ಆನಂದದ ಸಂಪದ ಸಮ್ಮಿಲನ..

ಆನಂದದ ಸಂಪದ ಸಮ್ಮಿಲನ..

ಕವನ


ರವಿವಾರದ ಮಧ್ಯಾಹ್ನ ಪ್ರತಿವಾರದ ಹಾಗೆ ಬೋರು ಹೊಡೆಯದೆ ಕಳೆಯಿತು. ಪ್ರಥಮ ಬಾರಿಗೆ ಸಂಪದಿಗರ ಮುಖಾಮುಖಿ ಭೇಟಿ ನಡೆಯಲು ಅನುವು ಮಾಡಿಕೊಟ್ಟಿತು ಸಂಪದ ಸಮ್ಮಿಲನ. ನಿರೀಕ್ಷೆ ಮಟ್ಟದಲ್ಲಿ ಸಂಪದಿಗರು ಬರದೆ ಇದ್ದರು ಕೆಲವರನ್ನಾದರೂ ಭೇಟಿ ಮಾಡಿದ ಸಂತಸ ಇತ್ತು. ಆತ್ರೇಯರು, ರವಿ ಗೌಡ, ರಘು, ಗೋಪಿನಾಥರು, ಸುರೇಶ ಹೆಗ್ಡೆ ಅವರು, ಗೋಪಾಲ್ ಕುಲಕರ್ಣಿ, ದುಬೈ ಮಂಜಣ್ಣ, ಶ್ಯಾಮಲಾ ಜನಾರ್ಧನ್, ರಾಮಸ್ವಾಮಿ, ಪಾರ್ಥಸಾರಥಿ, ನೀರ್ಕಾಜೆ ಇವರನ್ನೆಲ್ಲ ಭೇಟಿ ಮಾಡಿ ಆನಂದವಾಯಿತು. ಕಥೆ, ಕವನ , ಪದ್ಯಗಳು, ಚರ್ಚೆಗಳು, ಪುಸ್ತಕ ವಿನಿಮಯ ಬಹಳ ಚೆನ್ನಾಗಿತ್ತು. ಮುಂದಿನ ಸಮ್ಮಿಲನಕ್ಕೆ ಕಾಯುವಂತೆ ಮಾಡಿತು.

ರವಿವಾರದ ಅಪರಾಹ್ನದ ಶುಭ ಮಿಲನ

ಸಂತಸದಿ ನಡೆಯಿತು ಸಂಪದ ಸಮ್ಮಿಲನ..

ಪುಳಿಯೋಗರೆ ಬಾದಾಮ್ ಪುರಿಯ ಭೋಜನ..

ಕಥೆ,ಚರ್ಚೆ,  ಕವಿತೆ, ಕವನ ಪದ್ಯಗಳ ವಾಚನ..

ನನ್ನ ಮೊದಲ ಸಂಪದ ಸಮ್ಮಿಲನ..

ನಡೆಯಿತು ಸಂಪದಿಗರ ನಡುವಣ..

Comments