ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ...
ಮನದಲ್ಲೇನೋ ಹೊಸ ಉಲ್ಲಾಸ
ಹಾಡಿ ಕುಣಿವ ಹೊಸ ಸಂತೋಷ
ಗೆಳೆಯರೊಟ್ಟಿಗೆ ತಿರುಗಾಡೋ ಸಮಯ
ಎಷ್ಟು ಹರಟಿದರೂ ಮುಗಿಯದ ವಿಷಯ
ಏನು ತಿಂದೆವೋ ಕುಡಿದೆವೋ ಅರಿಯದ ಕಾಲ
ಕೂತ ಕಡೆ ಕಣ್ಮುಚ್ಚಿ ಬಿದ್ವಿ ನೆಲದ ಮ್ಯಾಲ
ಹೊತ್ತೇರಿದಂತೆ ಬಂತಲ್ಲೋ ಆ ಯೌವ್ವನದ ದಿನ
ಹುಟ್ಟಿದ ಸೂರ್ಯ ಮುಳುಗದೆ ಇರಲಿ ಅಂತಿತ್ತೋ ಮನ
ಕಂಡದ್ದೇ ನೋಟ, ಆಡಿದ್ದೇ ಆಟ, ಮೋಜಿನಾ ಸಮಯವದು
ಯಾರ ಹಂಗಿಲ್ಲ ಯಾರ ಕಾಟವಿಲ್ಲ ಎನ್ನುವ ದಿನವದು
ಗಳಿಸಲೇನು ಗಳಿಸಿದರಲೇನು ಕಾಲವೆಂದೂ ಕಾಯದು
ಕಣ್ಣಿವೆ ತೆರೆವಷ್ಟರಲ್ಲಿ ಹೋಯಿತೋ ಪ್ರಾಯದ ದಿನವದು
ಮುಳುಗಿದ್ದಾ ಸೂರ್ಯ ಎದ್ದಿರಲು ಮರುದಿನ
ದು:ಖ ದುಮ್ಮಾನಗಳ ಪರಿತಾಪದ ಆ ದಿನ
ಹೊತ್ತು ಕಳೆಯುತಿದೆ ಉಲ್ಲಾಸದ ನಗು ಕರಗುತಿದೆ
ನಾಳೆಯ ಅದೇ ಮುಖಗಳು ಕಣ್ಣ ಮುಂದೆ ನಿಂತಿದೆ
ಹೊತ್ತಿನ ಅರಿವಾಗಲಿಲ್ಲ ಏನೊಂದೂ ಸಾಧಿಸಲಿಲ್ಲ
ಹಿಂದಿರುಗಿ ನೋಡಲು ಧೈರ್ಯವೇ ಸಾಲುತ್ತಿಲ್ಲ
ಮೊದಲಿದ್ದ ಧ್ಯೇಯಗಳೆನು ಕೊನೆಗೆ ಸಾಧಿಸಿದ್ದೇನು
ಮೂರು ದಿನಗಳ ಈ weekend ಕಳೆದೇಹೋಯ್ತೇನು?
{ಶುಕ್ರವಾರ ಸಂಜೆ ಬಾಲ್ಯ; ಶನಿವಾರ ಯೌವ್ವನ; ಭಾನುವಾರ ದು:ಖ ದುಮ್ಮಾನದ ದಿನವಾದರೆ ಸೋಮವಾರದ ಹಗಲು ಬದುಕೇ ಬೇಡವನಿಸುವ ಮುಪ್ಪು :-)}
Comments
ಉ: ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ...
In reply to ಉ: ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ... by manju787
ಉ: ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ...
ಉ: ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ...
ಉ: ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ...
ಉ: ಉಲ್ಲಾಸದಿಂದ ಬತ್ತಿದ ಉತ್ಸಾಹದವರೆಗೆ ...