ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು

ಪ್ರಸಕ್ತ ಯಡ್ಡಿ ರಾಜಕೀಯವನ್ನು ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ.

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು..

ಏನೇ ಬರಲಿ ಯಾರಿಗು ಸೋತು ತಲೆಯ ಬಾಗೆನು..

ಎಂದಿಗು ನಾನು ಹೀಗೆ ಇರುವೆ ಎಂದು ನಗುವೆನು ಹೀಗೆ ನಗುತಲಿರುವೆನು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು

 

ಹಗರಣವಾಗಲಿ ಗಲಾಟೆಯಾಗಲಿ ಆಟ ನಿಲ್ಲದು..

ಸಿದ್ದುವೆ ಬರಲಿ ಕುಮಾರ ಬರಲಿ ಕ್ಯಾರೆ ಎನ್ನೆನು..

ಕಷ್ಟವೋ ಸುಖವೋ ಅಳುಕದೆ ಆಡಿ ತೂಗುತಿರುವೆನು....ತೂಗುತಿರುವೆನು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು

 

ಭೂಮಿಯ ನುಂಗಿ ನೀರನು ಕುಡಿದರೆ ಹಣವು ಬರುವುದು..

ಸಿಡಿ ಯ ಕೊಟ್ಟರು ದಾಖಲೆ ಇಟ್ಟರು ಇನ್ನು ನುಂಗುವೆನು

ಯಾರೇನಂದರು ಕೇರೇ ಮಾಡದೆ ಮುಂದೆ ನಡೆವೆನು ಹೀಗೆ ನುಂಗುತಿರುವೆನು...

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು

ಮಕ್ಕಳ ಖಾತೆಗೆ ಕೋಟಿಯ ಹಣವು ಜಮೆಯಾಗುತಿದೆ..


ಏಕರೆಯಗಟ್ಟಲೆ ಭೂಮಿಯು ಶೋಭಾ ತೆಕ್ಕೆಗೆ ಬಿದ್ದಿದೆ.


ಹೀಗೆ ನುಂಗಿ ಕರ್ನಾಟಕವ ಬಳಿದು ಬಾಚುವೆ..ಬಳಿದು ಬಾಚುವೆ..


ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು..

ಏನೇ ಬರಲಿ ಯಾರಿಗು ಸೋತು ತಲೆಯ ಬಾಗೆನು..

ಎಂದಿಗು ನಾನು ಹೀಗೆ ಇರುವೆ ಎಂದು ನಗುವೆನು ಹೀಗೆ ನಗುತಲಿರುವೆನು

Comments