ದೀಪದ ಬೆಳಕಲ್ಲಿ ನಿನ್ನ ನೋಡಬೇಕಿದೆ

ದೀಪದ ಬೆಳಕಲ್ಲಿ ನಿನ್ನ ನೋಡಬೇಕಿದೆ

ಕವನ

 ಸಾಲು ದೀಪದ ಕನಸಲ್ಲಿ
ಒ೦ದಷ್ಟು ಹೊತ್ತು ಆಡೋಣ
ತೆಳ್ಳಗಿನ ದೀಪದ ಬೆಳಕಲ್ಲಿ
ನಾನು ನೀನು ಮಾತನಾಡಬೇಕಿದೆ
 ಕೆ೦ಪು ಹಳದಿ ಬಣ್ಣಗಳಲ್ಲಿ  ಮೂಡುವ ನಿನ್ನ
 ನಾಚಿಕೆಯನ್ನೊಮ್ಮೆ ನೋಡಲೇಬೇಕಿದೆ
ಉರಿವ ಹತ್ತಿಯ ಬತ್ತಿಯ ಜೊತೆಗೆ
ಮಡುಗಟ್ಟಿ ನಿ೦ತ ತೈಲದ ದೈವಿಕ
ವಾಸನೆಗೆ ನಾನು ನೀನು ಜೊತೆಯಾಗಬೇಕಿದೆ
 ಕೈ ಹಿಡಿಯದೆ, ಮೈ ಸೋಕದೆ
 ಕುಳಿತಷ್ಟೂ ಘಳಿಗೆಗಳು ನನ್ನದು ಮತ್ತು ನಿನ್ನದು
ನಗುವ ಕಣ್ಣುಗಳ ಜೊತೆಗೆ
ಹನಿಗೂಡಿದ ಆಕಾಶದೆಡೆಗೆ ಮುಖ ಮಾಡಿ
ಒ೦ದಷ್ಟು ಹೊತ್ತು ನಿಲ್ಲೋಣ
ಹೊತ್ತು ಸರಿದು ಹೋಗುತ್ತಿದೆ ಗೆಳತಿ
ಮನದಾಳದ ಮಾತುಗಳು ಕಣ್ಣಿನಲಿ
ಕ೦ಡರೂ ನಾನು ನಿನ್ನ ದನಿ ಕೇಳಬೇಕಿದೆ
ತುಟಿಯ೦ಚಿಗೆ ಕಾಣುವ ನಿನ್ನ
ಮೋಹಕ ಗುಳಿಯನ್ನು ನೋಡಬೇಕಿದೆ
ಬಾ ಗೆಳತಿ ದೀಪಗಳ ಬೆಳಕಿನಲ್ಲಿ
ಮನ ಬೆಳಕಾಗಿಸಿಕೊಳ್ಳೋಣ

Comments