ಮಂಗಳೂರು ಹುಡುಗನ ಡೂಡಲ್ ಇಂದು ಗೂಗಲ್ ಮುಖಪುಟದಲ್ಲಿ...
ಚಿತ್ರ ಕೃಪೆ: ದಿ ಹಿಂದು
ಮಂಗಳೂರು ಹುಡುಗನೊಬ್ಬ ಬಿಡಿಸಿರುವ ಚಿತ್ರ ಇಂದು ಗೂಗಲ್ ವೆಬ್ಸೈಟಿಗೆ ಭೇಟಿ ನೀಡುವ ಭಾರತೀಯರಿಗೆಲ್ಲ ಕಾಣುವುದು. ಗೂಗಲ್ ಮಕ್ಕಳ ದಿನಾಚರಣೆಯಂದು ಹಾಕುವ ಲೋಗೋ ವಿನ್ಯಾಸವನ್ನು 'ನವ ಭಾರತ' ಎನ್ನುವ ಥೀಮ್ ಇಟ್ಟುಕೊಂಡು ಮಕ್ಕಳ ಕೈಯಲ್ಲೇ ಮಾಡಿಸುವ ಕ್ರಿಯೇಟಿವ್ ಮಾರ್ಕೆಟಿಂಗ್ ಪ್ರಯತ್ನ ಮಾಡಿದೆ. ಒಟ್ಟು ತಲುಪಿದ ಒಂದು ಲಕ್ಷ ಎಂಟು ಸಾವಿರ ಚಿತ್ರಗಳಲ್ಲಿ ಮಂಗಳೂರು ಹುಡುಗ ಅಕ್ಷಯ್ ರಾಜ್ ಬಿಡಿಸಿರುವ ಈ ಕೆಳಗಿನ ಚಿತ್ರ ಆಯ್ಕೆಯಾಗಿದೆಯಂತೆ.
ಗಾಂಧೀಜಿ ಡೂಡಲ್ ಖ್ಯಾತಿಯ ಡೆನ್ನಿಸ್ ಹ್ವಾಂಗ್ ಕೊನೆಯ ತೀರ್ಪುಗಾರರಾಗಿದ್ದರಂತೆ. ಹದಿನಾಲ್ಕು ವರ್ಷದ ಅಕ್ಷಯ್ ರಾಜ್ ಸೇಂಟ್ ಅಲಾಯ್ಸಿಯಸ್ ಸ್ಕೂಲಿನಲ್ಲಿ ಓದುತ್ತಿದ್ದಾನಂತೆ. ಸುದ್ದಿವಾಹಿನಿಗಳಲ್ಲಿ ಈ ಕುರಿತ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
Rating
Comments
ಉ: ಮಂಗಳೂರು ಹುಡುಗನ ಡೂಡಲ್ ಇಂದು ಗೂಗಲ್ ಮುಖಪುಟದಲ್ಲಿ...
ಉ: ಮಂಗಳೂರು ಹುಡುಗನ ಡೂಡಲ್ ಇಂದು ಗೂಗಲ್ ಮುಖಪುಟದಲ್ಲಿ...
ಉ: ಮಂಗಳೂರು ಹುಡುಗನ ಡೂಡಲ್ ಇಂದು ಗೂಗಲ್ ಮುಖಪುಟದಲ್ಲಿ...