ನಾ ಕಂಡ ಸಂಪದ
ಈ ಲೇಖನದ ಎಲ್ಲಾ ಅಂಶಗಳು ನನ್ನ ಅಭಿಪ್ರಾಯವಾಗಿರುತ್ತದೆ , ಆದಷ್ಟು ನಿರ್ಧಾರಗಳನ್ನು ಕೊಡದಿರಲು ಪ್ರಯತ್ನ ಮಾಡಿರುತ್ತೇನೆ.
ಈ ಲೇಖನವನ್ನು ಬರೆಯುವ ಮುನ್ನ , ಬಹಳಷ್ಟು ಜಿಜ್ಞಾಸೆ ನನ್ನನ್ನು ಕಾಡಿದೆ, ಆ ಕಾಡುವಿಕೆಯ ಉತ್ತರವೇ ಈ ಲೇಖನ.
ನಾ ಕಂಡ ಸಂಪದ
ಸಾಹಿತ್ಯ ಕೃಷಿಗೆ ಎಂದೇ ವೇದಿಕೆಯಾದ ಸಂಪದ , ಹೊಗಳಿಕೆಯ ತಾಣವಾಗುತ್ತಿದೆ ಎಂಬುದು ನನ್ನ ಅನಿಸಿಕೆ, ಇದಕ್ಕೆ ಕಾರಣ ಸಂಪದದಲ್ಲಿ ಪ್ರಕಟಗೊಂಡ ಬಹುತೇಕ ಕಥೆಗಳು / ಕವಿತೆಗಳು / ಕವನಗಳು / ಪದ್ಯಗಳು ವಿಮರ್ಶೆಗೆ ಒಳಗಾಗದೆ ಬರೀ ಹೊಗಳಿಕೆಯ ಅಭಿಪ್ರಾಯಗಳಿಂದ ಕೂಡಿರುತ್ತವೆ. ಉದಾಹರಣೆಗೆ
ಚೆನ್ನಾಗಿದೆ
ಮನಸ್ಸಿಗೆ ಮುದ ನೀಡಿತು
ನಿಮ್ಮ ಕವಿತೆ ಕಣ್ಣೀರು ತರಿಸಿತು / ಕಣ್ಣುಗಳು ಒದ್ದೆಯಾದವು
ನಿಮ್ಮ ಕವಿತೆ ನನಗೆ ಅವರನ್ನು / ಇವರನ್ನು ನೆನಪಿಸಿತು
ಸ್ನೇಹಿತರೆ ಯೋಚಿಸಿ ಬರಹಗಾರನನ್ನು ಪ್ರೋತ್ಸಾಹಿಸುವ ಆತುರದಲ್ಲಿ , ಆ ಬರಹಗಾರನನ್ನು ತಪ್ಪಿನ ಹಾದಿಗೆ ದೂಡುತ್ತಿದ್ದೆವೆಯೇ.
ಯಾವುದೇ ಬರಹಗಾರ ಒಂದು ಕಥೆ / ಕವನ / ಕವಿತೆ / ಪದ್ಯ ಬರೆದಾಗ ಆದರ ವಿಮರ್ಶೆ ಖಂಡಿತ ಆಗತ್ಯ , ಅದರಲ್ಲಿನ ಬಾಷ ಪ್ರಯೋಗ , ಕವಿಯ ಅನಿಸಿಕೆ ಮತ್ತು ಉದ್ದೇಶಗಳು ವಿಮರ್ಶೆಯಾದಾಗ ಬರಹಗಾರನಿಗೂ ತನ್ನ ತಪ್ಪಿನ ಅರಿವಾಗಿ ಸಾಹಿತ್ಯ ಕೃಷಿ ಫಲವತ್ತಾಗುತ್ತದೆ .
ಈ ಮೇಲಿನ ಸಾಲುಗಳನ್ನು ಓದಿದ ಮೇಲೆ ಈ ಅನುಮಾನ ನಮ್ಮನ್ನು ಕಾಡುವುದು ಖಂಡಿತ " ಹೊಸ ಬರಹಗಾರರನ್ನು ಪ್ರೋತ್ಸಾಹಿಸುವುದು ತಪ್ಪೇ"
ಖಂಡಿತ ಇಲ್ಲ , ಪ್ರೋತ್ಸಾಹದ ಜೊತೆಗೆ ಹೊಸ ಬರಹಗಾರನಿಗೆ ಸಾಹಿತ್ಯದ ಹೊಸ ಮಜಲುಗಳನ್ನು ಪರಿಚಯಿಸುವುದು ಆಗತ್ಯವಾಗಿರುತ್ತದೆ, ಇಲ್ಲಿ ಬರೀ ಒಳ್ಳೆಯ ಪ್ರತಿಕ್ರಿಯೆ ನೀಡುವ ಮುಖಾಂತರ ಆಬರಹಗಾರನಿಗೆ ನಾವೆಲ್ಲರೂ ಸೇರಿ ತಪ್ಪು ದಾರಿ ತೋರಿಸುತ್ತಿದ್ದೇವೆ.
ಕೆಲ ಬರಹಗಾರರಿಗೆ ಸಾಹಿತ್ಯ ಬೆಳೆದು ಬಂದ ಹಾದಿಯು ತಿಳಿದಿರುವುದಿಲ್ಲ , ನವೋದಯ , ನವ್ಯ ಮತ್ತು ಬಂಡಾಯ ಈ ಪದಗಳೆಲ್ಲ ಒಂದು ರೀತಿಯ ಗ್ರೀಕ್ ಮತ್ತು ಲ್ಯಾಟಿನ್ ತರ ಕೇಳಿಸುತ್ತವೆ.
ಬರಹಗಾರ ಸ್ವಂತ ತತ್ವ ಅಥವಾ ವಿಚಾರಧಾರೆ ಇಲ್ಲದೆ ಬರೆದ ಬರಹಗಳು ಸುಂದರವಾದ ಅಕ್ಷರಗಳ ಜೋಡಣೆ ಅಥವಾ ಪದಗಳ ಜೋಡಣೆಯಾಗುತ್ತದೆ, ಇದನ್ನು ಸಾಹಿತ್ಯ ಎಂದು ಹೇಗೆ ಕರೆಯುವುದು.
ಕವಿಯ ಕಲ್ಪನೆ ಆಗಾಧ ಒಪ್ಪುತ್ತೇನೆ, ಕಲ್ಪನೆ ಎಷ್ಟೇ ಆಗಾಧವಾದರು ಸಾಹಿತ್ಯದ ಚೌಕಟ್ಟಿನಲ್ಲೇ ಮೂಡಬೇಕೇ ಹೊರತು ಬೇರೆ ಸಾಧ್ಯತೆಗಳೇ ಇರುವುದಿಲ್ಲ, ಆಗೊಂದು ವೇಳೆ ಇದ್ದಿದ್ದೆ ಆದರೆ ಅದು ಇವತ್ತಿನ ಸಾಹಿತ್ಯ ರಂಗದ ವಿಪರ್ಯಾಸ.
ಸಂಪದದಲ್ಲಿ ಬಂದ ಚರ್ಚಾ ವಿಷಯಗಳು ಮತ್ತು ಲೇಖನಗಳ ಮೇಲೆ ಬಹಳಷ್ಟು ಒಳ್ಳೆಯ ಚರ್ಚೆಗಳು ನಡೆದಿವೆ ಬಹಳ ಸಂತೋಷ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ , ಚರ್ಚೆ ಮತ್ತು ಲೇಖನಗಳು ಒಂದು ನಿರ್ದಿಷ್ಟ ವಿಷಯದ ಮೇಲೆ ಪರ ಮತ್ತು ವಿರೋದದ ಚರ್ಚೆಗಳು ಆರಂಭವಾಗುತ್ತವೆ, ಆದ್ದರಿಂದ ಇಲ್ಲಿ ನಮ್ಮ ನಂಬಿಕೆ, ತತ್ವ ಮತ್ತು ನಮ್ಮ ಜ್ಞಾನದ ಆಧಾರದ ಮೇಲೆ ಚರ್ಚೆಯಲ್ಲಿ ಪಾಲ್ಗೊಳಲು ಸಾಧ್ಯವಾಗುತ್ತದೆ.
ನನ್ನ ಕಳಕಳಿ , ಇಷ್ಟೆ ಆಳವಾದ ವಿಮರ್ಶೆಗಳು ಮತ್ತು ಚರ್ಚೆಗಳು ಕಥೆ / ಕವನ / ಪದ್ಯಗಳ ಮೇಲೆ ಏಕೆ ನಡೆಯುತ್ತಿಲ್ಲ , ಇದರಿಂದ ಸ್ಪಷ್ಟವಾಗಿ ಕಾಣುವ ಅಂಶವೆಂದರೆ ನಮ್ಮಗಳ ಸಾಹಿತ್ಯ ಜ್ಞಾನದ ಕೊರತೆ.
ಎಲ್ಲೋ ಓದಿದ ನೆನಪು , ಅಡಿಗರು ಒಮ್ಮೆ ಕೆ.ಎಸ್ .ಏನ್. ಒಬ್ಬ ಪ್ರಣಯ ಕವಿ ಅವನಿಂದ ಗಂಭೀರ ಚಿಂತನೆಯ ಕವನಗಳನ್ನು ಬರೆಯಲು ಸಾಧ್ಯವಿಲ್ಲ ಎಂದು ಜರಿಯುತ್ತಾರೆ , ಮುಂದಿನ ವಾರವೇ ಕೆ.ಎಸ್ .ಏನ್. ರವರು ಒಂದು ಗಂಭೀರ ಕವನವನ್ನು ಬರೆದು ಅಡಿಗರಿಗೆ ಅಂಚೆಯ ಮುಖಾಂತರ ಕಲಿಸುತ್ತಾರೆ ( ಕವನದ ಹೆಸರು ನೆನಪಿಗೆ ಬರುತ್ತಿಲ್ಲ), ಹೀಗೆ ವಿಮರ್ಶೆ ಮತ್ತು ಟೀಕೆಗಳು ಬರಹಗಾರನಿಗೆ ಸಾಹಿತ್ಯದ ಹೊಸ ಮುಖಗಳನ್ನು ಪರಿಚಯಿಸಬೇಕು " ಚೆನ್ನಾಗಿದೆ " ಎಂಬ ಪ್ರತಿಕ್ರಿಯೆ ಬರಹಗಾರನ ಹೊಸತನವನ್ನು ಸುಟ್ಟು ಹಾಕುತ್ತದೆ.
ಇವತ್ತಿನ ಜನಾಂಗದ / ಪೀಳಿಗೆಯ ಬಹು ದೊಡ್ಡ ಸಮಸ್ಯೆಯೆಂದರೆ ಏನನ್ನು ಓದಬೇಕು ಮತ್ತು ಯಾರನ್ನು ಓದಬೇಕು ಎಂಬ ಗೊಂದಲ ಬಹಳವಾಗಿ ಕಾಡುತ್ತಿದೆ, ಕಾರಣ ಪುಸ್ತಕಕಷ್ಟೇ ( syllabus ) ಸೀಮಿತವಾಗಿರುವ ಗುರುಗಳು , ನಮ್ಮ ಹಿಂದಿನ ಪೀಳಿಗೆಯ ಬರಹಗಾರರನ್ನು ಕೇಳಿ ನೋಡಿ , ಏನನ್ನು ಓದಬೇಕು , ಹೇಗೆ ಓದಬೇಕು ಮತ್ತು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ಗುರುಗಳು ಸ್ಪಷ್ಟವಾಗಿ ತಿಳಿಸುತ್ತಿದ್ದರು , ಎಷ್ಟೋ ಗುರುಗಳು ತಮ್ಮ ಶಿಷ್ಯರ ಸಾಹಿತ್ಯ ಕೃಷಿಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ನಿನಗೆ ಕವನದ ಬಾಷೆ ಒಲಿಯುತ್ತಿಲ್ಲ ನೀನು ಕಾದಂಬರಿಯನ್ನು ಪ್ರಯತ್ನಿಸು ಎಂದು ಹುರಿದುಂಬಿಸುತ್ತಿದ್ದರು. ಅದಕ್ಕಾಗೆ ನಮಗೆ ಇಂದಿಗೂ ಬೇಂದ್ರೆಯವರು ಅವರ ಕವಿತೆ ಗಳಿಗೆ ಇಷ್ಟವಾಗುತ್ತಾರೆ ಎಷ್ಟು ಜನಕ್ಕೆ ಗೊತ್ತಿದೆ ಬೇಂದ್ರೆಯವರು ಸಾಕಷ್ಟು ಪ್ರಭಂದ ಮತ್ತು ಕಥೆಗಳನ್ನು ಬರೆದಿದ್ದಾರೆ ಎಂದು.
ಇಲ್ಲಿ ಮತ್ತೊಂದು ಪ್ರಶ್ನೆ ಉಧ್ಬವವಾಗುತ್ತದೆ , ಬರಹಗಾರ ಯಾರಿಗೋಸ್ಕರ ಬರೆಯುತ್ತಾನೆ. ಎಷ್ಟೋ ಜನ ಹೇಳುವ ಹಾಗೆ ನಾನು ನನಗೋಸ್ಕರ ಬರೆಯುತ್ತೇನೆ ಎಂಬುದು ಹಸಿ ಸುಳ್ಳು , ತನಗೋಸ್ಕರ ಬರೆದರೆ ಪ್ರಕಟಿಸಬೇಕೆಂಬ ಹಂಬಲವೇಕೆ , ಪ್ರಕಟಿಸಿದ್ದನ್ನು ಜನ ಓದಲಿ ಎಂಬ ತವಕವೇಕೆ. ನಾನು ಏನು ಬರೆಯಬೇಕೆಂಬುದನ್ನು ಓದುಗ ಹೇಳಬೇಕಿಲ್ಲ ಎಂಬ ದಾಷ್ಟ್ರ್ಯ ತೋರಿದರೆ ಕಾಲಾಂತರದಲ್ಲಿ ಬರಹಗಾರ ಮತ್ತು ಅವನ ಬರಹ ಎರಡು ಕಣ್ಮರೆಯಾಗುತ್ತವೆ.
" ಎಲ್ಲಾ ಕೇಳಲಿ ಎಂದು ನಾನು ಹಾಡುವುದಿಲ್ಲ , ಹಾಡುವುದು ಅನಿವಾರ್ಯ ಕರ್ಮ ಎನಗೆ " ಬಹಳಷ್ಟು ಜನ ಇಲ್ಲಿ ಕವಿ ತನ್ನ ಕುರಿತೇ ಹೇಳಿದ್ದಾನೆ ಎಂದು ತಪ್ಪು ಭಾವನೆಯಲ್ಲಿದರೆ.
ಆ ಒಂದು ಕಾಲವಿತ್ತು ಬರೆದಿದ್ದನ್ನು ಗೆಳೆಯರಿಗೂ ತೋರಿಸಲು ಅಂಜುತ್ತಿದ್ದ ಕಾಲ, ಆ ಭಯ ಖಂಡಿತ ಒಳ್ಳೆ ಬರವಣಿಗೆಗೆ ಎಡೆ ಮಾಡಿ ಕೊಡುತ್ತಿತ್ತು, ಒಳ್ಳೆ ಬರಹ ಹೊರ ಹೊಮ್ಮಲು ಕಟು ಟೀಕೆ ಮತ್ತು ವಿಮರ್ಶೆಗಳ ಅನಿವಾರ್ಯ ಖಂಡಿತಇದೆ
ಸ್ನೇಹಿತರೆ ದಯವಿಟ್ಟು ಕಥೆ / ಕವನ - ಕವಿತೆ / ಪದ್ಯ ಗಳ ಮೇಲೆ ವಿಮರ್ಶೆ ಮತ್ತು ಟೀಕೆಗಳನ್ನು ಬರೆಯಿರಿ , ಬರಹಗಾರನಿಗೆ ಹೊಸ ಮಜಲುಗಳನ್ನು ಪರಿಚಯಿಸಿ.
"ಸಂಪದ ಒಳ್ಳೆ ಸಾಹಿತ್ಯದೊಂದಿಗೆ ಸಂಪದ್ಬರಿತವಾಗಲಿ "
ಸಂಪದದ ಹಿರಿಯ / ಕಿರಿಯ ಸಾಹಿತಿಗಳು , ಲೇಖಕರು , ಕವಿಗಳು ಮತ್ತು ಕವಿಯತ್ರಿಯರು ತಪ್ಪಿದ್ದರೆ ತಿಳಿಸುವಂತವರಾಗಬೇಕು.
Comments
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by asuhegde
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by asuhegde
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by asuhegde
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by asuhegde
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by asuhegde
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by asuhegde
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by partha1059
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by partha1059
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by partha1059
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by vani shetty
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by bhalle
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by ksraghavendranavada
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ - ಸಂಪಧ್ಬರಿತ ಸಂಪದ!
ಉ: ನಾ ಕಂಡ ಸಂಪದ
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by asuhegde
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ
In reply to ಉ: ನಾ ಕಂಡ ಸಂಪದ by raghusp
ಉ: ನಾ ಕಂಡ ಸಂಪದ