ಮೂಢ ಉವಾಚ -41

ಮೂಢ ಉವಾಚ -41

                        ಮೂಢ ಉವಾಚ -41
ಮನದಲ್ಲಿ ಒಂದು ಹೇಳುವುದು ಮತ್ತೊಂದು|
ಹೇಳಿದ್ದು ಒಂದು ಮಾಡುವುದು ಮತ್ತೊಂದು||
ಸುಳ್ಳುಗಳು ಒಂದನಿನ್ನೊಂದು ನುಂಗಿರಲು|


ಗೊಂದಲವು ನೆಮ್ಮದಿಯ ನುಂಗುವುದು ಮೂಢ||
                 
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು|
ಉಸಿರು ನಿಲ್ಲುವವರೆಗೆ ಕಾಡುವವನಿವನು||
ಧೃಢಚಿತ್ತ ಸಮಚಿತ್ತಗಳಾಯುಧಗಳಾಗಿರಿಸಿ|
ಒಳವೈರಿಯನು ಅಟ್ಟಿಬಿಡು ಮೂಢ||
****************
-ಕವಿನಾಗರಾಜ್.

Rating
No votes yet

Comments