ನಾಳೆ ನಮ್ಮೂರಲ್ಲಿ, ನಿಜವಾಗಿಯೂ ನೀವೇ ದೇವರು!

ನಾಳೆ ನಮ್ಮೂರಲ್ಲಿ, ನಿಜವಾಗಿಯೂ ನೀವೇ ದೇವರು!

ನಾಳೆ ನಮ್ಮೂರಲ್ಲಿ, ಹೌದು,  ನಿಜವಾಗಿಯೂ ನೀವೇ ದೇವರು!

 

ನಮ್ಮ ಕಷ್ಟ ಹೇಳಿಕೊಳ್ಳುವುದಕ್ಕೆ ಯಾವ ದೇವರು ಆದರೇನು?
ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?

ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರು ಉಂಟೇನು?
ನಾವು ಸಂಪಾದಿಸುವ ಹಣಕ್ಕೆ ಯಾವುದೇ ಜಾತಿ ಇದೆಯೇನು?

ಇಲ್ಲಿ ಹುಟ್ಟಿ ದೇವರು ಎನಿಸಿಕೊಂಡವರ, ಪೂಜಿಸುವವರೇ ಎಲ್ಲ,
ಆದರೆ ಅವರಾಡಿ ಹೋದ, ಮಾತನಿಂದು ಪಾಲಿಸುವವರೇ ಇಲ್ಲ;

ರಾಮ-ರಹೀಮ-ಕೃಷ್ಣ-ಯೇಸು, ಎಲ್ಲರದು ಆಗಿತ್ತಲ್ಲವೇ ಉಕ್ತಿ?
ಪ್ರೀತಿಯಿಂದ ಬಾಳಿದರೆ, ಅದುವೇ ದೇವರ ಮೇಲಿನ ನಿಜ ಭಕ್ತಿ;

ಯಾವ ದೇವರ ಪೂಜಿಸಿದರೂ ಬಡವರ ಬಡತನಕದು ಉತ್ತರವೇ?
ಮತ ಭೇದ ಇಲ್ಲದೆಯೇ ಬಡವರ ಉದ್ಧಾರ ನಿಜಕ್ಕೂ ಅಸಾಧ್ಯವೇ?

ಇವರ ಹೊಟ್ಟೆ ತುಂಬುವುದಕೆ ದಿನವೂ ಎರಡು ಹೊತ್ತಿನ ಊಟ,
ವಿದ್ಯಾವಂತರನ್ನಾಗಿಸಲು ಅವರ ಮಕ್ಕಳಿಗೆಲ್ಲಾ ಪುಕ್ಕಟೆ ಪಾಠ,

ನೀಡಿ, ನೋಡಿ, ನಿಮ್ಮನ್ನೇ ಪೂಜಿಸಲು ಆರಂಭಿಸುತ್ತಾರೆ ಇವರು,
ನಾಳೆ ನಮ್ಮೂರಲ್ಲಿ, ಹೌದು,  ನಿಜವಾಗಿಯೂ ನೀವೇ ದೇವರು!
***************

Rating
No votes yet

Comments