ಹಚ್ಚೇವು ಕನ್ನಡದ ದೀಪ
ಸಂಪದಕ್ಕೇನಾಯಿತು? ಎಂದು ಎಲ್ಲರೂ ಕೇಳುವವರೆ. ಕಳೆದ ವಾರ 'ಸಂಪದ'ಕ್ಕೆ ರಾಲರ್ ಕೋಸ್ಟರ್ ರೈಡು. ಸರ್ವರಿನಲ್ಲಿ ಹೊಸ ಬ್ಯಾಕಪ್ ಸವಲತ್ತು ಮತ್ತೊಂದು ಇನ್ನೊಂದು ಎನ್ನುತ್ತ ಸಂಪದ ವಾರದ ನಡುವೆ ಒಂದು ದಿನ ಕೆಲ ಗಂಟೆಗಳ ಕಾಲ ಲಭ್ಯವಿರಲಿಲ್ಲ. ಶನಿವಾರ ಸರ್ವರ್ ಈಗಿರುವ ಕೆನಡಾದ ಡೇಟ ಸೆಂಟರಿನಲ್ಲಿ ಕರೆಂಟು ಸಪ್ಲೈ ಎಡವಟ್ಟಾಗಿ ಸುಮಾರು ಹೊತ್ತು ಲಭ್ಯವಾಗದೇ ಹೋಯಿತು.
ಸಂಪದ ಪ್ರಾರಂಭವಾಗಿ ಈಗಾಗಲೇ ಐದು ವರ್ಷಗಳೇ ಆಗಿಹೋದುವು! ಎಷ್ಟು ಬೇಗ ಕಳೆದು ಹೋಗುತ್ತದೆ ಸಮಯ! ಸಂಪದ ಪ್ರಾರಂಭಿಸಿದ ಹಂತದಲ್ಲಿ ನನ್ನ ಜೊತೆ ನೀಡಿದ ನನ್ನ ಸ್ನೇಹಿತರೊಬ್ಬರೊಂದಿಗೆ ಕೆಲವು ವಾರಗಳ ಹಿಂದೆ ಮಾತನಾಡುತ್ತಿದ್ದೆ - "ಅಲ್ರೀ, ಐದು ವರ್ಷ ಹೇಗೆ ನಡೆಸಿಕೊಂಡು ಬಂದೆವು ಅನ್ನೋದೇ ಆಶ್ಚರ್ಯದ ವಿಷಯ ಅಲ್ವ?" ಎಂದರು. ನಿಜ, ಕನ್ನಡ ಓದು ಬರಹದ ಹವ್ಯಾಸದಿಂದ ಏನೋ ಮಾಡಲು ಹೋಗಿ ಆ ಸಮಯ ಕೇವಲ ಆಕಸ್ಮಿಕವಾಗಿ ಸೃಷ್ಟಿಯಾದ ಈ ಸಮುದಾಯ ತಾಣ ಈಗ ಬಹು ವಿಸ್ತಾರದ ಕನ್ನಡಿಗರ ಸಮುದಾಯವಾಗಿ ಬೆಳೆದಿದೆ. ಬೆಳೆಯುತ್ತ ಬೆಳೆಯುತ್ತ ಕ್ರಮೇಣ ಇದನ್ನು ಪ್ರಾರಂಭಿಸಿ, ನಡೆಸಿಕೊಂಡು ಬಂದ ನನಗೆ ಅಡಿಗಡಿಗೆ ಹೊಸತಾದ ಗಂಭೀರ ಸವಾಲುಗಳನ್ನು ಒಡ್ಡುತ್ತ ಬಂದಿದೆ.
ಎರಡು ತಿಂಗಳ ಹಿಂದೆ ನನ್ನ ಮುಂದಿದ್ದದ್ದು ಇಂತಹುದೇ ಒಂದು ಸವಾಲು. ಸಮುದಾಯ ವಿಪರೀತ ವೇಗದಲ್ಲಿ ಬೆಳೆಯುತ್ತಲಿತ್ತು, ಆದರೆ ಇಲ್ಲಿರುವ ತಂತ್ರಾಂಶ ಈ ಬೆಳವಣಿಗೆಯನ್ನು ಹೊತ್ತೊಯ್ಯುವಷ್ಟು ಸಮರ್ಥವಾಗಿರಲಿಲ್ಲ. ಸಾಲದ್ದಕ್ಕೆ ಸಮುದಾಯದಲ್ಲಿ ಪ್ರಕಟವಾಗುತ್ತಿರುವ ಪುಟಗಳ ಮಾಡರೇಶನ್ ಮತ್ತೊಂದು ಸವಾಲು ತಂದೊಡ್ಡಿತು. ಆಗ ಮುಂಚಿನಂತೆ ಇದನ್ನೆಲ್ಲ ಸ್ವತಃ ತಲೆಗೆ ಹಾಕಿಕೊಂಡು ಕೆಲಸ ಮಾಡುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಕೆಲಸದ ಭಾರ ಹೆಚ್ಚಿತ್ತು. ಈ ಕೆಲಸ ನಾನೇ ಮಾಡುತ್ತೇನೆಂದು ಕುಳಿತೆನೆಂದರೆ ಇನ್ನು ಆಗುವುದಿಲ್ಲ ಎಂದು ಆಫೀಸಿನಲ್ಲಿ ನನ್ನೊಡಗೂಡಿ ಕೆಲಸ ಮಾಡುತ್ತಿರುವ ಇಬ್ಬರು ಸಹತಂತ್ರಜ್ಞರಿಗೆ ಇದರ ಕೆಲಸ ಒಪ್ಪಿಸಿದೆ. ಅಚ್ಚರಿಯ ವಿಷಯವೆಂದರೆ ಇಬ್ಬರೂ ಕನ್ನಡಿಗರಲ್ಲ! ಇಬ್ಬರೂ ತಮ್ಮ ಬಿಡುವಿನ ಸಮಯದಲ್ಲಿ ಶ್ರಮ ಪಟ್ಟು ಸಂಪದಕ್ಕೆ ಹೊಸ ರೂಪ ತರುವ ನನ್ನ ಕನಸನ್ನು ತಾವೂ ಗ್ರಹಿಸುವ ಶತಪ್ರಯತ್ನ ಮಾಡುತ್ತ ಇಲ್ಲಿನ ಒಂದಷ್ಟು ಕೆಲಸ ಪೂರ್ಣಗೊಳಿಸಿದ್ದಾರೆ.
ಇನ್ನೂ ಕೆಲಸ ಮುಂದುವರೆದಿದೆ. ಬರುವ ದಿನಗಳಲ್ಲಿ ಸಂಪದದಲ್ಲಿ ಹಂತ-ಹಂತಗಳಲ್ಲಿ ಕೆಲವು ಬದಲಾವಣೆಗಳಾಗಲಿವೆ. ಈ ಸಮಯ 'ಕೆಲಸ ಮಾಡುತ್ತಿಲ್ಲದ' ಫೀಚರುಗಳ ಕುರಿತು ಇಲ್ಲೇ ಚರ್ಚೆ ಮಾಡುವುದಕ್ಕಿಂತ mail@sampada.netಗೆ ಒಂದು ಇ-ಮೇಯ್ಲ್ ಕಳುಹಿಸುವುದು ಉತ್ತಮ. ಆದರೆ ಈಗಲೂ ನಿತ್ಯ ಬರುತ್ತಿರುವ ಹತ್ತಾರು ಇ-ಪತ್ರಗಳನ್ನು ನೋಡಿ ಉತ್ತರಿಸಲು ಯಾರೂ ಇಲ್ಲದ ಕಾರಣ ಉತ್ತರ ತಲುಪದಿದ್ದಲ್ಲಿ ಅರ್ಥ ಮಾಡಿಕೊಳ್ಳುವಿರಿ ಎಂದು ತಿಳಿದುಕೊಳ್ಳುತ್ತೇನೆ. ಬದಲಾವಣೆಗಳನ್ನು ಸಾವಧಾನದಿಂದ, ಪ್ರೀತಿಯಿಂದ ಹಾಗೂ ಒಂದಷ್ಟು ಲಿಬರಲ್ ಆಗಿ ಸ್ವೀಕರಿಸುವಿರೆಂಬ ವಿಶ್ವಾಸ ನನಗಿದೆ.
ಖುದಾಹಾಫೆಸ್ ಹೇಳುವ ಮುನ್ನ:
- ಸಂಪದದ ಅಧಿಕೃತ ಪುಟ ಈಗ ಫೇಸ್ ಬುಕ್ಕಿನಲ್ಲಿ ಲಭ್ಯವಿದೆ. ನೀವೂ ಫೇಸ್ ಬುಕ್ಕಿನಲ್ಲಿದ್ದಲ್ಲಿ ಈ ಪುಟಕ್ಕೆ ತೆರಳಿ 'like' ಬಟನ್ ಕ್ಲಿಕ್ ಮಾಡುವ ಮೂಲಕ ಸಂಪದ ಕುರಿತ ಅಪ್ಡೇಟುಗಳನ್ನು ನಿಮ್ಮ ಫೇಸ್ ಬುಕ್ ಅಕೌಂಟಿನಲ್ಲಿ ಓದಬಹುದು.
- ಸಂಪದದ ಹೊಸ ರೂಪ ತರುವ ಪ್ರಯತ್ನದಲ್ಲಿ ನೀವೂ ಭಾಗಿಯಾಗಬಹುದು! ಆಸಕ್ತ ಸ್ವಯಂ ಸೇವಕರ ನೆರವಿನ ಅಗತ್ಯವಿದೆ. ಆಸಕ್ತರು mail@sampada.net ಗೆ ಇ-ಪತ್ರ ಕಳುಹಿಸಿ.
Comments
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
In reply to ಉ: ಹಚ್ಚೇವು ಕನ್ನಡದ ದೀಪ by MADVESH K.S
ಉ: ಹಚ್ಚೇವು ಕನ್ನಡದ ದೀಪ
In reply to ಉ: ಹಚ್ಚೇವು ಕನ್ನಡದ ದೀಪ by ಗಣೇಶ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
ಉ: ಹಚ್ಚೇವು ಕನ್ನಡದ ದೀಪ
In reply to ಉ: ಹಚ್ಚೇವು ಕನ್ನಡದ ದೀಪ by Chikku123
ಉ: ಹಚ್ಚೇವು ಕನ್ನಡದ ದೀಪ