ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿ

ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿ

ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿಯನ್ನು ನಿಮಗೆ ನೀಡುವಲ್ಲಿ ತಡಮಾಡಿದ್ದಕ್ಕೆ ಕ್ಷಮೆ ಇರಲಿ .  ಸೆಪ್ಟೆಂಬರ್ ಮೂವತ್ತರಂದು ಈ ಪ್ರಶಸ್ತಿಗಳನ್ನು ನೀಡಲಾಯಿತು.  

ನಗು ಮೂಡಿಸಿ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು.  ಕಳೆದ ಬಾರಿಯ ಇಗ್ನೋಬಲ್ ಪ್ರಶಸ್ತಿ ವಿಜೇತರಿಗೆ ಈ ಬಾರಿಯ ನೋಬಲ್ ಪ್ರಶಸ್ತಿ ಸಂದಿದೆ ಎನ್ನುವ ಅಂಶ ನಿಮ್ಮ ಗಮನದಲ್ಲಿರಲಿ.

ಇದನ್ನು ಓದಿ, ನಕ್ಕು, ಚಿಂತನೆಗೆ ತೊಡಗಿಕೊಳ್ಳಿ.. ನಿಮಗೆ ಹಾಗೆನ್ನಿಸಿದರೆ


ಇಂಜಿನಿಯರಿಂಗ್  ಪ್ರಶಸ್ತಿ  :  ಕರೀನಾ ಅಸೆವೆಡೋ ಮತ್ತು ಅಗ್ನೆಸ್ ರೋಕಾ  ಲಂಡನ್ ಜೂಯಲಾಜಿಕಲ್  ಸೊಸೈಟಿ. ಮತ್ತು ಡಿಅನೆ ಗೆಂಡ್ರೋನ್ :  ನೀಲಿ ತಿಮಿಂಗಲಗಳ ಮೂಗಿನ ಸಿಂಬಳ ಸಂಗ್ರಹಿಸಲು ರಿಮೋಟ್ ಕಂಟ್ರೋಲ್ ಇರುವ ಹೆಲಿಕಾಪ್ಟರ್ ಬಳಸುವ ತಂತ್ರಜ್ನಾನ ರೂಪಿಸಿದ್ದಕ್ಕೆ.

ವೈದ್ಯಕೀಯ ಪ್ರಶಸ್ತಿ :  ಸೈಮೊನ್ ರೈಟ್ ವೆಲ್ಡ್  , ಅಮ್ಸ್ ಟರ್ ಡ್ಯಾಮ್ ವಿಶ್ವವಿದ್ಯಾನಿಲಯ. ಮತ್ತು ಇಲಿಯಾ ವ್ಯಾನ್ ಬೀಸ್ಟ್  ಟಿಲ್ಬರ್ಗ್ ವಿಶ್ವವಿದ್ಯಾನಿಲಯ  :  ರೋಲರ್ ಕೋಸ್ಟರ್ ಮೇಲಿನ ಪಯಣದಿಂದ ಅಸ್ತಮಾವನ್ನು ಗುಣಪಡಿಸಬಹುದೆಂಬ ಸಂಶೋಧನೆಗೆ

ಸಾರಿಗೆ ಯೋಜನೆ ಪ್ರಶಸ್ತಿ :  ತೊಷಿಯಾಕು ನಾಕಾಗಾಕಿ, ಅತ್ಸುಶಿ ಟೆರೋ, ಸೀಜಿ ಟಕಾಗಿ, ಟೆತ್ಸು ಸೈಗುಸಾ ,ಕೆಂಟಾರೋ ಇಟೋ, ಕೆಂಜಿ ಯೂಮಿಕಿ , ರಯೋ ಕೊಬಾಯಾಶಿ , ಡಾನ್ ಬೆಬ್ಬರ್, ಮಾರ್ಕ್ ಫ್ರಿಕರ್,  ಮರದ ಮೇಲೆ ಬೆಳೆಯುವ ಬೂಸ್ಟಿನ  ಮಾದರಿ ಅನುಸರಿಸಿ  ಅತ್ಯಂತ  ಲಾಭದಾಯಕವಾದ ರೈಲು ಮಾರ್ಗದ ಯೋಜನೆ ಹಾಕಬಹುದೆಂದು ತೋರಿಸಿಕೊಟ್ಟಿದ್ದಕ್ಕೆ

ಭೌತಶಾಸ್ತ್ರ ಪ್ರಶಸ್ತಿ: ಲಿಯಾನ್  ಪಾರ್ಕಿನ್, ಶೀಲಾ ವಿಲಿಯಮ್ಸ್  ಮತ್ತು ಪ್ಯಾಟ್ರಿಷಿಯಾ ಪ್ರೀಸ್ಟ್ , ಒಟಾಗೋ ವಿಶ್ವವಿದ್ಯಾನಿಲಯ ನ್ಯೂಜಿಲ್ಯಾಂಡ್.  : ಹಿಮದಾರಿಗಳಲ್ಲಿ  ನಡೆದಾಡುವ ಜನ ಚಳಿಗಾಲದಲ್ಲಿ ತಮ್ಮ ಶೂ ಮೇಲುಗಡೆ ಮತ್ತೊಂದು ಸಾಕ್ಸ್ ಧರಿಸಿದರೆ ಜಾರಿ ಬೀಳುವುದು ಕಮ್ಮಿಯಾಗುತ್ತದೆಂದು ತೋರಿಸಿಕೊಟ್ಟಿದ್ದಕ್ಕಾಗಿ .

ಶಾಂತಿ ಪ್ರಶಸ್ತಿ. ರಿಚರ್ಡ್ ಸ್ಟೀಫನ್, ಜಾನ್ ಅಟ್ಕಿನ್ಸ್ ಮತ್ತು ಆಂಡ್ರ್ಯೂ ಕಿಂಗ್ ಸ್ಟನ್,   ಕೀಲೆ ವಿಶ್ವವಿದ್ಯಾನಿಲಯ ,  ಹರಕೆ ಹೊರುವುದು ನೋವನ್ನು ಕಡಿಮೆ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆ ನಿಜ ಎಂದು ಪ್ರಮಾಣೀಕರಿಸಿದ್ದಕ್ಕಾಗಿ.

ಸಾರ್ವಜನಿಕ ಆರೋಗ್ಯ ಪ್ರಶಸ್ತಿ
:  ಮಾನ್ಯುಯೆಲ್ ಬಾರ್ಬಿಟೋ, ಚಾರ್ಲ್ಸ್ ಮಾಥ್ಯೂ, ಲಾರಿ ಟೈಲರ್ , ಮೇರಿಲ್ಯಾಂಡ್ ಅಮೆರಿಕಾ ಸಂಯುಕ್ತ ಸಂಸ್ಥಾನ . ಪ್ರಯೋಗದ ಮೂಲಕ ಬ್ಯಾಕ್ಟೀರಿಯಾಗಳು ಗಡ್ಡ ಬಿಟ್ಟ ವಿಜ್ಯಾನಿಗಳ ಗಡ್ಡದಲ್ಲಿರುತ್ತವೆ ಎಂದು ತೋರಿಸಿಕೊಟ್ಟಿದ್ದಕ್ಕಾಗಿ

ಅರ್ಥಶಾಸ್ತ್ರ ಪ್ರಶಸ್ತಿ:  ಗೋಲ್ಡ್ ಮ್ಯಾನ್ ಸಾಶ್,  ಎ ಐ ಜಿ, ಲೆಹ್ಮಾನ್ ಬ್ರದರ್ಸ್, ಬೀರ್ ಸ್ಟೀರ್ನ್ಸ್, ಮೆರಿಲ್ ಲಿಂಚ್, ಮತ್ತು ಮಾಗ್ನೇಟರ್ ನ ಉನ್ನತ ಅಧಿಕಾರಿಗಳು ಮತ್ತು ನಿರ್ದೇಶಕರುಗಳಿಗೆ,   ಲಾಭ ಹೆಚ್ಚು ಮಾಡಿ, ರಿಸ್ಕ್ ಕಡಿಮೆ ಮಾಡುವ ರೀತಿಯಲ್ಲಿ ಹಣ  ಹೂಡಿಕೆಯ ಹೊಸಬಗೆಗಳನ್ನು ಸಂಶೋಧಿಸಿದ್ದಕ್ಕೆ  

ರಸಾಯನ ಶಾಸ್ತ್ರ ಪ್ರಶಸ್ತಿ :  ಎರಿಕ್ ಅಡಮ್ಸ್ , ಸ್ಕಾಟ್ ಸೊಕೊಲೊಫ್ ಸ್ಕಿ  , ಸ್ಟೀಫನ್ ಮಸುಟಾನಿ  ಮತ್ತು ಬ್ರಿಟಿಷ್ ಪೆಟ್ರೋಲಿಯಮ್  : ನೀರು ಮತ್ತು ಪೆಟ್ರೋಲ್ ಬೆರೆಯುವುದಿಲ್ಲವೆನ್ನುವ ಹಳೆಯ ನಂಬಿಕೆ ಸುಳ್ಳೆಂದು  ತೋರಿಸಿದ್ದಕ್ಕೆ .

ಮ್ಯಾನೇಜ್ ಮೆಂಟ್ ಪ್ರಶಸ್ತಿ. ಅಲೆಸಾಂಡ್ರೋ ಪ್ಲುಚಿನೋ, ಆಂಡ್ರಿಯಾ  ರಾಪಿಸಾರ್ಡಾ ಮತ್ತು  ಸೆಸಾರೇ ಗಾರೋಫಾಲೋ , ಇಟಲಿ ,  ಸಂಸ್ಥೆಯೊಂದರಲ್ಲಿ  ಪ್ರಮೋಷನ್ ನೀಡಲು ಯಾವುದೇ ನೀತಿ  ಅನುಸರಿಸದೆ , ಸುಮ್ಮನೆ  ಪದೋನ್ನತಿ ನೀಡುವುದರಿಂದ ಸಂಸ್ಥೆಗಳ ಚಾಕಚಕ್ಯತೆ ಹೆಚ್ಚುತ್ತದೆ ಎಂದು ಗಣಿತೀಯವಾಗಿ ನಿರೂಪಿಸಿದ್ದಕ್ಕಾಗಿ

ಜೀವಶಾಸ್ತ್ರ ವಿಭಾಗ
: ಲಿಬಿಯವೋ ಝಾಂಗ್, ಮಿನ್ ಟಾನ್, ಝು, ಜಿಯಾನ್ ಪಿಂಗ್ ಯೆ, ತಿಯು ಹೋಂಗ್, ಶಾನ್ಯಿ ಝೂ, ಶುಯಿ  ಝಾಂಗ್, ಚೀನಾ ಮತ್ತು ಗರೆತ್ ಜೋನ್ಸ್,  ಬಾವಲಿಗಳ ಒಂದು ಬಗೆಯಲ್ಲಿ ಮುಖಮೈಥುನದಿಂದ ಮಿಥುನದ ಸಮಯ ಹೆಚ್ಚಾಗುತ್ತದೆಂಬ ಸಂಶೋಧನೆಗೆ

Rating
No votes yet

Comments