ನಾಡಿಗರ ಹುಟ್ಟು ಹಬ್ಬದ ರಸ ಕ್ಷಣಗಳು

ನಾಡಿಗರ ಹುಟ್ಟು ಹಬ್ಬದ ರಸ ಕ್ಷಣಗಳು

ಬೆಳಗ್ಗೆ 4ಕ್ಕೆ ಪೋನ್ ಬಂತು, ಹಲೋ ಯಾರಲಾ, ನಾನುರೀ ನಾಡಿಗರು, ಏನೀಗ, ನಾನು ಕಣ್ರೀ ಸಂಪದ ಹರಿಪ್ರಸಾದ್ ನಾಡಿಗರು, ಸರ್ ಹೇಳಿ ಸಾ. ಹೇಗಿದೀರಾ. ನಾನು ಚೆನ್ನಾಗಿದೀನಿ. ಇವತ್ತು ನನ್ನ ಹುಟ್ಟು ಹಬ್ಬ ಸಂಜೆ 6ಕ್ಕೆ, ನೀವು ಬರಲೇಬೇಕು ಕಣ್ರೀ, ಅಂಗೇ ನಿಮ್ಮ ಗೌಡಪ್ಪಂಗೆ ಸ್ನಾನ ಮಾಡಕಂಡು ಬರಕ್ಕೆ ಹೇಳ್ರೀ, ಯಾಕೇಂದ್ರೆ ನನ್ನ ಮಗೂಗೆ ಇನ್್ಫೆಕ್ಸನ್ ಆಯ್ತದೆ ಅಂದ್ರು. ಸರಿ ಸಾ ಅಂದು ಮತ್ತು ಅಂಗೇ ಪಾಚ್ಕೊಂಡೆ. ಸರಿ ಬೆಳಗಿನ ನಮ್ಮ ಕಾರ್ಯಕ್ರಮದಲ್ಲಿ ಎಲ್ಲಾರೂ ಸಿಕ್ಕರು. ನೋಡ್ರಲಾ ನಮ್ಮ ನಾಡಿಗರು ಪೋನ್ ಮಾಡವ್ರೆ ಅವರ ಹುಟ್ಟು ಹಬ್ಬವಂತೆ ನಾವೆಲ್ಲಾ ಹೋಗಬೇಕು ಕಲಾ ಅಂದೆ. ಸರಿ ಎಲ್ಲಾ ಇಸ್ಮಾಯಿಲ್ ಬಸ್್ಗೆ ಹೊಂಟ್ವಿ. ಹೊರಡಬೇಕಾದ್ರೆ ರಾಜರು ಇದ್ದಂಗೆ ಇದ್ವಿ, ಅಲ್ಲಿ ತಲಪೋ ಹೊತ್ತಿಗೆ ಎಲ್ಲಾರೂ ಕಾರ್ಪೊರೇಸನ್ ಕಸಾ ಹೊಡಿಯೋರು ತರಾ ಆಗಿದ್ವಿ. ಸಾನೇ ಧೂಳು. ಯಾಕಲಾ ಇಸ್ಮಾಯಿಲ್ ರಸ್ತೆ ಹಿಂಗೆ ಐತೆ ಅಂದ್ರೆ, ಮಗಾ ಸಿದ್ದರಾಮಯ್ಯ ತರಾ ಯಡೂರಪ್ಪಂಗೆ ಸಾನೇ ಉಗಿದ. ನೋಡಲಾ ಇವನು ಗ್ರಾಮ ಪಂಚಾಯ್ತ್ ನಲ್ಲಿ ವಿರೋಧ ಪಕ್ಸ ನಾಯಕ ಆಗಬೋದು ಅಂದ ಗೌಡಪ್ಪ. ಏ ಥೂ.
ಸರಿ ನಾಡಿಗರು ಮನೆಗೆ ಹೋದರೆ ಬಸ್ ಚಾರ್ಜಿಗಿಂತ ಸಾನೇ ದುಡ್ಡು ಆಗಿತ್ತು. ಇನ್ನು ಮನೆಯೊಳಗೆ ಹೋಗೇ ಇಲ್ಲ. ನಾಡಿಗರ ಅಮ್ಮ ಲೇ ಹರಿ, ಷಾಮಿಯಾನ ಕಟ್ಟೋರು ಬಂದಿದಾರೆ. ಷಾಮಿಯಾನ ಹೊಡೆಸಿ ಅಂಗೇ ಚೇರ್ ಹಾಕ್ಸಪ್ಪಾ ಅಂದ್ರು. ಏನಲಾ ಇವರ ಅಮ್ಮ ಹಿಂಗಂತರಲ್ಲಾ ಅಂದ ಗೌಡಪ್ಪ. ಸದ್ಯ ಭಿಕ್ಸೆ ತಂದು ಹಾಕಿಲ್ಲವಲ್ಲಾ ಅದಕ್ಕೆ ಖುಸಿ ಪಡಿ ಅಂದ ಸುಬ್ಬ. ಸರಿ ನಾಡಿಗರು ಬಂದೋರೆ ಓಹೋಓಓಓಓಓಓಓಓಓಓಓಓಓಓಓಓ ಕೋಮಲ್ ಬನ್ನಿ ಬನ್ನಿ ಅಂದು ಒಳಿಕ್ಕೆ ಕರೆದುಕೊಂಡು ಹೋದರು.ನೋಡೇ ಇವರೇ ಕೋಮಲ್, ನಮ್ಮ ಸಂಪದದಲ್ಲಿ ಪೆಕರು ಪೆಕರು ತರಾ ಬರೀತರಲ್ಲಾ ಅದೇ ನಾನು ಗುಲ್ಡು ಅಂತ ಹೇಳ್ತಿದ್ನಲ್ಲಾ ಇವರೇ ಅಂತಾ ಅವರ ಹೆಂಡರಿಗೆ ಪರಿಚಯ ಮಾಡಿಸಿದ್ರು. ಇವರ ಹೇಳಿದ್ದ ಹೊಡೆತಕ್ಕೆ ಆ ವಮ್ಮ ಚಾ ಬದಲು ನೀರು ಕೊಟ್ಟು ಸುಮ್ಕಾದ್ರು,  ಏನಲಾ ನೀರು ಕುಡಿಯೋಕ್ಕೆ ಇಲ್ಲಿಗೆ ಬರಬೇಕಾಗಿತ್ತಾ ಅಂತಾ ಸಾನೇ ಗೌಡಪ್ಪ ಉಗಿದ.
ಹೌದು ನಿಮ್ಮ ಲೇಖನ ಸಂಪದದಲ್ಲಿ ಕಡಿಮೆ ಯಾಗಿದೆಯಲ್ಲಾ ಅಂದ್ರು. ಏನ್ ಸಾರ್ ಇದ್ದಕ್ಕಿದ್ದಂತೆ ಯಡೂರಪ್ಪನ ತರಾ ಎಲ್ಲಾ ಬದಲಾಯಿಸಿ ಬಿಟ್ಟಿರಿ. ಹಳೇದೇ ಚೆನ್ನಾಗಿತ್ತು ಅಂದೆ. ಏನ್ಮಾಡಕ್ಕೆ ಆಗುತ್ತೆ ಆರ್.ಎನ್.ಡಿ ಮಾಡಿದೀನಿ ಅಂದ್ರು. ಸರಿ ಬುಡಿ ಸರ್ ಅಂದೆ.
ಅಟೊತ್ತಿಗೆ ನೋಡ್ತೀನಿ ಸಂಪದದ ಗೆಳೆಯರು ಅಲ್ಲೇ ಇದ್ದಾರೆ. ಹರೀಶ್ ಆತ್ರೇಯ ಸರ್ ಸಂಪದ ಕಾರ್ಯಕ್ರಮ ಮಡಗಿದೀವಿ ಅಂತಾ ಸಾನೇ ಇನ್ವಿಟೇಸನ್ ಹಂಚತಾ ಇದ್ರು, ಗೌಡಪ್ಪ ಏನಲಾ ಈ ವಯ್ಯ ರಾಜಕೀಯ ಪಕ್ಸದೋರು ತರಾ ಕೊಡ್ತಾವ್ನೆ ಅಂದ. ಏ ಸುಮ್ಕಿರ್ರಿ ಆ ಮ್ಯಾಕೆ ನಿಮ್ಮ ಮೇಲೆ ಒಂದು ಲೇಖನ ಬರೀತಾರೆ ಅಂದೆ. ಇನ್ವಿಟೇಸನ್ ತುದಿ ಹರಿದು ಹಲ್ಲಿಗೆ ಚುಚ್ಕಂತಾ ಇದ್ದ. ಹಲ್ನಾಗೆ ಅಡಿಕೆ ಸಿಕ್ಕಾಕಂಡಿತ್ತಂತೆ. ಏ ಥೂ, ಸುರೇಶ್ ಹೆಗ್ಡೆ ಮೂಲೆಯಲ್ಲಿ ಕೂತುಕೊಂಡು ಕವಿತೆ ಬರೀತಾ ಇದ್ರು. ಯಾಕ್ ಸಾ. ಗಲಾಟೆ ಕಣ್ರೀ ಅಂದ್ರು. ಗೋಪಿನಾಥರಾಯರು ನೋಡಿ ನಾಡಿಗರೆ 8ಕ್ಕೆ ಸರಿಯಾಗಿ ಸುರು ಮಾಡ್ಬೇಕು ಅಂತ ಮಿಲ್ಟ್ರಿ ಸ್ಷೈಲ್ನಾಗೆ ಹೇಳ್ತಾ ಇದ್ರು.
ಜಯಂತ್ ರಾಮಚಂದ್ರ ನನ್ನ ಆತ್ಮಹತ್ಯೆ ಅಂತ ಕಥೆ ಹೇಳ್ತಾ ಇದ್ರು, ನಾಡಿಗರು ಅಮ್ಮ ಬಂದು ಬುಡುತು ಅನ್ನಿ. ಹುಟ್ಟಿದ ದಿನಾ ಸಾಯೋ ಮಾತು ಯಾಕೆ ಅಂದ್ರು. ಶರ್ಮ ಜೇನು ಸಾಕಾಣಿಕೆ ಬಗ್ಗೆ ಹೇಳ್ತಾ ಇದ್ರೆ. ನಮ್ಮ ಗಣೇಸಪ್ಪ ಕೇಕಲ್ಲಿ ಏನು ಹುಳ ಇರುತ್ತೆ ಅಂತಾ ಹೆಗ್ಡೆಯವರ ಮಗಳಿಗೆ ಹೇಳ್ತಾ ಇದ್ರು. ಯಾಕ್ ಸಾ. ಇವಳು ಮೆಡಿಕಲ್ ಓದ್ತಾ ಇರೋದ್ರಿಂದ ಅನಾಟಮಿ, ಮಕಾಟಮಿ,ಸಾಕಾಟಮಿ ಎಲ್ಲಾ ಇರುತ್ತೆ, ಮುಂಚೆನೇ ಹೇಳಿದ್ರೆ ಒಳ್ಳೇದು. ಹೊಗೆ ಹಾಕ್ಸಿಕೊಳ್ಳೋರ ಸಂಖ್ಯೆ ಕಡಿಮೆ ಆಯ್ತದೆ ಅಂದ್ರು. ಗೋಪಾಲ ಕುಲಕರ್ಣಿ ಮಂಜನ ಕಥೆ ಹೇಳ್ತಾ ಇದ್ರು, ಅವರ ಹೆಂಡರು ಮನೆ ಇಸ್ಯಾ ಇಲ್ಲಿ ಹೇಳ್ತೀರಾ ಅಂತಾ ಸಾನೇ ಉಗೀತಾ ಇದ್ರು, ದುಬಾಯಿ ಮಂಜಣ್ಣ ಗೌತಮಿ ಟಿಆರ್ ಪಿ ಜಾಸ್ತಿ ಆಗಲಿ ಅಂತ ಒಂದು ಗಂಟೆ ಧಾರವಾಹಿಯನ್ನು 5ನೇ ನಿಮಿಸದಲ್ಲಿ ಹೇಳ್ತಾ ಇದ್ರು. ಪ್ರಸನ್ನ ಅವಾಗವಾಗ ಬಂದು ಸೀರಿಯಲ್ ಲೈಟ್ ಟೆಸ್ಟ್ ಮಾಡ್ತಾ ಇದ್ರು. ಯಾರಲಾ ಈ ಹುಡುಗ. ಏ ಸುಮ್ಕಿರ್ರಿ. ನೋಡಕ್ಕೆ ಹುಡುಗ ಸಾನೇ ಬುದ್ದಿ ಅಂದೆ. ಅಲ್ಲೇ ಮಧ್ಯದಲ್ಲಿ ಅಬ್ದುಲ್ ಇಸ್ಲಾಂ ಅಂತ ಭಾಸ್ಕರ ಹಾಗೂ ಮಹೇಶ್್ಗೆ ರೇಗಿಸಿ ಮಜಾ ತಗೊಂತಾ ಇದ್ರು. ಮಧ್ಯೆ ಮಧ್ಯೆ ಸುರೇಶ್ ಹೆಗ್ಡೆ ಸೇರ್ತಾ ಇದ್ರು. ಮಾಲತಿ, ಕಮಲಾ,ವಾಣಿ,ಶಾನಿ ಎಲ್ಲಾರೂ ಹಾಡು ಹೇಳ್ತಾ ಇದ್ರು, ಆರತಿ ಎತ್ತಿರೇ ನಾಡಿಗರಿಗೆ, ನಾಡಿಗರಿಗೆ ಅಂತಾ ಮೂರು ಸಾರಿ. ಕಡೆಗೆ ಸಂಪದಕ್ಕೆ ಜೈ ಅನ್ನೋರು.ಆದ್ರೆ ವಾಣಿ ಮಾತ್ರ ಅಹಲ್ಯ ಕಲ್ಲಾದಳು ಅಂತಿದ್ರು,
ಸರಿ ಕೇಕ್ ಮಾಡಪ್ಪ ಅಂದ್ರು ನಾಡಿಗರು ಅಮ್ಮ. ಅಮ್ಮಾ ಚಾಕು ಎಲ್ಲಿ. ಅಂದ್ರೆ ಅವರ ಹೆಂಡಿರು ನೈಲ್ ಕಟರ್ ಚಾಕು ತಂದು ಕೊಟ್ರು. ಯಾಕವ್ವಾ, ನಮ್ಮ ಚಾಕೂಲ್ಲಿ ಈರುಳ್ಳಿ ಹೆಚ್ಚವ್ರೆ ಅಂದ್ರು, ಮೊಟ್ಟೆ ಹಾಕಿಲ್ಲ ತಾನೆ ಅಂದ್ರು ನಾಡಿಗರು ಅಮ್ಮ. ಕವಿ ನಾಗರಾಜರು ಖುಸಿ ತಡೆಯಲಾಗದೆ ಎಲವೋ ಮೂಢ ಅಂದ್ರು. ಏನೋ ಇದು ನಾನೇನೋ ನಿನ್ನನ್ನ ಬುದ್ದಿವಂತ ಅನ್ಕಂಡಿದ್ದೆ ಇವರು ನೋಡಿದ್ರೆ ಮೂಢ ಅಂತರಾಲ್ಲ ಅಂದ್ರು ನಾಡಿಗರು ಅಮ್ಮ, ಇದು ಕವಿತೆ ಗಾಬರಿಯಾಗಬೇಡ್ರಿ ಅಂದ್ರು ನಾಗರಾಜರು, ನಾವಡರು ಕೇಕ್ ತಿನ್ನದೆ ಸಾರು ಅನ್ನ ತಿಂದು ಶೇಷನ ಜೊತೆ ಊರಿಗೆ ಹೊಂಟ್ರು. ಗೌಡಪ್ಪ ಸಾನೇ ಕಡಿಯೋದು ಇರತ್ತೆ ಅಂತಾ ಬೆಳಗ್ಗಿನಿಂದ ಊಟ ಮಾಡಿರಲಿಲ್ಲ. ಕಡೆಗೆ ನಮಗೂ ಸಸ್ಯಹಾರಿ ಊಟ ಹಾಕಿದ್ರು. ಸುಬ್ಬ ಮೂರು ಲೀಟರ್ ಮಜ್ಜಿಗೆ ಕುಡಿದಿದ್ದ,. ಕೆರೆತಾವ ಹೋಗಬೇಕು ಅನ್ನೋನು, ಸಂಪದ ನಿರ್ವಾಹಕ ತಂಡದೋರು ಅಂಗೇ ಹಲ್ಲು ಕಡಿಯೋರು,. ಯಾಕ್ ಸಾ,. ಮಗನೇ ಲೇಖನ ಬರಿ ನೀನು, ಯಾರಿಗೂ ಗೊತ್ತಾಗದಂಗೆ ನಾವೇ ಬ್ಲಾಕ್ ಮಾಡ್ತೀವಿ ಅನ್ನೋರು. ಬೇಡ ಸಾ, ರಾತ್ರಿ ಸಾಮಿಯಾನ ಬಿಚ್ಚಿದ್ವಿ. ಸಾಮಿಯಾನದೋರಿಗೆ ಊಟ ಹಾಕಿರಿ ಅಂದ್ರು ನಾಡಿಗರ ಅಮ್ಮ., ಸರಿ ತಿಂದು ಹೊಂಟ್ವಿ. ಒಂದು ಸರ್ಟ್ ಪೀಸ್ ಕೊಟ್ಟರು. ನಾಡಿಗರು ಹುಟ್ಟು ಹಬ್ಬಕ್ಕೆ ಹೋಗಿದ್ದಕ್ಕೆ ಏನಪ್ಪ ಲಾಭ ಅಂದ್ರೆ ಸರ್ಟ್ ಪೀಸ್, ಅಂಗೇ ಒಂದಷ್ಟು ಡಿಗಿನಿಟಿ ಬಗ್ಗೆ ತಿಳಿದುಕೊಂಡ್ವಿ ಅಂತಾನೆ ಗೌಡಪ್ಪ.  ಬಡ್ಡೆ ಐದನ ಬುದ್ದಿ ಎಲ್ಲಿ ಹೋಯ್ತದೆ.

Comments