ಇಂಟರ್ನೆಟ್ ಕುರಿತ ಇಪ್ಪತ್ತು ವಿಷಯಗಳು

ಇಂಟರ್ನೆಟ್ ಕುರಿತ ಇಪ್ಪತ್ತು ವಿಷಯಗಳು

ಗೂಗಲ್ ಕ್ರೋಮ್ ತಂಡದವರು ಇಂಟರ್ನೆಟ್ ಕುರಿತ ತೀರ ಸಾಮಾನ್ಯ ವಿಷಯಗಳಲ್ಲಿ ಇಪ್ಪತ್ತು ವಿಷಯಗಳನ್ನು ಸುಲಭವಾಗಿ ತಿಳಿಯುವಂತೆ ಒಂದು ಪುಸ್ತಕವನ್ನು ರೆಡಿ ಮಾಡಿದ್ದಾರೆ. ಈ ಪುಸ್ತಕವನ್ನು ನೀವು ನೇರ ಆನ್ಲೈನ್ ಓದಬಹುದು. ಇಂಟರ್ನೆಟ್ ಬೆಳವಣಿಗೆಗೆ ಕಾರಣವಾದ ಒಂದು ಟೆಕ್ನಿಕಲ್ ಪೇಪರ್ ಹೊರಬಂದು ಇಲ್ಲಿಗೆ ಇಪ್ಪತ್ತು ವರ್ಷಗಳಾದ ನೆನಪಿಗೆ ಇದನ್ನು ಗೂಗಲ್ ಹೊರತಂದಿದೆಯಂತೆ.

ಟಿಸಿಪಿ/ಐಪಿ ಅಂದರೇನು? ಕ್ಲೌಡ್ ಕಂಪ್ಯೂಟಿಂಗ್ ಅಂದರೇನು? ಬ್ರೌಸರುಗಳಲ್ಲಿ ಬ್ಯಾಂಕ್ ಹಾಗು ಇ-ಕಾಮರ್ಸ್ ವೆಬ್ಸೈಟುಗಳಿಗೆ ಭೇಟಿ ನೀಡುವಾಗ ಏನೆಲ್ಲ ಗಮನದಲ್ಲಿ ಇಟ್ಟುಕೊಂಡಿರಬೇಕು ಎನ್ನುವುದಲ್ಲದೆ ಬ್ರೌಸರ್ ಹಾಗು ಮುಕ್ತ ತಂತ್ರಾಂಶಗಳ ಕುರಿತ ಒಂದು ಪುಟ್ಟ ಅಧ್ಯಾಯ ಕೂಡ ಇದೆ.

ತಾಂತ್ರಿಕ ವಿಷಯಗಳು ಇದುವರೆಗೂ ಅರ್ಥವಾಗದವರಿಗೆ ಈ ಪುಸ್ತಕ ಪುಟ್ಟ ಕೈಪಿಡಿಯಂತಿದೆ. ತಪ್ಪದೇ ಓದಿ.
ತಂತ್ರಜ್ಞಾನ ಆಸಕ್ತರಿಗೆ ಈ ಪುಸ್ತಕ HTML5ನಲ್ಲಿ ರೆಡಿ ಮಾಡಿರುವರೆಂಬ ಸುದ್ದಿ ಕೇಳಿ ಖುಷಿಯಾಗದೇ ಇರದು.

 

ಪುಸ್ತಕ ಓದಲು ಕ್ಲಿಕ್ ಮಾಡಿ:

http://www.20thingsilearned.com/

 

ಮತ್ತಷ್ಟು ಆಸಕ್ತಿ ಇರುವವರಿಗೆ ಇದೋ ಟಿಮ್ ಬರ್ನಸ್ ಲೀ ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಮಂಡಿಸಿದ ಪ್ರಪೋಸಲ್.

Comments