ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ!

ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ!

ಕಭೀ ಕಭೀ ಮೇರೆ ದಿಲ್ ಮೇ...ಆಗೀಗಲೀ ಮನವು


ಸ್ನೇಹಿತರೇ,

ನಾನೂ ಈ ಹಾಡನ್ನು ಅನುವಾದಿಸಲು ಯತ್ನಿಸಿದ್ದೇನೆ. ’ಆಸು’ ಅವರ ಅನುವಾದ ನೋಡಿ, ನನ್ನ ಅನುವಾದವನ್ನೂ ನಿಮ್ಮ ಮುಂದಿಡ ಬೇಕೆನಿಸಿತು. ತಮ್ಮ ಅನಿಸಿಕೆ ತಿಳಿಸಿ.

ಆಗೀಗಲೀ ಮನವು .....

ಆಗೀಗಲೀ ಮನವು ಈ ಕೊಸರೆಳೆಯ ಹೊಸೆಯುವುದು

ನಿನ್ನೀ ಅಂದ ಮಾಟವೆಲ್ಲ  ಬರಿ ನನ್ನ ಮೀಸಲೆನಿಸುವುದು

ನೀ ತಾರೆಗಳ ಒಡನಾಡಿ ನಾ ಕಾಣದೆಡೆಯಲ್ಲಿ

ಈಗಿಳೆಗೆ ಕರೆದಿಹರು ನಿನ್ನ  ನನ್ನ ಕಾರಣದಲ್ಲಿ


ಆಗೀಗಲೀ ಮನವು ಈ ಕೊಸರೆಳೆಯ ಹೊಸೆಯುವುದು

ಈ ನಿನ್ನ ಮೈಮಾಟ-ಕುಡಿನೋಟವೆನ್ನ ಐಸಿರಿಯಿಹುದು

ಆ ಕುರುಳ ಅವಿರಳ ನೆರಳೆಲ್ಲ ನನಗಾಗಿಹುದು

ಆ ಅಧರ ಈ ನಳಿತೋಳುಗಳೆನ್ನ  ಐಸಿರಿಯಿಹುದು


ಆಗೀಗಲೀ ಮನವು ಈ ಕೊಸರೆಳೆಯ ಹೊಸೆಯುವುದು

ನಾ ನಡೆವಲ್ಲಿ ಸನಾದಿಯ ನಿನಾದ ಮೊಳೆಗುತಿರುವಂತೆ

ಮೊದಳಿರುಳು ನಾನಿನ್ನ ಮೊಗಮರೆಯ ಕಳೆಯುತಿರುವಂತೆ

ನಾಚಿ ನೀನೊರಗಿ ಬೆರೆತು ನನ್ನೊಳು ಕರಗುತಿರುವಂತೆ


ಆಗೀಗಲೀ ಮನವು ಈ ಕೊಸರೆಳೆಯ ಹೊಸೆಯುವುದು

ನಿನ್ನೊಲವ ಪಡೆದಂತೆ ನಾ ಕೊನೆವರೆಗೂ

ಕಣ್ಣೊಲವ ಬೀರುವಂತೆ ನನ್ನತ್ತಲಿರುವರೆಗೂ

ನಾ ಬಲ್ಲೆ, ನಲ್ಲೆ  ನೀನನ್ಯೆಯಾದರೂ  ಮಸೆಯುವುದು


ಆಗೀಗಲೀ ಮನವು ಈ ಕೊಸರೆಳೆಯ ಹೊಸೆಯುವುದು

ಆಗೀಗಲೀ ಮನವು ಈ ಕೊಸರೆಳೆಯ ಹೊಸೆಯುವುದು.

 


Kabhi kabhi mere dil mein khayaal aata hai
Ki jaise tujhko banaya gaya hai mere liye
Tu abse pehle sitaaron mein bas rahi thi kahin
Tujhe zameen pe bulaya gaya hai mere liye

Kabhi kabhi mere dil mein khayaal aata hai
Ki ye badan ye nigaahein meri amaanat hain
Ye gesuon ki ghani chhaon hain meri khatir
Ye honth aur ye baahein meri amaanat hain

Kabhi kabhi mere dil mein khayaal aata hai
Ki jaise bajti hain shehnaaiyaan si raahon mein
Suhaag raat hain ghoonghat utha raha hoon main
Simat rahi hai tu sharma ke apni baahon mein

Kabhi kabhi mere dil mein khayaal aata hai
Ki jaise tu mujhe chaahegi umr bhar yoohin
Uthegi meri taraf pyaar ki nazar yoohin
Main jaanta hoon ki tu geir hai magar yoohin

Kabhi kabhi mere dil mein khayaal aata hai
Kabhi kabhi mere dil mein khayaal aata hai



ನನ್ನ ಅನುವಾದ ಈ ಕೊಂಡಿಯ ಮೂಲಕವೂ ನೋಡಬಹುದು.

http://wp.me/p1bzkL-Z

ನನಗೆ ಆಸುರವರ ಅನುವಾದದ ಕೆಲವು ಸಾಲುಗಳು ಇಷ್ಟವಾದವು.

ನಿಮ್ಮವ,

Comments