ನೀವೇನಂತೀರಿ?
ಬೆಳಗಾಗಿ ಎದ್ದೊಡನೆ ಮನೆಯ ಕಸವನ್ನು ನಗರಸಭೆಯ ತೊಟ್ಟಿಗೆ ಹಾಕಿಬರುವುದೇ ನನ್ನ ಮೊದಲ ಕೆಲಸ.ಇವತ್ತು ತೊಟ್ಟಿ ಹತ್ತಿರ ಹೋದೆ. ನೋಡಿ ನಾವು ಹೇಗಿಟ್ಟಿದ್ದೇವೆ? ಸ್ವಚ್ಛತೆಗಾಗಿ ಬಹುಮಾನ ಕೊಡುವುದಿದ್ದರೆ ನಮಗೇ ಬರಲಿ ಎಂದು ಫೋಟೋ ವನ್ನೂ ತೆಗೆದು ನಿಮ್ಮ ಮುಂದಿಟ್ಟಿರುವೆ. ಅಂದಹಾಗೆ ನಮ್ಮ ಮುನೆ ಮುಂದೆ ತೊಟ್ಟಿ ಇಲ್ಲ. ಅದಕ್ಕಾಗಿ ಎರಡು ರಸ್ತೆ ದಾಟಿ ಹೋಗಬೇಕು. ಕೆಲವುದಿನ ಸಮಯ ಇಲ್ಲದಿದ್ದರೆ ನನ್ನ ಸೂಪರ್ ಎಕ್ಸ್-ಎಲ್ ಮೇಲೆಯೇ ಕಸದ ಮೆರವಣಿಗೆ ಆಗುತ್ತೆ.ಇರಲಿ, ನೋಡಿದಿರಾ ಚಿತ್ರವನ್ನು? ಈ ತೊಟ್ಟಿಯ ಎದುರು ಹಾಗೂ ಪಕ್ಕದಲ್ಲೂ ಮನೆಗಳಿವೆ. ತೊಟ್ಟಿ ವರೆಗೂ ಯಾರು ಹೋಗ್ತಾರೇ ಅಂತಾ ಯಾರೋ ಒಬ್ಬರು ಪಕ್ಕದಲ್ಲಿ ಕಸ ಸುರಿದರು. ಎಲ್ಲರೂ ಅನುಸರಿಸಿದರು! ಹೇಗಿದೆ ನೋಡಿ ನಮ್ಮ ಸಂಘಟನೆ! ಒಬ್ಬರನ್ನೊಬ್ಬರು ಅನುಸರಿಸದೇ ಹೋದರೆ ಚೆನ್ನಾಗಿರುತ್ತಾ! ಅದಕ್ಕಾಗಿ ಒಬ್ಬರು ಮಾಡಿದ್ದನ್ನು ಬೀದಿಯವರೆಲ್ಲಾ ತಪ್ಪದೆ ಮಾಡ್ತಾ ಇದ್ದಾರೆ. ತೊಟ್ಟಿಯ ಎದುರು ಮನೆಯವರು ಎಲ್ಲರಿಗೂ ಹಿಡಿ ಶಾಪ ಹಾಕಿಕೊಂಡು ಅವರ ಮೂಗು ಹಿಡಿದುಕೊಂಡು ಅವರ ಕಾಂಪೌಂಡ್ ಒಳಗೇ ನಿಂತು ಮನೆಯಹೊರಗೆ ಕಸವನ್ನು ಎಸೆದು ಬಿಡ್ತಾರೆ! ನಾವು ಉದ್ಧಾರವಾಗಬೇಕು ಅಂದರೆ ಆಗ್ತೀವಾ? ಇದಕ್ಕೆಲ್ಲಾ ಸರ್ಕಾರ ಏನ್ ಮಾಡ್ಬೇಕು? ಚಡಿ ಹಿಡ್ಕೊಂಡು ನಿಲ್ಬೇಕಾ? ಕಸವನ್ನು ಹೀಗೆ ಎಲ್ಲಿಂದರಲ್ಲಿ ಎಸೆಯುವವರನ್ನು ಪಕ್ಕದ ಮನೆಯವರು ಹಿಡಿದು ದಬಾಯಿಸಬಾರದಾ? ಮಾತು ಕೇಳಲಿಲ್ಲಾ ಅನ್ನಿ, ಕಸವನ್ನು ಹೀಗೆ ಹಿಗ್ಗಾ ಮುಗ್ಗಾ ಎಸೆಯುವಾಗ ಒಂದು ಫೋಟೋ ಕ್ಲಿಕ್ಕಿಸಿ ಕಂಪ್ಲೆಂಟ್ ಕೊಡ್ಬಾರ್ದಾ? ಛೇ! ಹೀಗೆ ಸಹಿಸಿಕೊಂಡು ಹೋದ್ರೆ ಯಾವ ದೇವರೂ ಬಂದು ನಮ್ಮನ್ನು ಕಾಪಾಡುವುದಿಲ್ಲ. ನೀವೇನಂತೀರಿ?
Comments
ಉ: ನೀವೇನಂತೀರಿ?
ಉ: ನೀವೇನಂತೀರಿ?
In reply to ಉ: ನೀವೇನಂತೀರಿ? by sm.sathyacharana
ಉ: ನೀವೇನಂತೀರಿ?
ಉ: ನೀವೇನಂತೀರಿ?
ಉ: ನೀವೇನಂತೀರಿ?
ಉ: ನೀವೇನಂತೀರಿ?
ಉ: ನೀವೇನಂತೀರಿ?