ಚೌ ಚೌ ಹಾಡು

ಚೌ ಚೌ ಹಾಡು

ಕವನ

ನಲವತ್ತೊಂದು ಸಿನಿಮಾ ಹೆಸರನ್ನು ಬಳಸಿ ಈ ಕವಿತೆಯನ್ನು ಬರೆದಿದ್ದೇನೆ.

ಮುಂಗಾರುಮಳೆಯಲ್ಲಿ ಎಡಕಲ್ಲು ಗುಡ್ಡದ ಮೇಲೆ
ಆಕಸ್ಮಿಕವಾಗಿ ಚೆಲುವೆಯೇ ನಿನ್ನ ನೋಡಲು
ಕೇಳಿದೆ ನಾ ನಿನ್ನ ಯಾರೇ ನೀನು ಚೆಲುವೆ ಎಂದು.
ನೀನೆಂದೆ ಗೀತಾ ಎಂದು ಕೇಳಿದೆ ಯಾರಿವನು ಎಂದು.
ಹುಡುಗಾಟದ ಹುಡುಗ ನಾನಲ್ಲ..ಚೆಲ್ಲಾಟದ ಹುಡುಗ ನಾನಲ್ಲ.
ನಾನೊಬ್ಬ ಕಳ್ಳನಲ್ಲ..ಕೇವಲ ನಾ ನಿನ್ನ ಪ್ರೇಮ ಖೈದಿ...

ಬೆಳದಿಂಗಳ ಬಾಲೆ ಯಾ ನೀ..ಅಮ್ರುತವರ್ಷಿಣಿಯ ನೀ ಅರಿಯದಾದೆ
ನಿನ್ನ ಕಂಡ ಕ್ಷಣ ಏನೋ ಒಂಧರಾ ಅನುಭವ ವಾಗಿ ಲವ್ ಹುಟ್ಟಿತು.
ಈ ದುನಿಯಾದಲ್ಲಿ ಪ್ರೀತ್ಸೋದ್ ತಪ್ಪಾ ಎಂದು ಕೇಳಿದ್ದಕ್ಕೆ
ಪ್ರೀತ್ಸು ತಪ್ಪೇನಿಲ್ಲ ಎಂದರು ಗೆಳೆಯರು..ಆಪ್ತಮಿತ್ರರು..
ನೀನೆ ನನ್ನ ಚಂದ್ರಮುಖಿ..ಪ್ರಾಣಸಖಿ..ನಾ ಮೆಚ್ಚಿದೆ ನಿನ್ನ ಮನಸಾರೆ.
ನಿನ್ನ ಬಣ್ಣದ ಗೆಜ್ಜೆಯ ಗೆಜ್ಜೆನಾದ ಮೂಡಿಸಿತು ನನ್ನೆದೆಯಲ್ಲಿ ತನನಂ ತನನಂ..

ನೀನೆ ನನ್ನ ಮನ ಮೆಚ್ಚಿದ ಹುಡುಗಿ..ಕೊಡುವೆ ನಿನಗೆ ಒಲವಿನ ಉಡುಗೊರೆ
ನಾ ಸೋತೆ ನಿನ್ನ ಮೊನಾಲಿಸ ಳ ನಗುವಿಗೆ..ನಾ ನಿನ್ನ ಜೊತೆಗಾರ ನೆನಪಿರಲಿ..
ನಮ್ಮಿಬ್ಬರ ಪ್ರೇಮ್ ಕಹಾನಿ ಎಂದಿಗೂ ಅಳಿಯದ ಪ್ರೇಮದ ಕಾದಂಬರಿ.
ಹೆತ್ತವರು ಎಂದರು ಶ್ರಾವಣ ಬಂತು..ಬರುವೆಯಾ ನನ್ನ ಬಾಳಲ್ಲಿ ಹೊಸಬೆಳಕಾಗಿ..
ನನ್ನ ನಿನ್ನ ಮದುವೆ ಸ್ವರ್ಗದಲ್ಲಿ ಮದುವೆ..ಎಂದೆಂದಿಗೂ ನಾವಿಬ್ಬರೂ ಜೊತೆಜೊತೆಯಲಿ..
ನಮ್ಮಿಬ್ಬರ ಈ ಮಿಲನದಿಂದ ಆಗಲಿ ನಮ್ಮ ಜೀವನ ಜೀವನ ಚೈತ್ರ..
ಇಂತಿ ನಿನ್ನ ಪ್ರೀತಿಯ..

Comments