ಇಮ್ಮುಖ ಸಂತಸ ಮನಸೋಳು

ಇಮ್ಮುಖ ಸಂತಸ ಮನಸೋಳು

 

 

ಇಮ್ಮುಖ ಸಂತಸ ಮನಸೋಳು
ಊರದಾರಿಲಿ ನನ್ನ ಪಯಣ ಇಂದು
ಮೊದಲ ಕಥೆಗೆ ಅಂಕಿತ ಇತ್ತ ಕುಶಿ ಇನ್ನೂಂದು !!!

ಕೆಲಸದ ನಡುವೆ ಸಿಗದ ದೀಪಾವಳಿ
ಮಿಡಿಯಲಿದೆ ಉಲ್ಲಾಸದ ಚಿಲಿಪಿಲಿ
ಒಂದುವಾರಕೆ ನಿಲ್ಲಲಿರುವುದು ಮೇಲ್ ಗಳ ಹಾವಳಿ
ರಕ್ತದೊತ್ತಡ ಹೆಚ್ಚಿಸುವ ಕ್ಲೈಂಟ್ ಗಳ ಕಿರಿಕಿರಿ


ಬೆಳ್ಳಗ್ಗೆ ಎದ್ದೊಡನೆ ಇರದು ಆಟೋ,ಸಿಟಿ ಬಸ್ಸನ ಜಂಜಾಟ
ಎರಡೂ ಹೊತ್ತಲಿ ಸಿಗಲಿದೆ ಅಮ್ಮನ ಕೈ ಊಟ
ಕಳೆದ ದಿನಗಳ ನೆನಪಿಸಲು ಮಾಡಬೇಕಿದೆ ಗೆಳೆಯರ ಹುಡುಕಾಟ
ನಿಶ್ಚಿಂತೆಯಲಿ ತಿರುಗುವೆ ದೇವಸ್ಥಾನ, ನದಿ,ತೋಟ


ಮತ್ತೆ ಹೊತ್ತುಬರುವೆನು ನನ್ನ ನೆನಪಿನಬುತ್ತಿ
ಅಲ್ಲಿರಲಿದೆ ನನ್ನ ಮಧುರ ನೆನಪುಗಳ ಹೊಸ ಆವ್ರತ್ತಿ
೧೦ ದಿನದ ಪಯಣದಲಿ ನೂರು ಕತೆ ಇರಲಿ
ನಿಮ್ಮೊಡನೆಯ ವಿರಹದ ವ್ಯತೆ ಇರಲಿ

ಕಾಮತ್ ಕುಂಬ್ಳೆ



Rating
No votes yet

Comments