ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಅಂದದ ಚೆಂದದ ಚೆಲುವಾದ ಕನ್ನಡನಾಡ..
ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ..
ಮಂಜೀರಾ ನದಿ ಪ್ರವಹಿಸುತ್ತಿರುವ ನಮ್ಮ ಬೀದರವ ನೋಡಿ.
ಶರಣ ಬಸವೇಶ್ವರರ ಸನ್ನಿಧಿಯಿರುವ ಗುಲ್ಬರ್ಗವ ನೋಡಿ..
ಗೋಲ ಗುಮ್ಮಟವಿರುವ ಬಿಜಾಪುರವ ನೋಡಿ.
ಬಾದಾಮಿ ಐಹೊಳೆಯ ಬಾಗಲಕೋಟೆ ನೋಡಿ..
ಗಡಿನಾಡು ಬೆಳಗಾವಿಯ ಉಳಿಸೋಣ ಬನ್ನಿ..
ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಅಂದದ ಚೆಂದದ ಚೆಲುವಾದ ಕನ್ನಡನಾಡ..
ರಾಯರು ನೆಲೆಸಿದ್ದ ಬಿಚ್ಚಾಲೆಯಿರುವ ರಾಯಚೂರು..
ಬಾಯಲ್ಲಿ ನೀರೂರಿಸುವ ಪೇಡಾ ದ ಧಾರವಾಡ..
ಕುಮಾರವ್ಯಾಸನ ನೆಲೆವೀಡಾದ ಗದಗವ ನೋಡಬನ್ನಿ...
ಕೋಟೆ ಕೊತ್ತಲಿನ ಕೊಪ್ಪಳವ ನೋಡ ಬನ್ನಿ..
ಸಹ್ಯಾದ್ರಿ ಮೈಚಾಚಿ ನಿಂತಿರುವ ಉತ್ತರ ಕನ್ನಡ.
ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಅಂದದ ಚೆಂದದ ಚೆಲುವಾದ ಕನ್ನಡನಾಡ..
ಸಿದ್ದೇಶ್ವರ ದೇಗುಲದ ಖ್ಯಾತಿಯ ಹಾವೇರಿ..
ಬಯಲುಸೀಮೆಯ ಬಯಲುನಾಡು ಈ ಬಳ್ಳಾರಿ..
ಘಮಘಮಿಸುವ ಬೆಣ್ಣೆದೋಸೆಯ ದಾವಣಗೆರೆ.
ವೀರವನಿತೆ ಓಬವ್ವನ ಕುರುಹಾಗಿ ನಿಂತಿರುವ ಚಿತ್ರದುರ್ಗ..
ಪ್ರಕ್ರುತಿಮಾತೆಯ ಮಡಿಲಲ್ಲಿರುವ ಶಿವಮೊಗ್ಗ..
ಶ್ರೀಕ್ರಿಷ್ಣ ದರುಶನವ ನೀಡುತ ನಿಂತಿರುವ ಉಡುಪಿಯಲ್ಲಿ..
ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಅಂದದ ಚೆಂದದ ಚೆಲುವಾದ ಕನ್ನಡನಾಡ..
ಚಹಾ ಕಾಫಿ ತೋಟಗಳ ಚಿಕ್ಕಮಗಳೂರು...
ತಣ್ಣನೆ ಎಳನೀರು ನೀಡುವ ತುಮಕೂರು..
ದೇಗುಲಗಳ ಆಗರ ಈ ದಕ್ಷಿಣ ಕನ್ನಡ..
ಬೇಲೂರು ಹಳೇಬೀಡು ಗೊಮ್ಮಟನ ಹಾಸನ..
ವೀರ ಯೋಧರ ಭೂಮಿ ನಮ್ಮೀ ಕೊಡಗು ಭೂಮಿ..
ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಅಂದದ ಚೆಂದದ ಚೆಲುವಾದ ಕನ್ನಡನಾಡ..
ಸಕ್ಕರೆ ಬೆಲ್ಲದ ತವರೂರು ನಮ್ಮ ಮಂಡ್ಯ..
ಸಾಂಸ್ಕ್ರುತಿಕ ನಗರಿ ಅರಸರ ನಾಡು ಈ ಮೈಸೂರು..
ಕಾನನಗಳ ಗಡಿನಾಡು ಚಾಮರಾಜನಗರ..
ಚಿನ್ನದ ನಾಡು ನಮ್ಮ ಈ ಕೋಲಾರ..
ಅಂದದ ಚೆಂದದ ಉದ್ಯಾನನಗರಿ ಈ ಬೆಂಗಳೂರು..
ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಅಂದದ ಚೆಂದದ ಚೆಲುವಾದ ಕನ್ನಡನಾಡ..
Comments
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
In reply to ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ by prasannasp
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
In reply to ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ by srimiyar
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
In reply to ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ by santhosh_87
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
In reply to ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ by Indushree
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
In reply to ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ by kamath_kumble
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
In reply to ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ by ಗಣೇಶ
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
In reply to ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ by gopaljsr
ಉ: ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ