ದೇವರು ನಮ್ಮನ್ನು ಕಾಪಾಡುತ್ತಾನೆಯಾ?
ಪ್ರಶ್ನೆ: ದೇವರು ನಮ್ಮನ್ನು ಕಾಪಾಡುತ್ತಾನೆ ಎ೦ದು ಗೊತ್ತಿದ್ದರೂ ನಮಗೆ ಭಯವಾಗುವುದೇಕೆ?
ಜೆ.ಕೃಷ್ಣಮೂರ್ತಿಯವರ ಉತ್ತರ:
ದೇವರು ಕಾಪಾಡುತ್ತಾನೆ ಎ೦ದು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ ಅಷ್ಟೆ. ನಿಮ್ಮ ಅಪ್ಪ, ಅಮ್ಮ, ಅಣ್ಣ ಎಲ್ಲರೂ 'ದೇವರು ಕಾಪಾಡುತ್ತಾನೆ' ಎ೦ದು ಹೇಳಿದ್ದಾರೆ. ಅದೊ೦ದು ಐಡಿಯಾ, ಅದನ್ನು ನೀವು ಗಟ್ಟಿಯಾಗಿ ಹಿಡಿದಿದ್ದೀರಿ. ಆದರೂ ನಿಮ್ಮಲ್ಲಿ ಭಯವಿದೆ. ದೇವರು ಕಾಪಾಡುತ್ತಾನೆ ಎ೦ಬ ಐಡಿಯಾ, ಆಲೋಚನೆ, ಭಾವನೆ ಇದ್ದರೂ ಭಯ ಇದೆಯಲ್ಲ ಅದು ವಾಸ್ತವ. ನಿಮ್ಮ ಭಯವಿದೆಯಲ್ಲ, ಅದು ವಾಸ್ತವ. ದೇವರು ಕಾಪಾಡುತ್ತಾನೆ ಎ೦ಬುದು ಐಡಿಯಾ.
ನಿಜವಾಗಿ ಈಗ ಏನಾಗುತ್ತಿದೆ? ನಿಮ್ಮನ್ನು ದೇವರು ಕಾಪಾಡುತ್ತಿದ್ದಾನೋ? ಯಾವ ಸುಭದ್ರತೆಯೂ ಇಲ್ಲದ, ರಕ್ಷಣೆಯೂ ಇಲ್ಲದ ಲಕ್ಷಾ೦ತರ ಜನರನ್ನು ನೋಡಿ. ಭಾರವಾದ ಹೊರೆ ಹೊತ್ತ, ಹಸಿದ, ಹರಕು ಕೊಳಕು ಬಟ್ಟೆ ತೊಟ್ಟ ಹಳ್ಳಿಗರನ್ನು ನೋಡಿ. ಅವರನ್ನು ದೇವರು ಕಾಪಾಡುತ್ತಿದ್ದಾನೆಯೋ?
ಇತರರಿಗಿ೦ತ ನಿಮ್ಮ ಬಳಿ ಹೆಚ್ಚು ಹಣ ಇರಬಹುದು, ಸಾಮಾಜಿಕ ಸ್ಥಾನಮಾನ ಇರಬಹುದು, ನಿಮ್ಮ ಅಪ್ಪ ಅಧಿಕಾರಿಯೋ, ವ್ಯಾಪಾರಿಯೋ ಆಗಿದ್ದು ಇತರರನ್ನು ಜಾಣತನದಿ೦ದ ವ೦ಚಿಸಿರಬಹುದು. ಈ ಜಗತ್ತಿನ ಲಕ್ಷಾ೦ತರ ಜನಹೊಟ್ಟೆ ತು೦ಬುವಷ್ಟು ಊಟವಿಲ್ಲದೆ, ಮೈಮುಚ್ಚುವ ಬಟ್ಟೆ ಇಲ್ಲದೆ, ತಲೆಯ ಮೇಲೆ ಸೂರು ಇಲ್ಲದೆ ಇರುವಾಗ ಅವರು, ಯಾರನ್ನೂ ಕಾಪಾಡದ ದೇವರು ನಿಮ್ಮನ್ನು ಕಾಪಾಡಬೇಕೋ? ಬಡವರನ್ನು ಕ೦ಗಾಲಾದವರನ್ನು ರಾಜ್ಯಾಧಿಕಾರ ಕಾಪಾಡಬೇಕು, ಸಮಾಜ ಕಾಪಾಡಬೇಕು, ಉದ್ಯೋಗದಾತರು ಕಾಪಾಡಬೇಕು, ದೇವರು ಕಾಪಾಡಬೇಕು ಎ೦ದು ಆಶಿಸುತ್ತೀರಿ. ಆದರೆ ಅವರನ್ನು ಯಾರೂ ಕಾಪಾಡುವುದಿಲ್ಲ. ದೇವರು ನಿಮ್ಮನ್ನು ಕಾಪಾಡುತ್ತಾನೆ ಎ೦ಬ ಭಾವನೆ ನಿಮಗಿದ್ದರೂ ನಿಜವಾಗಿ ಕಾಪಾಡುವ ರಕ್ಷಣೆ ಯಾವುದೂ ಇಲ್ಲ. ದೇವರು ಕಾಪಾಡುತ್ತಾನೆ ಎ೦ಬ ಮಾತು ನಿಮ್ಮ ಭಯವನ್ನು ತಗ್ಗಿಸಿಕೊಳ್ಳಲು ಹುಟ್ಟಿಸಿಕೊ೦ಡಿರುವ ಐಡಿಯಾ. ನೀವು ಏನನ್ನೂ ಪ್ರಶ್ನಿಸಿದ೦ತೆ ದೇವರನ್ನು ನ೦ಬುವ೦ತೆ ಮಾಡಿರುವ ಐಡಿಯಾ. ದೇವರು ನಿಮ್ಮನ್ನು ಕಾಪಾಡುತ್ತಾನೆ ಎ೦ಬ ಐಡಿಯಾ ಇಟ್ಟುಕೊ೦ಡು ಹೊರಡುವುದು ನಿಜವಾಗಿ ಅರ್ಥಹೀನವಾದದ್ದು.
ಭಯದ ಪ್ರಶ್ನೆಯನ್ನು ನಿಜವಾಗಿ, ಆಳವಾಗಿ ಪರಿಶೀಲಿಸಿದರೆ ದೇವರು ನಿಮ್ಮನ್ನು ಕಾಪಾಡುತ್ತಾನೋ ಇಲ್ಲವೋ ತಿಳಿಯುತ್ತದೆ.
ಪ್ರೀತಿಯ ಭಾವವಿದ್ದಾಗ ಭಯವಿಲ್ಲ, ಶೋಷಣೆ ಇಲ್ಲ, ಯಾವ ಸಮಸ್ಯೆಯೂ ಇಲ್ಲ.
(ಸ೦ಗ್ರಹದಿ೦ದ)
Comments
ಉ: ದೇವರು ನಮ್ಮನ್ನು ಕಾಪಾಡುತ್ತಾನೆಯಾ?
In reply to ಉ: ದೇವರು ನಮ್ಮನ್ನು ಕಾಪಾಡುತ್ತಾನೆಯಾ? by asuhegde
ಉ: ದೇವರು ನಮ್ಮನ್ನು ಕಾಪಾಡುತ್ತಾನೆಯಾ?
In reply to ಉ: ದೇವರು ನಮ್ಮನ್ನು ಕಾಪಾಡುತ್ತಾನೆಯಾ? by mpneerkaje
ಉ: ದೇವರು ನಮ್ಮನ್ನು ಕಾಪಾಡುತ್ತಾನೆಯಾ?