ ನೆರವು ಸಿಗೋದಿಲ್ಲ...

ಇದಕ್ಕಾಗೆ ಒಂದು ವಿದೇಷದಲ್ಲಿಕನ್ನಡಿಗ ಅನ್ನುವ ಒಂದು ವೆಬ್ ತಾಣವನ್ನು ತಂದು.. ಅದರಲ್ಲಿ ಹೊರದೇಶಗಳಿಗೆ ಭೇಟಿನೀಡುವ ಇಲ್ಲವೇ ಅಲ್ಲಿಯೇ ನೆಲೆಸುತ್ತಿರುವ ಕನ್ನಡಿಗರ ಒಂದು Database ತಾಣ ಇದಾಗ ಬೇಕು ಎಂದು ನನ್ನಾಸೆ..
ಇದರಿಂದ ತಾವು ಹೋಗುತ್ತಿರುವ ದೇಶದಲ್ಲಿ ಕನ್ನಡಿಗರೆಷ್ಟು ಜನರಿದ್ದಾರೆ.. ಅವರನ್ನು ಹೇಗೆ ಭೇಟಿಯಾಗಬೇಕು..? ಎಂದೆಲ್ಲ ಮಾಹಿತಿ ಒಟ್ಟಗಿ ಸಿಗುದಲ್ಲವೆ..
ಅದರ ರೂಪುರೇಷೆ... ಮನಸ್ಸಿನಲ್ಲಿ ಸಿದ್ಧವಾಗಿದೆ.. ನೋಡೋಣ ಏನಾಗುತ್ತೆ ಅಂತ..
ಬೆಂಗಳೂರಿಗೆ ಬಂದ ನಂತರ ಇದರಬಗ್ಗೆ ಕೆಲಸ ಸುರು ಹಚ್ಚಿಕೊಳ್ಳುತ್ತೇನೆ..
ಯಾರಾದರೂ ಸಹಾಯ ಮಾಡಬಲ್ಲಿರಾದರೆ ಕೈ ನೀಡಬಲ್ಲಿರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet