ಬಕ್ರೀದ್ ಹಬ್ಬದ ಆಚರಣೆಗಾಗಿ ಪ್ರಾಣಿಗಳ ಬಳಿ

ಬಕ್ರೀದ್ ಹಬ್ಬದ ಆಚರಣೆಗಾಗಿ ಪ್ರಾಣಿಗಳ ಬಳಿ

ಇದೇ ತಿಂಗಳು 16 ಮತ್ತು 17 ರಂದು ನಡೆಯುವ ಬಕ್ರೀದ್ ಹಬ್ಬದ ಆಚರಣೆಯು ಸರ್ವ ಪ್ರಾಣಿದಯಾ ಸಂಘದವರಿಗೆ ತೀವ್ರವಾಗಿ ನೋವು ಉಂಟಾಗಲಿದೆ, ಕಾರಣ ಅಪಾರವಾದ ಗೋವು, ಕುರಿ ಹಾಗು ಒಂಟೆಗಳ ಮಾರಣಹೋಮ. ಕ್ಷಮಿಸಲಾಗದ ಕೃತ್ಯ ಆಘಾತಕಾರಿಯು ಹೌದು, ಅಸಹಾಯಕತೆಯು ಹೌದು, ಮೂಲವಿರುವುದೆಲ್ಲಿ? ಇಂದಿನ ಹೊಲಸಿನ ರಾಜಕಾರಣದಲ್ಲಿ. ರಾಜಕೀಯ ಕುತಂತ್ರಗಳು ಹಾಗು ಕುಮ್ಮಕ್ಕುಗಳಿಂದಲೇ ಇಂದು ಶೋಚನೀಯ ಸ್ಥಿತಿಗೆ ತಲುಪಬೇಕಾದ ಪ್ರಸಂಗ ಒದಗಿರುವುದು.
 
ಹಿಂದು ಸಂಘಟನಕಾರರು ಗೋ ಹತ್ಯೆ ನಿಷೇಧಕ್ಕೆ ಹರಸಾಹಸ ಪಡುತ್ತಿದ್ದರೆ ಇತ್ತ ಮುಸ್ಲಿಂ ಸಂಘಟನಕಾರರು ಅದೇ ದಿನಗಳಂದು ಭಾರಿ ಸಂಖ್ಯೆಗಳಲ್ಲಿ ಗೋ ಹತ್ಯೆಗಯ್ಯಲು ದೊಡ್ಡ ಮನವಿಯನ್ನು ರಾಜ್ಯಪಾಲರತ್ತ ಒಡ್ಡಿದ್ದಾರೆ. ಕರ್ನಾಟಕ ಸರ್ಕಾರವು ಕಾಯ್ದೆ ಅನ್ವಯಗೊಳಿಸಿದ್ದರು ಅದು ತೋರಿಕೆಗೆ ಮಾತ್ರ. ಕಾರ್ಯಪ್ರವೃತ್ತರಾಗಲು ಮತ್ತೊಮೆ ಮಗದೊಮ್ಮೆ ಚುನಾವಣೆಗಳಲ್ಲಿ ಗೆದ್ದು ಬಂದರು ಮತ್ತಷ್ಟು ಮರುಗಬೇಕಾದ ಪ್ರಸಂಗವಷ್ಟೇ. ರಾಜಕೀಯ ದೊಂಬರಾಟದಿಂದ  ಸಾಧು ಪ್ರಾಣಿಗಳ ಬಲಿ, ಜೊತೆಗೆ ದಯಾ ಸಂಘದವರ ಮನಸ್ಸಿಗೂ ವಾಸಿಯಾಗದಂತಹ ಗಾಯ. ಯಾವ ಕಾರಣಕ್ಕಾಗಿ ಕಾಯ್ದೆಯನ್ನು ಜಾರಿಗೆ ತಂದರೋ ಗೊತ್ತಾಗುತ್ತಿಲ್ಲ, ತಂದರು ಕಟ್ಟುನಿಟ್ಟಾಗಿ ಪಾಲಿಸಲು ನಮ್ಮ ಮಿತ್ರವೃಂದದವರಿಂದ ಪಾಲಿಸಲು ಸತ್ಯಕ್ಕೆ ದೂರವಾದ ಮಾತು. ಆದಿನಗಳಂದು  ಪ್ರಾಣಿಗಳ ಮಾರಣಹೋಮ ನಡೆಯುವುದಂತು ನಿಶ್ಚಿತ.
 
ಮುಸ್ಲಿಂ ಸಂಪ್ರದಾಯದಂತೆ ಪ್ರಾಣಿಗಳನ್ನು ಹತ್ಯೆ ಮಾಡಿ ಅದರ ಮಾಂಸವನ್ನು  ಬಡಜನರಿಗೆ ಭಿಕ್ಷಾ ರೂಪದಲ್ಲಿ ವಿತರಿಸಬೇಕೆಂದು ಈದ್-ಅಲ್-ಅಧ ದ ಧರ್ಮ ಸಿದ್ಧಾಂತದ ಒಂದು ಭಾಗ. ಅದರ ಸಿದ್ಧಾಂತದಿಂದ ಯಾರಿಗೂ ಲಾಭವಿಲ್ಲವಷ್ಟೇ. ಬಡಜನರಿಗೆ ಮಾಂಸವೇ ಯಾಕಾಗಬೇಕು? ಹಣದ ಮುಖಾಂತರದಿಂದ ಅಥವಾ ಇತರ ಮೂಲಗಳಿಂದ ಸಹಾಯ ಮಾಡಬಹುದಲ್ಲವೇ? ಹಬ್ಬವನ್ನು ಪ್ರಾಣಿಗಳ ಹತ್ಯೆಯಾಗದಂತೆ ಹೆಚ್ಚು ಚೈತನ್ಯದಿಂದ ಆಚರಿಸಬಹುದಲ್ಲವೇ?
 
ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ರಕ್ಷಿಸಲು ಮುಂದಾಗೋಣ.
 

Comments