ನಾಡಿಗರಿಗೆ ಈ ಐಡಿಯಾ ಬಂದದ್ದು ಹೇಗೆ ಗೊತ್ತಾ
ಬೆಳಗ್ಗೆನೇ ನಾಡಿಗರು ಪೋನ್ ಮಾಡಿದ್ರು. ಕೋಮಲ್ ಸಂಪದವನ್ನು ಹೊಸ ಮಾದರಿಯಲ್ಲಿ ಮಾಡಬೇಕು ಅಂತಾ ಇದೀನಿ. ನಿಮಗೆ ಏನಾದ್ರೂ ಹೊಸಾ ಐಡಿಯಾ ಇದ್ರೆ ಹೇಳಿ ಅಂದ್ರು. ಸಾ ನಾನು ಪೆದ್ದ, ಇದರ ಬಗ್ಗೆ ನಂಗೇನೂ ಗೊತ್ತಾಗಕ್ಕಿಲ್ಲ ಅಂದೆ. ಅದೂ ನನಗೂ ಗೊತ್ತು. ಹಳ್ಳಿಯವರಿಗೆ ಏನು ಇಷ್ಟ ಅಂತ ತಿಳಿದುಕೊಳ್ಳಕ್ಕೆ ಪೋನ್ ಮಾಡಿದೆ. ಸರಿ ನಾಳೆ ನಿಮ್ಮ ಹಳ್ಳಿಗೆ ಬರ್ತೀನಿ. ನಿಮ್ಮ ವಾಸನೆ ಗೌಡಪ್ಪನ ಮನೇಲಿ ಎಲ್ಲಾ ಸೇರೋಣ ಅಂದ್ರು.
ಸರಿ ಬೆಳಗ್ಗೆನೇ ನಾಡಿಗರು ಬಂದ್ರು. ಜೊತೆಗೆ ಕಾರ್ಯ ನಿರ್ವಾಹಕ ತಂಡದೋರು ಒಂದು 20ಜನ ಬಂದ್ರು, ಗೌಡನ ಹೆಂಡರು ಬಸಮ್ಮ ಸಿಡಿ ಸಿಡಿ ಮಾಡ್ತಿದ್ಲು. ಯಾಕವ್ವಾ, ಏ ನಾನು ನಾಡಿಗರು ಒಬ್ಬರೇ ಬರ್ತಾರೆ ಅಂತಾ ಸ್ವಲ್ಪ ಉಪ್ಪಿಟ್ಟು ಮಾಡಿದ್ದೆ. ಈಗ ಈಟೊಂದು ಜನ ಬಂದಾವ್ರಲ್ಲಾ ಅಂತು. ಅದಕ್ಕೆ ಯಾಕ್ಯಮಿ ಸಿಂತೆ ಮಾಡ್ತೀಯಾ. ಉಳಿದೋರಿಗೆ ನಿನ್ನೆ ಮಾಡಿದ್ದು ಅವಲಕ್ಕಿ ಕಾಯಿತುರಿ ಬೆಲ್ಲ ಕೊಡು ಅಂದ ಗೌಡಪ್ಪ. ಪಾಪ ಅದನ್ನ ಅಗಿಯಕ್ಕೆ ಆಗದೆ ನಿರ್ವಾಹಕ ತಂಡದೋರು ಮಧ್ಯ ನೀರು ಕುಡಿತಾ ರಾಗಿ ಮಿಸನ್ ತರಾ ಸಣ್ಣಗೆ ಮಾಡಿ ನುಂಗ್ತಾ ಇದ್ರು. ಅದ್ರಾಗೆ ಇದ್ದ ಪ್ರದೀಪ ಏನಲಾ ಇದು. ಹೊಟ್ಟೆ ತುಂಬೈತೆ. ಮಧ್ಯಾಹ್ನ ಊಟ ಬೇಡ ಅಂದ್ರು. ಏ ಅದೆಂಗ್ ಆಯ್ತದೆ. ನಿಮಗೋಸ್ಕರ ತಿಳಿಸಾರು ಸೊಸೈಟಿ ಅಕ್ಕಿ ಅನ್ನ ಅಂಗೇ ನೀರು ಮಜ್ಜಿಗೆ ಮಾಡಿಸೀವ್ನಿ. ಸ್ವೀಕರಿಸಿ ಹೋಗಲೇ ಬೇಕು ಅಂದ ಗೌಡಪ್ಪ. ನಿರ್ವಾಹಕ ತಂಡದೋರು ಅಂಗೇ ನಾಡಿಗರನ್ನ ನೋಡಿ ಹಲ್ಲು ಕಡಿಯೋರು. ಯಾಕ್ರಪ್ಪಾ. ಭಾನುವಾರ ಅಂತಾ ಊರ್ನಾಗೆ ಅರಾಮಾಗೆ ಇರುತಿದ್ವಿ ಅನ್ನೋರು.
ಸರಿ ನಾಡಿಗರು ನಿಮ್ಮ ಐಡಿಯಾ ಹೇಳ್ರಿ ಅಂದ್ರು. ಮೊದಲು ಗೌಡಪ್ಪ ಸುರು ಹಚ್ಕಂಡ. ನೋಡಿ ಸಾ, ಸಂಪದ ತೆಗಿತಿದ್ದಾಗೆನೇ ಮೊದಲು ಧರ್ಮಸ್ಥಳ ಮಂಜುನಾಥನ ಪೋಟೋ ಬರಬೇಕು. ಹಿಂದುಗಡೆ ನಮೋ ವೆಂಕಟೇಸ ಹಾಡು ಬರಬೇಕು. ಆಮ್ಯಾಕೆ ಎರಡೂ ಬದಿ ಊದಬತ್ತಿ ಉರಿಬೇಕು. ಇದಾದ ಮ್ಯಾಕೆ ಸಾ ನಿಮ್ಮ ಪೋಟೋ. ಹಿಂದುಗಡೆ ಹಾಡು. ಜಾಕಿ ಚಿತ್ರದ್ದು, ಶಿವಾ ಅಂತಾ ಹೋಗುತ್ತಿದ್ದೆ ರೋಡಿನಲಿ, ಆಮ್ಯಾಕೆ ಲೇಖನಗಳು ಬರಬೇಕು ಅಂದ ಗೌಡಪ್ಪ. ಲೇ ನಾವೇನು ವೀರೇಂದ್ರ ಹೆಗ್ಗಡೆಯವರ ಡಾಕ್ಯುಮೆಂಟರಿ ಮಾಡ್ತಾ ಇದೀವಾ ಅಂದ ಸುಬ್ಬ. ಅದಿರಲಿ ನೀವು ಹೇಳಿದ್ದು ಇಷ್ಟೆಲ್ಲಾ ಆಗೋ ಹೊತ್ತಿಗೆ ನಮ್ಮ ಹಳ್ಳಿಲ್ಲಿ ಇರೋ ಇಂಟರ್್ನೆಟ್ ಕನೆಕ್ಸನ್ ಹೋಗಿರ್ತದೆ ಅಂದ.
ಸರಿ ಕಿಸ್ನ ನೀನು ಹೇಳಲಾ. ಸಾ ಕಂಪೂಟರ್ ಓಪನ್ ಆಯ್ತಿದ್ದಂಗೆನೇ ಕಾಡು ಬರಬೇಕು. ಕಾಡು ಕಡಿದು ನಾಡು ಉಳಿಸಿ ಅಂತಾ ಲೈನ್ ಬರಬೇಕು. ಹಿಂದಗಡೆ ಗಂಧದ ಗುಡಿ ಹಾಡು. ಅಂಗೇ ಎಣ್ಣೆ ಬಾಟಲಿಗಳನ್ನು ತೋರಿಸಬೇಕು. ಕೆಳಗೆ ಕುಡಿದು ಅರಾಮಾಗಿ ಮಲಗಿ ಅಂತ. ಹೆಂಗೈತೆ ಅಂದು ಎರಡೇ ನಿಮಿಸಕ್ಕೆ ಕಿಸ್ನನ್ನ ಮೂಗು ಬಾಯಲ್ಲಿ ರಕ್ತ. ನಿರ್ವಾಹಕ ತಂಡದೋರು ಸಾನೇ ಹೊಡೆದಿದ್ರು. ಯಾಕ್ ಸಾ. ಲೇ ನಾವೇನು ಮಲ್ಯನ ಕಡೆಯೋರು ಅಂದ್ಕಂಡ್ಯಾ ಅಂತ.
ಸರೀ ನಿಂಗ ನೀನು ಹೇಳಲಾ. ಸಾ ಒಂದು ಹಳ್ಳಿ ಹಳ್ಳಿ ತಕ್ಕಂಗೆ ಎಲ್ಲಾದ್ರೂ ಪೋಟೋ ಅಂಗೇ ಅಡ್ರೆಸ್ಸ್ ಬರಬೇಕು. ಆಮ್ಯಾಕೆ ಅವರ ಆಸ್ಥಿ ವಿವರ, ಆಮ್ಯಾಕೆ ಲೇಖನ ಬರಲಿ ಅಂದ. ಲೇ ನೀನೇನು ನಮ್ಮನ್ನ ಲೋಕಾಯುಕ್ತಕ್ಕೆ ಹಿಡಕೊಡಬೇಕು ಅಂತ ಇದೇಯನಲಾ ಅಂದ ಗೌಡಪ್ಪ. ಅಟ್ಟೊತ್ತಿಗೆ ನಾಡಿಗರು ಸಿಟ್ಟಾಗಿ ಬೆವರ್ತಾ ಇದ್ರು. ಯಾಕ್ ಸಾ. ಅಂಗಂತಿದ್ದಾಗೆನೇ ನಿರ್ವಾಹಕ ತಂಡದೋರಿಗೆ ಸಾನೇ ಹೊಡೆದ್ರು. ಯಾಕ್ ಸಾ. ನಿಮಗೆ ಹೊಡೆಯೋಕ್ಕೆ ಆಗಲ್ವಲಾ ಅದಕ್ಕೆ. ಸರಿ ನೆಕ್ಸ್ಟ್ ಯಾರ್ರೀ.
ಸಾ ನಾನು ಅಂದ ಸುಬ್ಬ. ನೋಡಿ ಸಾ ಬೇಳಗ್ಗೆ ತೆಗೆದರೆ ಕೆರೆತಾವ ಹೋಗೋದು ತೋರಿಸಬೇಕು. ಅದ್ರಾಗೂ ಹಿತ್ತಾಳೆ ಚೊಂಬೇ ಇರಬೇಕು. ಮಧ್ಯಾಹ್ನ ತೆಗೆದರೆ ಊಟ ಮಾಡೋದು ತೋರಿಸಬೇಕು. ಆಮ್ಯಾಕೆ ಸಂಜೆತಾವ ಚಾ ಕುಡಿಯದು ಅಂತಿದ್ದಾಗೆನೇ ಲೇ ಇವರನೇ ಹೋಟಲ್ಲು ಮಡಗಬೇಕನ್ಲಾ ಸರಿಯಾಗಿ ಹೇಳ್ರಲಾ ಅಂದ ಗೌಡಪ್ಪ. ಬಸಮ್ಮ ನಾನು ಹೇಳ್ತೀನಿ ಅಂತು. ನೋಡಕ್ಕೆ ನೀನು ಸಣ್ಣ ಹಿಡಂಬಿ ಇದ್ದಂಗೆ ಇದೀಯಾ. ಏನು ಹೇಳವಾ ಅಂದ್ರು ನಾಡಿಗರು. ಅದು ರಾಮಾಣ್ಯ ಕಥೆ ಹೇಳಿತ್ತು. ಬೆಳಗ್ಗೆ 10ಕ್ಕೆ ಕೂತೋರು ಸಂಜೆ 6ಆದ್ರೂ ಎಲ್ಲಾವೂ ಬರೀ ಚಂಗೂಲಿ ಐಡಿರಿಯಾನೇ ಕೊಡ್ತಾ ಇದ್ವು. ಸರಿ ಕೋಮಲ್ ಬನ್ರೀ ಇಲ್ರಿ. ಯಾಕ್ ಸಾ,. ನಮ್ಮ ವ್ಯಾನ್ ಬಾಡಿಗೆ. ಅಂಗೇ ಕೆಟ್ಟ ಊಟ ತಿಂಡಿ ತಿಂದು ನಮ್ಮ ಹೊಟ್ಟೆ ಹಾಳಾಗೈತೆ. ಇದಕ್ಕೆ ಅಂತಾ ಎಲ್ಲಾ ಸೇರಿ 10ಸಾವಿರ ಕೊಡಿರಿ ಅಂದ್ರು ಹೋದ್ರು. ನಿರ್ವಾಹಕ ತಂಡದೋರು ಸಿಟ್ಟಾಗಿ ನೀನೇನಾದ್ರೂ ಹೊಸಾ ಲೇಖನ ಸೇರಿಸು ನಾವೇ ಯಾರಿಗೂ ಗೊತ್ತಾಗದ ಹಾಗೇ ಬ್ಲಾಕ್ ಮಾಡ್ತೀವಿ ಅಂದ್ರು ಕಿಸ್ನಂಗೆ.
ಈಗ ಸಂಪದ ಹೊಸದಾಗೈತೆ. ನೋಡಲಾ ನಾನು ಕೊಟ್ಟ ಐಡಿಯಾನ್ನೇ ನಾಡಿಗರು ಬಳಸಿಕೊಂಡವ್ರೆ ಅಂತ ಹೇಳ್ತವ್ನೆ, ಹೆಂಗ್ರಿ ಅಂದ್ರೆ ಅಲ್ಲಿ ಇರೋ ಡಿಸೈನ್ ಎಲ್ಲಾ ಸೇರಿಸು ಧರ್ಮಸ್ಥಳ ಮಂಜುನಾಥ ಆಯ್ತದೆ ಅಂತಾನೆ ಬಡ್ಡೆ ಐದ.
Comments
ಉ: ನಾಡಿಗರಿಗೆ ಈ ಐಡಿಯಾ ಬಂದದ್ದು ಹೇಗೆ ಗೊತ್ತಾ
ಉ: ನಾಡಿಗರಿಗೆ ಈ ಐಡಿಯಾ ಬಂದದ್ದು ಹೇಗೆ ಗೊತ್ತಾ
ಉ: ನಾಡಿಗರಿಗೆ ಈ ಐಡಿಯಾ ಬಂದದ್ದು ಹೇಗೆ ಗೊತ್ತಾ
ಉ: ನಾಡಿಗರಿಗೆ ಈ ಐಡಿಯಾ ಬಂದದ್ದು ಹೇಗೆ ಗೊತ್ತಾ
In reply to ಉ: ನಾಡಿಗರಿಗೆ ಈ ಐಡಿಯಾ ಬಂದದ್ದು ಹೇಗೆ ಗೊತ್ತಾ by ಗಣೇಶ
ಉ: ನಾಡಿಗರಿಗೆ ಈ ಐಡಿಯಾ ಬಂದದ್ದು ಹೇಗೆ ಗೊತ್ತಾ