ಏನಾದ್ರೂ ಮಾಡಿ
ಬೆಳಗ್ಗೆ ನಮ್ಮ ದೈನಂದಿನ ಕೆಲಸವಾದ ಕೆರೆತಾವ ಕಾರ್ಯಕ್ರಮ ಮುಗಿಸಿ. ನಮ್ಮ ಹಳ್ಳಿಯ ಪೇಮಸ್ ಫೈವ್ ಸ್ಟಾರ್ ಹೋಟೆಲ್ ನಿಂಗನ ಚಾ ಅಂಗಡಿ ತಾವ ನಮ್ಮ ಗೆಳೆಯರ ಬಳಗ ಸುಬ್ಬ,ನಾನು,ಸೀನ,ತಂತಿ ಪಕಡು, ಕಟ್ಟಿಗೆ ಒಡೆಯೋ ಕಿಸ್ನ, ತಂಬಿಟ್ಟು ರಾಮ, ನೀರಗಂಟಿ ಸಿದ್ದ ಎಲ್ಲಾ ಸೇರಿದ್ವಿ. ರಾಜ್ಯ ಮತ್ತು ದೇಸ ರಾಜಕೀಯದ ಬಗ್ಗೆ ಸಾಕಷ್ಟು ಚರ್ಚೆ ನಡೀತಾ ಇತ್ತು. ನಮ್ಮ ಕಟ್ಟಿಗೆ ಒಡೆಯೋ ಕಿಸ್ನನ ಬಾಯಲ್ಲಿ ಒಬಾಮನ ಹೆಂಡರು ಮಿಷೆಲ್ ಅವಾಗವಾಗ ಬತ್ತಾನೇ ಇದ್ಲು. ಯಾಕೇಂದ್ರೆ ಆ ವಮ್ಮ ಭರತ ನಾಟ್ಯ ಮಕ್ಕಳು ಜೊತೆಗೆ ಯಲ್ಲಮ್ಮ ದೇವರು ಮೈ ಮ್ಯಾಕೆ ಬಂದಂಗೆ ಆಡಿದ್ದು. ಅಟ್ಟೊತ್ತಿಗೆ ನಮ್ಮ ಹಳ್ಳಿ ರಾಜಮ್ಮನ ಅಳಿಯ ಬೆಂಗಳೂರು ನಾಗೇಸ ಬಂದ. ಲೇ ನಾಗೇಸ ಬೆಂಗಳೂರ್ನಾಗೆ ಏನಲಾ ಮತ್ತೀಯಾ ಅಂದ ಸುಬ್ಬ. ನಾನು ಸಾಫ್ಟ್್ವೇರ್ ಇಂಜಿನೀರ್ ಆಗಿದೀನಿ ಅಂದ. ಅಂಗಂದ್ರೆ ಏನಲಾ. ಏ ಕಂಪೂಟರ್ ಮುಂದೆ ಕೂತು ಸಾನೇ ಕೆಲಸ ಮಾಡೋದು ಅಂದ ನಾಗೇಸ. ಓಹ್ ನಮ್ಮ ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಸಿ ಮಾಡ್ತಾನಲ್ಲಾ ಅಂಗೆ. ಏ ನಿಮ್ಮ ಕಾರ್ಯದರ್ಸಿ ಕಂಪೂಟರ್ ಮುಂದೆ ಕೂತು ಜನರ ದುಡ್ಡು ಹೊಡಿತಾನೆ. ನಾವು ದೇಸಕ್ಕಾಗಿ ದುಡಿತೀವಿ ಅಂದ.
ಹೌದು ಹಿಂಗೆ ಬೆಳಗ್ಗೆನೇ ಓಸಿ ಚಾ ಕುಡಿದು ಪುಕ್ಸಟ್ಟೆ ಹರಟೆ ಹೊಡೀತೀರಲ್ಲಾ ಇದರಿಂದ ಏನು ಲಾಭ. ಏನಾದ್ರೂ ಮಾಡಿ ಅಂದ ನಾಗೇಸ. ಯೂ ನೋ ಬೆಂಗಳೂರಲ್ಲಿ ನಾವು ಪುಲ್ ಬಿಸಿ. ಯೂ ನೋ ನಾವು ಟೇಂ ವೇಸ್ಟ್ ಮಾಡಕ್ಕಿಲ್ಲ ಅಂದ ನಾಗೇಸ. ಅಟ್ಟೊತ್ತಿಗೆ ಸೀನ ಒಂದು ಲೋಟ ನಾಗೇಸಂಗೆ ಕೊಟ್ಟ. ಯಾಕಲಾ. ಅಣ್ಣಾ ಅವನು ಅವಾಗಿನಿಂದ ಯುನೋ, ಯುನೋ ಅಂತಿದ್ದ. ಬೆಂಗಳೂರ್ನಾಗೆ ಪಿಜ್ಜಾ, ಹಚಾ, ಬರ್ಗರ್ ತಿಂದು ಎಲ್ಲೋ ಹೊಟ್ಟೆ ಕೆಟ್ಟಿರಬೇಕು ಅಂತ, ಮೆಡಿಕಲ್ ಸಾಪಿಂದ ಯುನೋ ತಂದು ನೀರಿಗೆ ಹಾಕಂಡು ಬಂದು ಕೊಟ್ಟೀವ್ನಿ ಅಂದ. ಏ ಥೂ. ಅಟ್ಟೊತ್ತಿಗೆ ನಾಗೇಸಂಗೂ ನಿಂಗ ಒಡಿದಿರೋ ಹಾಲಿಂದು ಒಂದು ಅರ್ಧ ಕೆಟ್ಟ ಚಾ ಕೊಟ್ಟ.
ನಿಂಗ ಇದಲ್ಲದೆ ನೀನು ಏನಾದ್ರೂ ಮಾಡು ಅಂದ ನಾಗೇಸ. ನೋಡಲಾ ಬೆಳಗ್ಗೆ 4ಕ್ಕೆ ಎದ್ದೋನು ರಾತ್ರಿ 12ತನಕ ಕೆಲಸ ಮಾಡ್ತಾನೇ ಇರ್ತೀನಿ ಇನ್ನೂ ಏನಾದ್ರೂ ಮಾಡಿದ್ರೆ ನಾನು ಸತ್ತು ಹೋಯ್ತೀನಿ ಅಂದ. ಅಟ್ಟೊತ್ತಿಗೆ ಸುಬ್ಬನ್ನ ನೋಡಿದ ನಾಗೇಸ. ಸುಬ್ಬ ಅವರೆ ನೀನು ಏನಾದ್ರೂ ಮಾಡು ಅಂದ. ಹೂಂ ಗದ್ದೆ ಕೆಲಸ ಮಾಡಕಂಡು ಅರಾಮಾಗಿ ಇದೀನಿ. ಒಂದು ನಾಕು ಮಲ್ಡರ್ ಮಾಡಬೇಕು ಆಟೆಯಾ ಅಂದ. ಏ ಥೂ. ಆಮ್ಯಾಕೆ ಜೈಲಲ್ಲಿ ಮುದ್ದೆ ಕಡಿಬೇಕಾಗುತ್ತೆ ಅಂದ ಸೀನ. ಕಿಸ್ನ ನೀವು ಏನಾದ್ರೂ ಮಾಡಿ, ಉದ್ದಾರ ಆಯ್ತೀರಾ ಅಂದ ನಾಗೇಸ. ನೋಡಿ ಸಾ. ನಾನು ಬೆಳಗ್ಗೆ 4ರಿಂದ ಸಂಜೆ ತನಕ ಕಟ್ಟಿಗೆ ಒಡಿತೀನಿ. ಆಮೇಲೆ 6ರಿಂದ ಫುಲ್ ಬುಸಿ. ಹೇಗೆ. ಬಾಯಿಗೆ ಒಂದಿಷ್ಟು ಹುಯ್ಕಂತಾ ಇರ್ತೀನಿ. ಅವಾಗವಾಗ ಕೋಳಿ ಕದ್ದು ಮಾರಾಟ ಮಾಡ್ತೀನಿ. ಇದನ್ನು ಬಿಟ್ಟು ಹೊಸದಾಗಿ ಏನಾದ್ರೂ ಮಾಡಕ್ಕೆ ಹೋದ್ರೆ ನನ್ನನ್ನ ಮಣ್ಣು ಮಾಡಬೇಕಾಯ್ತದೆ ಅಂದ.ರೇಸನ್ ಕಾರ್ಡ್್ನಲ್ಲಿ ಹೆಸರು ಹೋಯ್ತದೆ ಅಂದ. ಅಂಗಂತಿದ್ದಾಗೇನೇ ಸೀನಿ ಕಿಸ್ನಂಗೆ ಕೆರ ತಗೊಂಡು ಜರಾ ಬರೋ ತನಕ ಹೊಡೆದ. ಯಾಕಲಾ. ಲೇ ಮೊನ್ನೆ ನಮ್ಮನೆ ಹುಂಜ ಇವನೇ ಕದ್ದಿದಾನೆ ಕಲಾ ಅಂದ. ಲೇ ನಾನು ಫ್ರೆಂಡ್ಸ್ ಮನೇದು ಕಳ್ಳತನ ಮಾಡಕ್ಕಿಲ್ಲ ಕಲಾ. ನಿಮ್ಮ ಹುಂಜ ನಜೀರ್ ಸಾಬ ಕದ್ದವ್ನೆ. ನಿಂಗೆ ಹೆಂಗಲಾ ಗೊತ್ತಾತು. ಯಾರಿಗೂ ಹೇಳಬೇಡ ಅಂತ 10ರೂಪಾಯಿ ಕೊಟ್ಟ ಅಂದ ಕಿಸ್ನ.
ಅಟ್ಟೊತ್ತಿಗೆ ಏನೋ ಕೆಟ್ಟ ವಾಸನೆ ಬತ್ತದಲ್ಲಾ ಅಂತ ನೋಡಿದ್ರೆ. ನಮ್ಮ ವಾಸನೆ ಗೌಡಪ್ಪ ಬತ್ತಾ ಇದ್ದ. ಬಂದೋನೆ ಏನಲಾ ನಾಗೇಸ. ಯಾವಗಲಾ ಬೆಳಗ್ಗೆ. ಮಾರ್ನಿಂಗ್ ಐ ಕೇಮ್ ಯು ನೋ. ಏನಲಾ ಅಂಗಂದ್ರೆ. ಕೆರೆತಾವ ಹೋಗಿ ಈಗ ಬಂದಂವ್ನಂತೆ ಅಂದ ಸುಬ್ಬ. ಲೇ ನಿಂಗೆ ಹೆಂಗಲಾ ಇಂಗ್ಲೀಸ್ ಬತ್ತದೆ. ಈಗ ದಿನಾ Tv9 ಇಂಗ್ಲೀಸ್ ಚಾನಲ್ ನೋಡ್ತಾ ಇದ್ದೀನಿ ಅಂದ ಸುಬ್ಬ, ಗೌಡ್ರೆ ನೀವು ಏನಾದ್ರೂ ಮಾಡಿ ಅಂದ ನಾಗೇಸ. ನೋಡಲಾ ಮೂರು ಹೆಂಡರನ್ನ ಕಟ್ಟಿಕೊಂಡು 8ಮಕ್ಕಳನ್ನ ಮಾಡೀವ್ನಿ. ಇನ್ನೂ ಏನಾದ್ರೂ ಮಾಡಬೇಕು ಅಂದ್ರೆ ನಮ್ಮ ಕೆಲಸದೋಳು ನಿಂಗಿನ ಮದುವೆಯಾವಗಬೇಕು ಆಟೆಯಾ ಅಂದ ಗೌಡಪ್ಪ. ಅಯ್ಯೋ ನಿಮ್ಮ ಮಕ್ಕೆ ನನ್ನ ಅಂಗಡಿಯ ಹಳೇ ಚಾ ಚಲ್ಟಾ ಹುಯ್ಯಾ. ಅವನು ಹೇಳಿದ್ದು ಏನಾದ್ರೂ ಕ್ಯಾಮೆ ಮಾಡಿ ಅಂತಾ ಅಂದ ಚಾ ಅಂಗಡಿ ನಿಂಗ. ಅಣ್ಣಾ ಇವನು ಸಾಫ್ಟ್್ವೇರ್ ಅಂತಾನೆ ನೋಡಿದ್ರೆ ಆಫೀಸ್ ಬಾಯ್ ಕಂಡಂಗೆ ಕಾಣಕ್ಕಿಲ್ವಾ ಅಂದ ಸೀನ. ಅದು ಹೆಂಗಲಾ ಹೇಳ್ತೀಯಾ. ಏ ಬೆಳಗ್ಗೆ ಉದಯರಂಗ ಬಸ್ಸಲ್ಲಿ ಟಾಪ್ ಮ್ಯಾಕೆ ಕೂತಕಂಡು ಬಂದಿದ್ದನ್ನ ನಾನೇ ನೋಡೀವ್ನಿ.
ಡ್ರೇವರ್ ಇಸ್ಮಾಯಿಲ್ ಬಂದೋನೆ. ಅರೆ ನಾಗೇಸ ನಿಮ್ದೂಗೆ ಯಾವಾಗ ಬಂದ್ರಿ ಅಂದ, ಇಸ್ಮಾಯಿಲ್ ನೀನೂ ಏನಾದ್ರೂ ಮಾಡು ಅಂದ ನಾಗೇಸ. ಲೇ ಈಗಲೇ 8 ಆಕ್ಸಿಡೆಂಟ್ ಮಾಡಿದೀನಿ ಅಂತಾ ನಮ್ಮ ಸಾಹುಕಾರ್ ಸಾನೇ ಸಿಟ್ಟಾಗವ್ರೆ. ಇನ್ನೂ ಏನಾದ್ರೂ ಮಾಡಿದ್ರೆ. ಡ್ರೇವರ್ ಕೆಲಸಕ್ಕೆ ರಾಜೀನಾಮೆ ಕೊಡಿಸಿ. ಕ್ಲೀನರ್ ಮಾತ್ತಾನೆ ಅಂದೆ. ಅಟ್ಟೊತ್ತಿಗೆ ನಿಂಗ ನೀವು ಮಾತಾಡಿದ್ದು ಸಾಕು. ಅಫೀಸಿಯಲ್ಸ್ ಬತ್ತಾರೆ ಎದ್ದು ತೊಲಗ್ರಿ ಅಂದ.
ಗೌಡಪ್ಪ ಅಂದ ಲೇ ಇವನು ಏನಾದ್ರೂ ಮಾಡು ಅಂತಾನೇ ಏನಾದ್ರೂ ಮಾಡಲೇಬೇಕು ಕಲಾ ಅಂದ. ಅಣ್ಣಾ ದಂಡು ಪಾಳ್ಯದೋರು ತರಾ ಒಂದು 30 ಮಲ್ಡರ್ ಅಂಗೇ 20ರೇಪ್ ಮಾಡಿದ್ರೆ ಸಾನೇ ಪೇಮಸ್ ಆಯ್ತೀವಿ. ಎಲ್ಲಾ ಟೀವಿ ಕ್ರೈಂ ಪ್ರೋಗ್ರಾಂನಲ್ಲಿ ನಾವೇ ಬತ್ತೀವಿ ಅಂದ ಕಿಸ್ನ. ಅಯ್ಯೋ ನಿನ್ನ ಮಕ್ಕೆ ನನ್ನ ಕರದ್ದು ಸಗಣಿ ಹಾಕ. ಪೇಮಸ್ ಆಗಕ್ಕಿಲ್ಲಾ ಕಲಾ. ಜೈಲಲ್ಲಿ ಸಾಯಗಂಟ ಮುದ್ದೆ ಮುರಿಬೇಕಾಯ್ತದೆ ಅಂದ ಗೌಡಪ್ಪ. ಅಣ್ಣಾ ರಾಜಕೀಯ ಮಾಡಿದ್ರೆ. ಬೇಡ ಕಲಾ. ಇರೋರೆ ನಾಯಿ ತರಾ ಕಿತ್ತಾಡ್ತಾ ಅವ್ರೆ. ನೋಡಲಾ ನಮ್ಮ ಹಳ್ಳಿ ಐಕ್ಳಿಗೆ ಕಂಪೂಟರ್ ಹೇಳಿ ಕೊಡುವಾ ಅಂದು ಎಲ್ಲಾರ ಹತ್ರನೂ ಕಾಸು ಎತ್ತಿ ಒಂದು 10ಕಂಪೂಟರ್ ತಂದ್ವಿ.
ಲೇ ನಾಗೇಸ ಸ್ವಲ್ಪ ದಿನಾ ನೀನೇ ಹೇಳಿ ಕೊಡಲಾ ಅಂದ್ರೆ. ಮಗಾ ಪೇಂಟ್ ಬ್ರಸ್ ಬಿಟ್ಟರೆ ಗೇಮ್ಸ್ ಮಾತ್ರ ಹೇಳಿ ಕೊಡೋನು. ಐಕ್ಳು ಸಾಲೆಗೆ ಹೋಗೋದು ಬಿಟ್ಟು ಬರೇ ಗೇಮ್ಸ್ ಆಡೋವು. ಲೇ ನಾಗೇಸ ಬೇರೇದು ಏನಲಾ ಹೇಳಕೊಡಲಾ ಅಂದ್ರೆ ಇಸ್ಪೀಟ್ ಆಟ ಹೇಳಿಕೊಟ್ಟಿದ್ದ. ಒಂದೆರೆಡು ದಿನಾ ಆದ ಮ್ಯಾಕೆ ಒಂದಿಬ್ಬರು ನಾಗೇಸನ ಹುಡಕಂಡು ಬಂದು ಎತ್ತಾಂಕಂಡು ಹೋದ್ರು. ಯಾಕಲಾ, ಇವನು ಪಿವನ್ ಕಣ್ರೀ, ಬ್ಯಾಂಕಿಗೆ ಕಟ್ಟೋ ಕಾಸನ್ನು ಸ್ವಂತಕ್ಕೆ ಬಳಸ್ಕಂಡವ್ನಂತೆ. ಅದಕ್ಕೆ ಎರಡು ವರ್ಸ ಜೀತದಾಳು ತರಾ ನಮ್ಮ ಆಫೀಸ್್ನಾಗೆ ದುಡಿಬಾ ಅಂತಾ ಎತ್ತಾಕಂಡು ಹೋದ್ರು ಗೌಡ್ರೆ. ಬಂದೋರು ಯಾರಲಾ. ಸಿವಿಲ್ ಡ್ರೆಸ್ ಪೊಲೀಸ್ನೋರು ಅಂದ ಸುಬ್ಬ. ಏ ಥೂ.
ಅಟ್ಟೊತ್ತಿಗೆ ನಮ್ಮ ಐಕ್ಳು ದಾರಿ ತಪ್ಪಿದ್ವು. ಎಲ್ಲಲಾ ಐಕ್ಳು ಅಂದ್ರೆ ತೋಟದಾಗೆ ಇಸ್ಪೀಟ್ ಆಡ್ತವ್ರೆ ಅನ್ನೋರು. ಸಾಲೆ ಫುಲ್ ಖಾಲಿ. ಮೇಟರು ದಿನಾ ತಿಂದು ಮಕ್ಕಳೋನು. ಅಂಗೇ ಕರೆಂಟ್ ಬಿಲ್ 10ಸಾವಿರ ಬಂದಿತ್ತು. ಸತ್ಯಂ ರೀತಿಯ ಕಂಪೂಟರ್ ಹಗರಣ ಅಂತಾ ಗೌಡಪ್ಪನ ಪೋಟೋ ಹಾಕಿ ಪೇಪರ್ನಾಗೆ ಬರೆದಿದ್ರು. ಮಕ್ಕಳು ಅಪ್ಪ, ಅಮ್ಮ ಬಂದು ಗೌಡಂಗೆ ನಿನ್ನ ಜಲ್ಮಕ್ಕೆ ಒಂದಿಷ್ಟು ಕಲಗಚ್ಚು ಹಾಕ ಅಂತಿದ್ರು. ಈಗ ಗೌಡಪ್ಪ ಸಾನೇ ಬೇಜಾರಾಗವ್ನೆ. ಬೆಳಗ್ಗೆ ಸೊಪ್ಪು ಮಾರೋನು ಗೌಡ್ರೆ ಈ ಸೊಪ್ಪನ್ನ ತಗೊಂಡು ಒಂದು ಕೆಲಸ ಮಾಡ್ರಿ ಅಂತಿದ್ದಾಗೆನೇ ಗೌಡಪ್ಪ ಅವನಿಗೆ ಬೀದಿ ನಾಯಿಗೆ ಹೊಡೆಯೋರು ತರಾ ಹೊಡೆದಿದ್ದ. ಈಗ ಏನಾದ್ರೂ ಮಾಡಿ ಅಂದ್ರೆ ಕಚ್ಚಕ್ಕೆ ಬತ್ತಾವ್ನೆ.
Comments
ಉ: ಏನಾದ್ರೂ ಮಾಡಿ
ಉ: ಏನಾದ್ರೂ ಮಾಡಿ
ಉ: ಏನಾದ್ರೂ ಮಾಡಿ
ಉ: ಏನಾದ್ರೂ ಮಾಡಿ
ಉ: ಏನಾದ್ರೂ ಮಾಡಿ
In reply to ಉ: ಏನಾದ್ರೂ ಮಾಡಿ by manju787
ಉ: ಏನಾದ್ರೂ ಮಾಡಿ
In reply to ಉ: ಏನಾದ್ರೂ ಮಾಡಿ by Jayanth Ramachar
ಉ: ಏನಾದ್ರೂ ಮಾಡಿ
ಉ: ಏನಾದ್ರೂ ಮಾಡಿ
In reply to ಉ: ಏನಾದ್ರೂ ಮಾಡಿ by gopaljsr
ಉ: ಏನಾದ್ರೂ ಮಾಡಿ