ದೆವ್ವ ಭೂತ ಇದೆಯಾ?
ಮೊನ್ನೆ ಹೀಗೆ ಮನೆಯಲ್ಲಿ ಆಂಗ್ಲ ಚಾನಲ್ ಒಂದರಲ್ಲಿ ದೆವ್ವದ ಸಿನೆಮಾ ನೋಡಿ ಊಟಕ್ಕೆ ಕುಳಿತಾಗ ಅದೇ ದೆವ್ವದ ಬಗ್ಗೆ ಮಾತುಕತೆ ನಡೆಯಿತು. ನಾನು ಈ ದೆವ್ವ ಭೂತ ಎಲ್ಲ ಬರೀ ಭ್ರಮೆ ಎಂದು ನಮ್ಮ ತಂದೆ ಇಲ್ಲಪ್ಪ ಅದೆಲ್ಲ ನಿಜ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಮ್ಮ ತಂದೆ ಹುಟ್ಟಿ ಬೆಳೆದದ್ದು ಎಲ್ಲ ಹಳ್ಳಿಯಲ್ಲೇ. ನಮ್ಮ ತಂದೆ ಅಣ್ಣ ತಮ್ಮಂದಿರು ಶಾಲೆಗೆಂದು ನಮ್ಮ ಹಳ್ಳಿಯಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ಮುಳಬಾಗಿಲಿಗೆ ಕೆಲವೊಮ್ಮೆ ಸೈಕಲ್ ನಲ್ಲಿ ಇನ್ನು ಕೆಲವೊಮ್ಮೆ ನಡೆದು ಬರುವ ಪರಿಪಾಟಲು ಇತ್ತಂತೆ. ನಮ್ಮ ತಂದೆಗೆ ಎನ್.ಟಿ.ಆರ್ ಅವರ ಸಿನಿಮಾಗಳೆಂದರೆ ಬಹಳ ಅಚ್ಚುಮೆಚ್ಚು (ಎನ್.ಟಿ.ಆರ್ ಸತ್ತ ನಂತರ ನಮ್ಮ ತಂದೆ ಚಿತ್ರಮಂದಿರಕ್ಕೆ ಹೋಗಿಲ್ಲ). ಯಾವುದಾದರೂ ಹೊಸ ಸಿನಿಮಾ ಬಿಡುಗಡೆ ಆದರೆ ನಮ್ಮ ತಂದೆ ಹಾಗೂ ಅವರ ಸ್ನೇಹಿತರೊಬ್ಬರು (ಅವರೂ ನಮ್ಮ ಹಳ್ಳಿಯವರೇ) ಇಬ್ಬರು ಶಾಲೆ ಮುಗಿಸಿ ಸಿನಿಮಾಗೆ ಹೊರಟುಬಿಡುತ್ತಿದ್ದರು. ಸಿನೆಮಾ ಮುಗಿಯುವ ಹೊತ್ತಿಗೆ ರಾತ್ರಿ ೯-೧೦ ಗಂಟೆ ಆಗುತ್ತಿತ್ತು. ಅಲ್ಲಿಂದ ಆ ಸೈಕಲ್ ಏರಿ ಇಬ್ಬರೂ ಆ ಕಾರ್ಗತ್ತಲಿನಲ್ಲಿ ಹಳ್ಳಿಗೆ ಬರುವ ಪರಿಪಾಟಲು ಇತ್ತು. ಹೀಗೆ ಒಮ್ಮೆ "ಲವ ಕುಶ" ಸಿನೆಮಾ ಬಿಡುಗಡೆ ಸಂದರ್ಭ. ಎರಡು ದಿನ ಟಿಕೆಟ್ ಸಿಗದೆ ಮೂರನೇ ದಿನ ಹಾಗೂ ಹೀಗೂ ಮಾಡಿ ಟಿಕೆಟ್ ದಕ್ಕಿಸಿಕೊಂಡು ಸಿನಿಮಾ ನೋಡಿ ಬರುವ ಹೊತ್ತಿಗೆ ರಾತ್ರಿ ೧೧ ಗಂಟೆ. ಸರಿ ಇಬ್ಬರೂ ಸೈಕಲ್ ಏರಿ ಹಳ್ಳಿಯ ಕಡೆ ಬರುತ್ತಿದ್ದಾಗ ಕೆರೆಯ ಪಕ್ಕದ ಮಾವಿನ ಮರದ ಹತ್ತಿರ ಸುಮಾರು ೭ ಅಡಿ ಎತ್ತರದ ಬರೀ ಬೆಂಕಿ ಎಡಗಡೆಯಿಂದ ಬಲಗಡೆಗೆ ಓಡಾಡುತ್ತಿತ್ತು. ಅದನ್ನು ಕಂಡು ಇಬ್ಬರಿಗೂ ಒಂದು ರೀತಿ ಕಂಪನ ಶುರುವಾಗಿ ಅಲ್ಲಿಂದ ಅದು ಹೇಗೆ ಓಡಿಬಂದು ಊರು ಸೇರಿಕೊಂಡರೋ ಅವರಿಗೇ ಗೊತ್ತಿಲ್ಲ. ಬೆಳಿಗ್ಗೆ ಎದ್ದು ಅವರ ತಾಯಿಗೆ ಈ ವಿಷಯ ಹೇಳಿದಾಗ ಅದು ಕೊಳ್ಳಿ ದೆವ್ವ ಎಂದು ಹೇಳಿದರಂತೆ. ಅದಾದ ಮೇಲೆ ರಾತ್ರಿ ಹೊತ್ತು ಸಿನೆಮಾಗೆ ಹೋಗುವುದನ್ನು ನಿಲ್ಲಿಸಿದರಂತೆ.
ನಮ್ಮ ತಾತನ ಘಟನೆಯನ್ನು ಹೇಳಿದರು. ನಮ್ಮ ತಾತ ನಮ್ಮ ಹಳ್ಳಿಗೂ ಮುಳಬಾಗಿಲಿಗೂ ಮಧ್ಯದಲ್ಲಿ ಒಂದು ಕ್ಷೇತ್ರವುಂಟು ನರಸಿಂಹತೀರ್ಥ ಎಂದು. ಅಲ್ಲಿ ಅಡಿಗೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ದಿನಾ ಬೆಳಿಗ್ಗೆ ಎದ್ದು ಸೈಕಲ್ ತೆಗೆದುಕೊಂಡು ಹೋಗಿ ಅಲ್ಲಿ ಅಡಿಗೆ ಮುಗಿಸಿ ಮತ್ತೆ ಸಂಜೆ ವೇಳೆಗೆ ವಾಪಸಾಗುತ್ತಿದ್ದರು. ಧನುರ್ಮಾಸದ ವೇಳೆಯಲ್ಲಿ ಬೆಳಗಿನ ಜಾವ ಬೇಗನೆ ಎದ್ದು ಅಂದರೆ ಸುಮಾರು ೩ ಗಂಟೆಗೆ ಎದ್ದು ಹೊರಡುತ್ತಿದ್ದರು. ಒಮ್ಮೆ ಸೈಕಲ್ ಏರಿ ಬೆಳಗಿನ ಜಾವ ೩ ಗಂಟೆಯಲ್ಲಿ ಹೊರಟು ಹಳ್ಳಿರಸ್ತೆ ದಾಟಿ ಹೆದ್ದಾರಿಗೆ ತಲುಪಿದ ಸ್ವಲ್ಪ ಹೊತ್ತಿಗೆ ಹಿಂದುಗಡೆ ಕ್ಯಾರಿಯರ್ ಮೇಲೆ ಯಾರೋ ಕೂತಂತಾಯಿತಂತೆ. ಇಳಿದು ಯಾರು ಎಂದು ನೋಡಿದರೆ ಯಾರು ಇರಲಿಲ್ಲವಂತೆ. ಮತ್ತೆ ಸೈಕಲ್ ಏರಿ ಹೊರಟರೆ ತುಂಬಾ ಕಷ್ಟವಾಗುತ್ತಿತ್ತಂತೆ ತುಳಿಯಲು. ಯಾರು ಯಾರು ಅಂತ ಕೇಳಿದ್ದಕ್ಕೆ ತೆಲುಗಿನಲ್ಲಿ "ನನ್ನು ಅಕ್ಕಡಿದಾಕ ದಿಂಪೈಯಿ" ಅಂತಂತೆ ಅಂದರೆ ನನ್ನನ್ನು ಅಲ್ಲಿ ತನಕ ಬಿಟ್ಟು ಬಿಡು ಎಂತಂತೆ. ಇವರು ಏನೂ ಮಾತಾಡದೆ ಹೊರಟಾಗ ಸ್ವಲ್ಪ ದೂರದ ನಂತರ ಆ ಭಾರ ಇದ್ದಕ್ಕಿದ್ದಂತೆ ಕಡಿಮೆ ಆಯಿತಂತೆ. ಇದೇ ಅನುಭವ ೨-೩ ದಿನ ಆಯಿತಂತೆ. ನಾಲ್ಕನೇ ದಿನ ಹೊರಡುವಾಗ ಕೈಯಲ್ಲಿ ಒಂದು ಸಣ್ಣ ಕೋಲು ಹಿಡಿದುಕೊಂಡು ಹೊರಟಾಗ ಹೆದ್ದಾರಿ ಬರುತ್ತಿದ್ದ ಹಾಗೆ ಕ್ಯಾರಿಯರ್ ಭಾರವಾದಾಗ ಕೈಯಲ್ಲಿದ್ದ ಕೋಲಿನಿಂದ ಹಿಂದಕ್ಕೆ ಗಾಳಿಯಲ್ಲಿ ಬೀಸಿ ತೆಲುಗಿನಲ್ಲಿ "ಇಂಕೋಸಾರಿ ವಸ್ತಾವ ವಸ್ತಾವ" ಅಂದಿದ್ದಕ್ಕೆ "ನನ್ನು ಕೊಟ್ಟೊದ್ದು ಇಂಕೊಸಾರಿ ನೀ ಬಂಡಿ ಎಕ್ಕನು" ಎಂದು ಹೊರಟುಹೋಯಿತಂತೆ. ಮರುದಿನದಿಂದ ಆ ಅನುಭವ ಆಗಲಿಲ್ಲವಂತೆ. ಸ್ವಲ್ಪ ದಿನದ ನಂತರ ಯಾರಿಂದಲೋ ತಿಳಿದು ಬಂದ ವಿಷಯವೇನೆಂದರೆ ಆ ಜಾಗದಲ್ಲಿ ಒಂದು ಅಪಘಾತವಾಗಿ ಒಬ್ಬ ಅಲ್ಲೇ ಮ್ರುತಪಟ್ಟಿದ್ದನಂತೆ. ಅದೇ ದೆವ್ವದ ರೂಪದಲ್ಲಿ ಕಾಡಿತೆಂದು ಹೇಳುತ್ತಾರೆ.
ನಮ್ಮ ತಂದೆಯವರು ತಮ್ಮ ಅನುಭವಗಳನ್ನು ಹೇಳಿದಾಗ ನಂಬದೇ ಇರಲು ಸಾಧ್ಯವಾಗಲಿಲ್ಲ.
Comments
ಉ: ದೆವ್ವ ಭೂತ ಇದೆಯಾ?
In reply to ಉ: ದೆವ್ವ ಭೂತ ಇದೆಯಾ? by prasannasp
ಉ: ದೆವ್ವ ಭೂತ ಇದೆಯಾ?
ಉ: ದೆವ್ವ ಭೂತ ಇದೆಯಾ?
ಉ: ದೆವ್ವ ಭೂತ ಇದೆಯಾ?
ಉ: ದೆವ್ವ ಭೂತ ಇದೆಯಾ?
In reply to ಉ: ದೆವ್ವ ಭೂತ ಇದೆಯಾ? by MADVESH K.S
ಉ: ದೆವ್ವ ಭೂತ ಇದೆಯಾ?
ಉ: ದೆವ್ವ ಭೂತ ಇದೆಯಾ?
In reply to ಉ: ದೆವ್ವ ಭೂತ ಇದೆಯಾ? by prasca
ಉ: ದೆವ್ವ ಭೂತ ಇದೆಯಾ?
ಉ: ದೆವ್ವ ಭೂತ ಇದೆಯಾ?
In reply to ಉ: ದೆವ್ವ ಭೂತ ಇದೆಯಾ? by partha1059
ಉ: ದೆವ್ವ ಭೂತ ಇದೆಯಾ?
In reply to ಉ: ದೆವ್ವ ಭೂತ ಇದೆಯಾ? by Jayanth Ramachar
ಉ: ದೆವ್ವ ಭೂತ ಇದೆಯಾ?
ಉ: ದೆವ್ವ ಭೂತ ಇದೆಯಾ?