ಓ ..ಬದುಕೇ .....
ಪ್ರತಿ ಸಲ ಸೋಲುತಿರುವ ನನ್ನ ಬದುಕಿಗೆ ನಿನ್ನ ನೆನಪೊಂದೆ ಕೈ ಹಿಡಿದು ನಡೆಸುವ ದಾರಿ ದೀಪ.ಅತ್ತು ಅತ್ತು ಸುಸ್ತಾದ ಕಣ್ಣಿಗೆ ನಿನ್ನ ನೋಡುವ ಬಯಕೆ ಗರಿ ಗೆದರಿ ಕಾಯುತಿದೆ.ಗೊತ್ತೇ ಇರ್ಲಿಲ್ಲ ಕಣೋ ನನ್ನ ತಪ್ಪು!
ಆ ದಿನ ನಿನ್ನ ಪ್ರೀತಿ ತುಂಬಿದ ಮಾತು ನನ್ನ ಕಿವಿಗೆ ಇಷ್ಟ ಆಗ್ಲಿಲ್ಲ.ಎಲ್ಲ ಬೊಗಳೆ ಅಂದ್ಕೊಂಡು ನಕ್ಕೆ.ನಿನ್ನ ಕಣ್ಣಲಿದ್ದ ಆ ಪ್ರೀತಿ ನನಗೆ ತೋರಲೇ ಇಲ್ಲ.ನಿನ್ನ ಮುಗ್ದ ಮುಖದ ಹಿಂದೆ ಏನೋ ಮೋಸ ಇದೆ ಅಂದ್ಕೊಂಡು ಸುಮ್ನಾದೆ.
ನನ್ನ ಹಿಂದೆ ಹಿಂದೆ ನೀನ ಬಂದಾಗ ಆ ದಿನ ತುಂಬಾನೆ ರೇಗಾಡಿ ಬಿಟ್ಟೆ.ನೀನ್ ಏನ್ ಹೇಳ್ಬೇಕು ಅಂತ ಬಂದ್ದಿಯ ಅಂತಾನು ಕೇಳೋದಕ್ಕೂ ಹೋಗಲಿಲ್ಲ. ಏನು ಹೇಳದೆ ನೀ ಹೋದಾಗ ನನಗೆ ಆಶ್ಚರ್ಯ ಆಯ್ತು.ಮತ್ತೆ ಅದ್ರ ಬಗ್ಗೆ ಜಾಸ್ತಿ ಯೋಚಿಸಲೂ ಇಲ್ಲ.ಆದೆ ನಾನ್ ಮಾಡಿದ ತಪ್ಪು.
ಇವತ್ತು ಆ ನೆನಪುಗಳು ನನ್ನ ಕಾಡುತ್ತೆ ಕಣೋ ....ಜೀವವನ್ನು ಹಿಂಡಿ ಹಿಂಡಿ ಹಿಪ್ಪೆ ಮಾಡುತಿದೆ.ನೀನು ಯಾಕೆ ನನ್ನ ಬಿಟ್ಟು ಹೋದೆ ಅನ್ನುದಕ್ಕೆ ನನ್ ಮನಸು ಕಾರಣ ಹುಡುಕುತಿದೆ.ಯಾಕಂದ್ರೆ ಸಣ್ಣ ವಿಷಯಕ್ಕೆ ಬಿಟ್ಟು ಹೋಗುವ ಹುಡುಗ ನೀನಲ್ಲ .
ನೀನ್ ಇಲ್ಲದೆ ನನಗೆ ಇರೋದಕ್ಕೆ ಆಗ್ತಾ ಇಲ್ಲ ಕಣೋ ಬಂದು ಬಿಡೋ .....ಪ್ಲೀಸ್ ಇದ್ರಕಿಂತ ಜಾಸ್ತಿ ನನಗೆ ಏನು ಹೇಳೋದಕ್ಕೆ ಆಗ್ತಾ ಇಲ್ಲ ಮನಸ್ಸು, ಕಣ್ಣು ಎರಡು ತುಂಬಿಕೊಂಡಿದೆ. ನನ್ನ ಬದುಕು ನೀನೆ ಕಣೋ ....ಬವಣೆ ಕೊಡಬೇಡ
Comments
ಉ: ಓ ..ಬದುಕೇ .....
ಉ: ಓ ..ಬದುಕೇ .....
In reply to ಉ: ಓ ..ಬದುಕೇ ..... by vani shetty
ಉ: ಓ ..ಬದುಕೇ .....
ಉ: ಓ ..ಬದುಕೇ .....