ಮಾತುಪಲ್ಲಟ - ೧೪, ನಾಡಿಗ ನಮನ
♫♫♫ಮಾತುಪಲ್ಲಟ - ೧೪♫♫♫
ಇದು ಮಾತುಪಲ್ಲಟ ಸರಣಿಯ ಹದಿನಾಲ್ಕನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ಹಿನ್ದಿ ಭಾಷೆಯ ಇನಿದಾದೊನ್ದು ಹಾಡಿನ ಮಱುಗೆಯ್ಮೆ ಮಾಡಲಾಗಿದೆ.
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಚಿತ್ರ : ತುಮ್ಹಾರೇ ಲಿಯೇ♪
ಸಂಗೀತ : ಜಯದೇವ್♪
ಮೂಲ ಸಾಹಿತ್ಯ : ನಾಕ್ಷ್ ಲಾಯಲ್ಪುರಿ♪
ಹಾಡುಗಾರರು : ಲತಾ ಮಂಗೇಶ್ಕರ್♪ (ಲಿವಿಂಗ್ ಲೆಜೆಣ್ಡ್)
ವಿಡಿಯೋ : http://www.youtube.com/watch?v=9imljtd9QAQ
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮೂಲ ಸಾಹಿತ್ಯ♪ :
ತುಮ್ಹೇಂ ದೇಖ್ತೀ ಹೂಂ ತೋ ಲಗ್ತಾ ಹೈ ಐಸೇ |
ಕಿ ಜೈಸೇ ಯುಗೋಂ ಸೇ ತುಮ್ಹೇಂ ಜಾನ್ತಿ ಹೂಂ ||
ಅಗರ್ ತುಂ ಹೋ ಸಾಗರ್ ಮೈ ಪ್ಯಾಸೀ ನದೀ ಹೂಂ |
ಅಗರ್ ತುಂ ಹೋ ಸಾವನ್ ಮೈ ಜಲ್ತೀ ಕಲೀ ಹೂಂ |
ಪಿಯಾ ತುಂ ಹೋ ಸಾಗರ್... ||
ಮುಝೇ ಮೇರೀ ನೀನ್ದೇಂ ಮೇರಾ ಚೈನ್ ದೇ ದೋ |
ಮುಝೇ ಮೇರೀ ಸಪ್ನೋಂ ಕೀ ಏಕ ರೈನ್ ದೇ ದೋ ನಾ |
ಯೆಹೀ ಬಾತ್ ಪೆಹಲೇ ಭೀ ತುಂ ಸೇ ಕಹೀ ಥೀ |
ವೋಹೀ ಬಾತ್ ಫಿರ್ ಆಜ್ ದೊಹ್ರಾ ರಹೀ ಹೂಂ |
ಪಿಯಾ ತುಂ ಹೋ ಸಾಗರ್ ||
ತುಮ್ಹೇಂ ಛೂಕೇ ಪಲ್ ಮೇಂ ಬನೀ ಧೂಲ್ ಚನ್ದನ್ |
ತುಮ್ಹಾರೀ ಮೆಹಕ್ ಸೇ ಮೆಹಕನೇ ಲಗೇ ತನ್ |
ಮೇರೇ ಪಾಸ್ ಆವೋ ಗಲೇ ಸೇ ಲಗಾವೋ |
ಪಿಯಾ ಔರ್ ತುಂ ಸೇ ಮೈ ಕ್ಯಾ ಚಾಹತೀ ಹೂಂ ||
ಮುರಲಿಯಾ ಸಮಝ್ ಕರ್, ಮುಝೇ ತುಂ ಉಠಾ ಲೋ |
ಬಸ್ ಏಕ ಬಾರ್ ಹೋಠೋಂ ಸೇ ಅಪ್ನೇ ಲಗಾ ಲೋ ನಾ |
ಕೋಯೀ ಸುರ್ ತೋ ಜಾಗೇ ಮೇರೀ ಧಡ್ಕನೋಂ ಮೇಂ |
ಕಿ ಮೈ ಅಪ್ನೀ ಸರ್ಗಂ ಸೇ ರುಠೀ ಹುಯೀ ಹೂಂ ||
ತುಮ್ಹೇಂ ದೇಖ್ತೀ ಹೂಂ ತೋ ಲಗ್ತಾ ಹೈ ಐಸೇ |
ಕಿ ಜೈಸೇ ಯುಗೋಂ ಸೇ ತುಮ್ಹೇಂ ಜಾನ್ತಿ ಹೂಂ ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮಾತುಪಲ್ಲಟ♪ :
ನಿನ್ನನ್ನೀಗ ನೋಡುತ್ತಿರೆ, ನನಗೇಕೋ ಅನ್ನಿಸಿತು |
ವರುಷಗಳಿನ್ದಲೇ ನೀನು ಪರಿಚಿತನೆನ್ದು ||
ನೀನೊನ್ದು ಕಡಲು, ನಾನೇ ಹಿನ್ನೀರು |
ನಿನ್ನ ಭೇಟಿಗಾಗಿ ಕಾದಿರುವ ಒಡಲು |
ಇಳಿತಕ್ಕೂ ಭರತಕ್ಕೂ ಸೆಡ್ಡಾಗದೊಡಲು ||
ನನ್ನೆಲ್ಲಾ ಕನಸುಗಳ ಮತ್ತೊಮ್ಮೆ ಮರಳಿಸು |
ನಾ ನೆನಸದ ನೆನಕೆಗಳನ್ನೆನ್ನೊಳಗೆ ಅರಳಿಸು |
ಇದೇ ಮಾತ ಹಿನ್ದೊಮ್ಮೆ ನೀನೆನ್ನೊಡನೆ ನುಡಿದಿದ್ದೆ |
ಅದೇ ಮಾತು ನನ್ನೊಳಗೇ ಅನುರಣಿಸುತ್ತಲಿದೆ |
ನೀನೇ ನನ್ನ ಕಡಲು...||
ನಿನ್ನ ಪರುಷದಿನ್ದಲೇ ಧೂಳು ಚಂದನವಾಯಿತು |
ನಿನ್ನ ಹೊೞಪಿನಿನ್ದಲೇ ಹೊೞೆಯಿತು ಒಡಲು |
ಸನಿಹದಲ್ಲೇ ನಿನ್ತುಕೊಳು, ನನ್ನನ್ನೊಮ್ಮೆ ತಬ್ಬಿಕೊಳು |
ಕೊಣ್ಡೂ ಕೊಳದ ಭಾವನೆಯ ನನ್ನಲ್ಲಿನ್ದು ತುಂಬಿಕೊಡು ||
ಕೊೞಲಿನನ್ತೆಯೇ ತಿಳಿದು, ನನ್ನನ್ನೊಮ್ಮೆ ಎತ್ತಿಕೊಳು |
ಒನ್ದೇ ಒನ್ದು ಸಾರಿ ನನ್ನ ತುಟಿಗೆ ತುಟಿಯ ತಾಕಿಬಿಡು |
ಮೂಡಿ ಬರುವ ಸ್ವರಗಳಿಂ, ದೆದೆಯ ತಲ್ಲಣಗಳಿಂ |
ದೊನ್ದು ಹೊಸ ರಾಗವನ್ನಿನ್ದು ನೀನು ಹಾಡಿಬಿಡು ||
ನಿನ್ನನ್ನೀಗ ನೋಡುತ್ತಿರೆ, ನನಗೇಕೋ ಅನ್ನಿಸಿತು |
ವರುಷಗಳಿನ್ದಲೇ ನೀನು ಪರಿಚಿತನೆನ್ದು ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಸೇರ್ಪಡೆ♪:
ನಿನ್ನ ಪರುಷದಿನ್ದಲೇ ಸಿರಿದುಂಬಿತು ಎನ್ನೊಡಲು |
ನಿನ್ನ ತೆರೆಗಳಿನ್ದಲೇ ಮೆಯ್ದುಂಬಿತು ದಡವು |
ಸನಿಹದಲ್ಲೇ ನಿನ್ತುಕೊಳು, ನನ್ನನ್ನೊಮ್ಮೆ ತಬ್ಬಿಕೊಳು |
ಕೊಣ್ಡೂ ಕೊಳದ ಭಾವನೆಯ ನನ್ನಲ್ಲಿನ್ದು ತುಂಬಿಕೊಡು ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಟಿಪ್ಪಣಿ♪:
೧. ಕೊಣ್ಡೂ ಕೊಳದ ಭಾವನೆಯ = ಒಳಗೊಣ್ಡರೂ ಒಳಗೊಳ್ಳದ ಭಾವನೆಯ
೨. {ಸ್ವರಗಳಿಂ, ದೆದೆಯ ತಲ್ಲಣಗಳಿಂ } ಸ್ವರಗಳಿನ್-ದೆದೆಯ ತಲ್ಲಣಗಳಿನ್-ದೊನ್ದು ಎಂಬನ್ತೆ ಹಾಡಬೇಕು.
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಹರಿಪ್ರಸಾದ ನಾಡಿಗರಿಗೆ ಹುಟ್ಟುಹಬ್ಬದ ನಲ್ವಾರೈಕೆಗಳು
Comments
ಉ: ಮಾತುಪಲ್ಲಟ - ೧೪, ನಾಡಿಗ ನಮನ
In reply to ಉ: ಮಾತುಪಲ್ಲಟ - ೧೪, ನಾಡಿಗ ನಮನ by ksraghavendranavada
ಉ: ಮಾತುಪಲ್ಲಟ - ೧೪, ನಾಡಿಗ ನಮನ
In reply to ಉ: ಮಾತುಪಲ್ಲಟ - ೧೪, ನಾಡಿಗ ನಮನ by kpbolumbu
ಉ: ಮಾತುಪಲ್ಲಟ - ೧೪, ನಾಡಿಗ ನಮನ
In reply to ಉ: ಮಾತುಪಲ್ಲಟ - ೧೪, ನಾಡಿಗ ನಮನ by ಗಣೇಶ
ಉ: ಮಾತುಪಲ್ಲಟ - ೧೪, ನಾಡಿಗ ನಮನ
ಉ: ಮಾತುಪಲ್ಲಟ - ೧೪, ನಾಡಿಗ ನಮನ
ಉ: ಮಾತುಪಲ್ಲಟ - ೧೪, ನಾಡಿಗ ನಮನ
In reply to ಉ: ಮಾತುಪಲ್ಲಟ - ೧೪, ನಾಡಿಗ ನಮನ by asuhegde
ಉ: ಮಾತುಪಲ್ಲಟ - ೧೪, ನಾಡಿಗ ನಮನ
In reply to ಉ: ಮಾತುಪಲ್ಲಟ - ೧೪, ನಾಡಿಗ ನಮನ by kpbolumbu
ಉ: ಮಾತುಪಲ್ಲಟ - ೧೪, ನಾಡಿಗ ನಮನ