ಈ ದೀಪಾವಳಿ ಒಬ್ಬ ಜ್ಞಾನವೃದ್ಧರೊಡನೆ ಭೇಟಿ

ಈ ದೀಪಾವಳಿ ಒಬ್ಬ ಜ್ಞಾನವೃದ್ಧರೊಡನೆ ಭೇಟಿ

ನಾನು ಈ ದೀಪಾವಳಿಯಲ್ಲಿ  ಒಂದು  ಅಳಿಯತನಕ್ಕೆ  ಆಹ್ವಾನಿತನಾಗಿ   ಹೋಗಿದ್ದೆ !!  

ತುಂಬ ಚೆನ್ನಾಗಿತ್ತು  , ಎಂಜಾಯ್ ಮಾಡಿದೆ.  


ಅಲ್ಲಿ
ಒಬ್ಬ  ಜ್ಞಾನವೃದ್ಧರ ಭೇಟಿ ಆಯಿತು. ತುಂಬ ಓದಿಕೊಂಡವರೂ , ತುಂಬ  ತಿಳಿದವರೂ ಅವರು.

ಅವರು ಮಾತು ಮಾತಿನಲ್ಲಿ  ಹೇಳಿದರು - you have to find your centre of happiness!!

ಮತ್ತೆ ಇನ್ನೂ ಒಂದು ಮಾತು ಹೇಳಿದರು.  ನಾವು ಯಾವಾಗಲೂ ಸಂತೋಷದಿಂದ ಇರಬೇಕು . ಸಂತೋಶದಿಂದ ಕಾಲ ಕಳೆಯಲು  ಪ್ರವಾಸ ಹೋದಾಗ ಸಿಟ್ಟು ಮಾಡಿ ಮೂಡ್  ಕೆಡಿಸಿಕೊಳ್ಳೋದು ಅರ್ಥವಿಲ್ಲ, ಅಲ್ಲವೇ ? ಹಾಗೆ ಈ ಜೀವನ .

ನಾವು ಈ ಜಗತ್ತು, ಜಗತ್ತಿನ ಜನರು   ನಮಗೆ ಏನೇನು ಕೊಟ್ಟಿದೆ  ಅದಕ್ಕೆಲ್ಲ  ಋಣಿಯಾಗಿರಬೇಕು ;     ನೀರು , ಗಾಳಿ , ಆಹಾರ,   ಸಮಸ್ತಕ್ಕೂ  , ದೇವರಿಗೂ .. ಅಂತ .

ನನಗೂ ನಿಮಗೂ ಏನ್ರೀ ಸಂಬಂಧ ? ಅಂತ ಕೇಳಿದ್ರು , ರಕ್ತ ಸಂಬಂಧವೋ , ಏನಾದರೂ ಕೊಡ ಕೊಳ್ಳುವ ವ್ಯವಹಾರವೋ , ಎರಡೂ ಅಲ್ಲ . ಮತ್ತೆ ?   ನಾವು ಕಂಪಾಸ್ ಪೆಟ್ಟಿಗೆಯಲ್ಲಿರುವ ತ್ರಿಜ್ಯದ ಎರಡು ಕಾಲುಗಳ  ತರಹ . ಎರಡನ್ನೂ ಸೇರಿಸುವ ಬಿಂದು ದೇವರು . ನಾವೆಲ್ಲ ದೇವರ ಮಕ್ಕಳು ಅದೇ ನಮ್ಮ ನಿಮ್ಮ ಮತ್ತು  ಇನ್ನೆಲ್ಲರ ಜತೆಗಿನ ಸಂಬಂಧ  . 

ಹೆಚ್ಚಿಗೆ ಅವರ ಜತೆ ಕಾಲ ಕಳೆವ ಭಾಗ್ಯ  ಇರಲಿಲ್ಲ ; ನನಗೆ ದೊರಕಿದ್ದು ಇಷ್ಟೇ .  ನಿಮ್ಮೊಂದಿಗೆ ಹಂಚಿಕೊಳ್ಳ ಬೇಕೆನಿಸಿತು. ಇಲ್ಲಿ ಬರೆದಿದ್ದೇನೆ.

Rating
No votes yet

Comments