ನೀತಿ ಕಥೆ: ನಾನು ಯಾರು ಗೊತ್ತ, ಭೀಮ, ಬಲ ಭೀಮ

ನೀತಿ ಕಥೆ: ನಾನು ಯಾರು ಗೊತ್ತ, ಭೀಮ, ಬಲ ಭೀಮ

 

ಮತ್ತೆ ಮರುದಿನ, ಎಂದಿನಂತೆ ಬಸ್ ಪ್ರಯಾಣ ಆರಂಭ ವಾಯಿತು. ಅಂದು ಸಹ ಅದೇ ಪ್ರಯಾಣಿಕ ಬಂದಿದ್ದ. ಟಿಕೆಟ್ ಎಂದು ಕೇಳಿದರೆ " ನಾನು ಭೀಮ ಬಲಭೀಮ" ಅನ್ನುತಿದ್ದ. ಪ್ರಶಾಂತನಿಗೆ ಇದೊಂದು ತಲೆ ನೋವಾಯ್ತು, ತನ್ನ ದಿನನಿತ್ಯದ ಪ್ರಯಾಣ ಸೇವೆಯಲ್ಲಿ ನೂರಾರು ಪ್ರಯಾಣಿಕರಿಗೆ ಟಿಕೆಟ್ ನೀಡಿ ಹಣ ಪಡೆಯುತಿದ್ದ. ಆದರೆ ಈ ಗಿರಾಕಿ ಟಿಕೆಟ್ ಪಡೆಯದೆ ಸಂಚರಿಸಿ ಪ್ರಶಾಂತನಿಗೆ ತಲೆ ಬಿಸಿ ಮಾಡುತಿದ್ದ. ಯಾರತ್ರ ನಾದ್ರು ಹೇಳಿಕೊಂಡರೆ ನಗೆ ಪಾಟಲಿಗೆ ಈಡಾಗುತ್ತೀನಿ, ಯಾಕಿದ್ದಿತು ಸಹವಾಸ ಎಂದು ಕೊಂಡು ಸುಮ್ಮನಿರುತಿದ್ದ ಯಾಕೆಂದರೆ, ಸಣ್ಣಗೆ, ಕಡ್ಡಿಯಂತಿದ್ದ ಅವನ ದೇಹ ಭೀಮ ನ ಎದುರಿಗೆ ಹುಲು ಕಡ್ಡಿಯಂತೆ ಗೋಚರಿಸುತಿದ್ದ, ಅವನ ಜತೆ ಜಗಳ ಮಾಡಿ ದಕ್ಕಿಸಿ ಕೊಳ್ಳುವ ಸಾಮರ್ಥ್ಯ ಮತ್ತು ಮನೋ ಧೈರ್ಯ ಅವನಲ್ಲಿರಲಿಲ್ಲ. ಪ್ರತಿ ಬಾರಿ ಭೀಮನನ್ನು ನೋಡಿ, ಅವನನ್ನು ಎದುರಿಸಲಾರದೆ ಮಾನಸಿಕವಾಗಿ ಕುಗ್ಗಿ ಹೋಗುತಿದ್ದ. ಒಂದು ರೀತಿಯಲ್ಲಿ ಮಾನಸಿಕ ವ್ಯಾಧಿ ಅಂಟಿಕೊಂಡಿತು. ನಿದ್ರೆ ಅವನಿಂದ ದೂರ ಹೋಯಿತು, ನೆಮ್ಮದಿ ಹಾಳಾಯಿತು. ಕೊನೆಗೊಮ್ಮೆ ನಿರ್ಧಾರ ಮಾಡಿ, ಒಂದು ತಿಂಗಳು ರಜಾ ಹಾಕಿ ಜಿಮ್ಗೆ ಹೋಗಿ ಕಸರತ್ತು ಮಾಡಿ  ಮತ್ತು ಚೆನ್ನಾಗಿ ತಿಂದುಂಡು ತನ್ನ ದೇಹ ವನ್ನು ಬೆಳೆಸಿಕೊಂಡ. ಒಂದೆರೆಡು ತಿಂಗಳಲ್ಲಿ ಸಂಪೂರ್ಣ ವಾಗಿ ಬದಲಾಗಿ ಹೋಗಿದ್ದ. ಭೀಮನಿಗೆ ಎದುರಾಗಿ ನಿಲ್ಲುವ ಸಾಮರ್ಥ್ಯ ಮತ್ತು ಧೈರ್ಯವನ್ನು ಸಂಪಾದಿಸಿದ್ದ. ಕನ್ನಡಿ ಯಲ್ಲಿ ತನ್ನನ್ನು ತಾನು ನೋಡಿಕೊಂಡು ಒಳೊಗೊಳಗೆ ಖುಷಿ ಪಟ್ಟು ಉಬ್ಬಿ ಹೋಗಿದ್ದ. ನಂತರ ಕೆಲಸಕ್ಕೆ ಹಾಜರಾಗಿ ಎಂದಿನಂತೆ ತನ್ನ ನಿತ್ಯ ಕರ್ತವ್ಯವನ್ನು ನಿಭಾಯಿಸತೊಡಗಿದ್ದ.
ಅಂದು ಅದೇ ಊರಿಗೆ ಭೀಮ ನನ್ನು ಎದುರಿಸಲು ಸನ್ನದ್ದನಾಗಿ ಹೊರಟ. ಎಂದಿನಂತೆ ಭೀಮ ಬಸ್ಸಿನಲ್ಲಿ ಕುಳಿತ.
"ಟಿಕೆಟ್ ತಗೋ" ಎಂದ ಪ್ರಶಾಂತ,
"ನಾನು ಭೀಮ, ಬಲ ಭೀಮ, ಟಿಕೆಟ್ ತಗೊಳಲ್ಲ" ಎಂದ ಭೀಮ
"ಯಾಕೆ, ಯಾಕೆ, ಯಾಕೆ ತಗೊಳಲ್ಲ" ಎಂದು ಏರು ದನಿಯಲ್ಲಿ ಪ್ರಶ್ನಿಸಿದ ಪ್ರಶಾಂತ.
ಭೀಮ ಅವನ ಏರು ದನಿಗೆ ವಿಚಲಿತನಾಗಿ, ಅವನನೊಮ್ಮೆ ಗುರಾಯಿಸಿ, ಜೇಬಿನಿಂದ ಪರ್ಸ್ ಅನ್ನುತೆಗೆಯುತ್ತ ಯಾಕೆಂದರೆ "ನನ್ನ ಹತ್ತಿರ ಮಾಸಿಕ ಪಾಸ್ ಇದೆ" ಎನ್ನುತ್ತ ಅವನ ಮುಖದೆದುರು ಹಿಡಿದ. 
ಅದನ್ನು ನೋಡಿ ಪ್ರಶಾಂತ ತನಗೆ ತಾನು ಹಿಡಿ ಶಾಪ ಹಾಕಿಕೊಂಡ.
ನೀತಿ: ಸಮಸ್ಯೆ ಇದೆಯಂದು ಮೊದಲು ಖಚಿತ ಪಡಿಸಿಕೊಂಡು ನಂತರ ಬಗೆಹರಿಸಲು ಪ್ರಯತ್ನಿಸಿ. ಸುಮ್ಮನೆ ಸಮಸ್ಯೆ ಇದೆಯೆಂದು ನಮ್ಮಷ್ಟ ಕ್ಕೆ ನಾವು ಅಂದು ಕೊಂಡು ಕಷ್ಟ ಪಟ್ಟರೆ ಪ್ರಯೋಜನವಿಲ್ಲ.
ಸಂಗ್ರಹ ನೀತಿ ಕಥೆ.

 

ಒಂದು ಊರಿನಲ್ಲಿ ಪ್ರಶಾಂತ ಎನ್ನುವ ಓರ್ವ ಯುವ ಬಸ್ ಕಂಡಕ್ಟರ್ ಇದ್ದ. ಅಂದು ಎಂದಿನಂತೆ, ತನ್ನ ಬಸ್ ಸಂಚಾರ ಶುರುವಾಯಿತು. ಪ್ರತಿ ಊರಿನಲ್ಲಿ ಜನರನ್ನು ಹತ್ತಿಸಿಕೊಂಡು ಅವರಿಗೆ ಟಿಕೆಟ್ ನೀಡಿ, ಹಣ ಪಡೆಯುತಿದ್ದ. ಒಂದು ಊರು ಬಂದಿತು, ಒಬ್ಬ ಪ್ರಯಾಣಿಕ, ಧೈತ್ಯ ದೇಹಿ, ಅಜಾನು ಬಾಹು, ಆರುವರೆ ಅಡಿ ಎತ್ತರದ ಮನುಷ್ಯ. ಅವನನ್ನು ನೋಡಿದರೆ ಎಂತಬ್ಬೊರಿಗೆ ಭಯವಾಗುತಿತ್ತು. ಅವನು ಸೀಟಿನಲ್ಲಿ ಆಸೀನನಾದ. ಟಿಕೆಟ್ ತಗೊಳ್ರಿ ಎಂದು ನಡುಕದಿಂದಲೆ ಅವನಿಗೆ ಪ್ರಶಾಂತ ಕೇಳಿದ, ಅದಕ್ಕೆ ಆ ಅಜಾನು ಬಾಹು

" ನಾನು ಯಾರು ಗೊತ್ತ, ಭೀಮ, ಬಲ ಭೀಮ, ನನಗೆ ಟಿಕೆಟ್ ತಗೊಂಡು ಅಭ್ಯಾಸ ಇಲ್ಲ, ತಗೊಳ್ಳೋದು ಇಲ್ಲ". ಅವನ ಆಕಾರಕ್ಕೆ ಭಯಬೀತ ನಾಗಿ ಪ್ರಶಾಂತ ಮರು ಮಾತಾಡದೆ ಸುಮ್ಮನಾಗಿಬಿಟ್ಟ. 

ಮತ್ತೆ ಮರುದಿನ, ಎಂದಿನಂತೆ ಬಸ್ ಪ್ರಯಾಣ ಆರಂಭ ವಾಯಿತು. ಅಂದು ಸಹ ಅದೇ ಪ್ರಯಾಣಿಕ ಬಂದಿದ್ದ. ಟಿಕೆಟ್ ಎಂದು ಕೇಳಿದರೆ " ನಾನು ಭೀಮ ಬಲಭೀಮ" ಅನ್ನುತಿದ್ದ.

ಪ್ರಶಾಂತನಿಗೆ ಇದೊಂದು ತಲೆ ನೋವಾಯ್ತು, ತನ್ನ ದಿನನಿತ್ಯದ ಪ್ರಯಾಣ ಸೇವೆಯಲ್ಲಿ ನೂರಾರು ಪ್ರಯಾಣಿಕರಿಗೆ ಟಿಕೆಟ್ ನೀಡಿ ಹಣ ಪಡೆಯುತಿದ್ದ. ಆದರೆ ಈ ಗಿರಾಕಿ ಟಿಕೆಟ್ ಪಡೆಯದೆ ಸಂಚರಿಸಿ ಪ್ರಶಾಂತನಿಗೆ ತಲೆ ಬಿಸಿ ಮಾಡುತಿದ್ದ. ಯಾರತ್ರ ನಾದ್ರು ಹೇಳಿಕೊಂಡರೆ ನಗೆ ಪಾಟಲಿಗೆ ಈಡಾಗುತ್ತೀನಿ, ಯಾಕಿದ್ದಿತು ಸಹವಾಸ ಎಂದು ಕೊಂಡು ಸುಮ್ಮನಿರುತಿದ್ದ ಯಾಕೆಂದರೆ, ಸಣ್ಣಗೆ, ಕಡ್ಡಿಯಂತಿದ್ದ ಅವನ ದೇಹ ಭೀಮ ನ ಎದುರಿಗೆ ಹುಲು ಕಡ್ಡಿಯಂತೆ ಗೋಚರಿಸುತಿದ್ದ, ಅವನ ಜತೆ ಜಗಳ ಮಾಡಿ ದಕ್ಕಿಸಿ ಕೊಳ್ಳುವ ಸಾಮರ್ಥ್ಯ ಮತ್ತು ಮನೋ ಧೈರ್ಯ ಅವನಲ್ಲಿರಲಿಲ್ಲ. ಪ್ರತಿ ಬಾರಿ ಭೀಮನನ್ನು ನೋಡಿ, ಅವನನ್ನು ಎದುರಿಸಲಾರದೆ ಮಾನಸಿಕವಾಗಿ ಕುಗ್ಗಿ ಹೋಗುತಿದ್ದ. ಒಂದು ರೀತಿಯಲ್ಲಿ ಮಾನಸಿಕ ವ್ಯಾಧಿ ಅಂಟಿಕೊಂಡಿತು. ನಿದ್ರೆ ಅವನಿಂದ ದೂರ ಹೋಯಿತು, ನೆಮ್ಮದಿ ಹಾಳಾಯಿತು.

ಕೊನೆಗೊಮ್ಮೆ ನಿರ್ಧಾರ ಮಾಡಿ, ಒಂದು ತಿಂಗಳು ರಜಾ ಹಾಕಿ ಜಿಮ್ಗೆ ಹೋಗಿ ಕಸರತ್ತು ಮಾಡಿ  ಮತ್ತು ಚೆನ್ನಾಗಿ ತಿಂದುಂಡು ತನ್ನ ದೇಹ ವನ್ನು ಬೆಳೆಸಿಕೊಂಡ. ಒಂದೆರೆಡು ತಿಂಗಳಲ್ಲಿ ಸಂಪೂರ್ಣ ವಾಗಿ ಬದಲಾಗಿ ಹೋಗಿದ್ದ. ಭೀಮನಿಗೆ ಎದುರಾಗಿ ನಿಲ್ಲುವ ಸಾಮರ್ಥ್ಯ ಮತ್ತು ಧೈರ್ಯವನ್ನು ಸಂಪಾದಿಸಿದ್ದ. ಕನ್ನಡಿ ಯಲ್ಲಿ ತನ್ನನ್ನು ತಾನು ನೋಡಿಕೊಂಡು ಒಳೊಗೊಳಗೆ ಖುಷಿ ಪಟ್ಟು ಉಬ್ಬಿ ಹೋಗಿದ್ದ. ನಂತರ ಕೆಲಸಕ್ಕೆ ಹಾಜರಾಗಿ ಎಂದಿನಂತೆ ತನ್ನ ನಿತ್ಯ ಕರ್ತವ್ಯವನ್ನು ನಿಭಾಯಿಸತೊಡಗಿದ್ದ.

ಅಂದು ಅದೇ ಊರಿಗೆ ಭೀಮ ನನ್ನು ಎದುರಿಸಲು ಸನ್ನದ್ದನಾಗಿ ಹೊರಟ. ಎಂದಿನಂತೆ ಭೀಮ ಬಸ್ಸಿನಲ್ಲಿ ಕುಳಿತ.

"ಟಿಕೆಟ್ ತಗೋ" ಎಂದ ಪ್ರಶಾಂತ,

"ನಾನು ಭೀಮ, ಬಲ ಭೀಮ, ಟಿಕೆಟ್ ತಗೊಳಲ್ಲ" ಎಂದ ಭೀಮ

"ಯಾಕೆ, ಯಾಕೆ, ಯಾಕೆ ತಗೊಳಲ್ಲ" ಎಂದು ಏರು ದನಿಯಲ್ಲಿ ಪ್ರಶ್ನಿಸಿದ ಪ್ರಶಾಂತ.

ಭೀಮ ಅವನ ಏರು ದನಿಗೆ ವಿಚಲಿತನಾಗಿ, ಅವನನೊಮ್ಮೆ ಗುರಾಯಿಸಿ, ಜೇಬಿನಿಂದ ಪರ್ಸ್ ಅನ್ನುತೆಗೆಯುತ್ತ ಯಾಕೆಂದರೆ

"ನನ್ನ ಹತ್ತಿರ ಮಾಸಿಕ ಪಾಸ್ ಇದೆ" ಎನ್ನುತ್ತ ಅವನ ಮುಖದೆದುರು ಹಿಡಿದ. ಅದನ್ನು ನೋಡಿ ಪ್ರಶಾಂತ ತನಗೆ ತಾನು ಹಿಡಿ ಶಾಪ ಹಾಕಿಕೊಂಡ.

 

ನೀತಿ: ಸಮಸ್ಯೆ ಇದೆಯಂದು ಮೊದಲು ಖಚಿತ ಪಡಿಸಿಕೊಂಡು ನಂತರ ಬಗೆಹರಿಸಲು ಪ್ರಯತ್ನಿಸಿ. ಸುಮ್ಮನೆ ಸಮಸ್ಯೆ ಇದೆಯೆಂದು ನಮ್ಮಷ್ಟ ಕ್ಕೆ ನಾವು ಅಂದು ಕೊಂಡು ಕಷ್ಟ ಪಟ್ಟರೆ ಪ್ರಯೋಜನವಿಲ್ಲ.

ಸಂಗ್ರಹ ನೀತಿ ಕಥೆ.

Comments