ಕಮ್ಯುನಿಕೇಶನ್ ಗ್ಯಾಪ್

ಕಮ್ಯುನಿಕೇಶನ್ ಗ್ಯಾಪ್

ಕಮ್ಯುನಿಕೇಶನ್ ಗ್ಯಾಪ್

ಎಂದಿನಂತೆ ಅಂದೂ ಕೆಲಸ ಜೋರಾಗಿಯೇ ಇತ್ತು, ರೂಂ ನಲ್ಲಿ ಮತ್ತಿಬ್ಬರು ಹಬ್ಬಕ್ಕೆ ತಮ್ಮ ಊರಿಗೆ ಹೋಗಿದ್ದರು. ಕ್ಲೈಂಟ್ ಅನ್ನು ಬಯ್ಯುತ್ತಲೇ ನಿದ್ದೆಯಿಂದ ಎದ್ದೆ, ನೀರು ಕಾಯಿಸುವ ಕೊಯ್ಲ್ ಕೂಡ ಏನೋ ಕಾರಣದಿಂದ ಬಿಸಿಯಾಯಾಗುತ್ತಿರಲಿಲ್ಲ, ಆ ಉಗುರು ಬೆಚ್ಚಗಿನ ನೀರನ್ನು ತಲೆಮೇಲೆ ಹೊಯ್ದದ್ದು ಆಯಿತು. ದೇವರಪೂಜೆ ಒಂದೇ ಕ್ಷಣದಲ್ಲಿ ಮುಗಿಸಿ ಕೈಗೆ ಸಿಕ್ಕ ಮುದ್ದೆಯಾದ ಜೀನ್ಸ್ ಮತ್ತು ಒಂದು ಟಿ-ಶರ್ಟ್ ಒಳಗೆ ನನ್ನನ್ನು ನಾನು ತೂರಿಸಿಕೊಂಡೆ. ಡ್ರವರ್ ನಲ್ಲಿದ್ದ ನನ್ನ ಮಂಗಳಸೂತ್ರ (ID Card) ತೊಟ್ಟು,ಮನೆಯಿಂದ ಹೊರ ನಡೆಯ ಬೇಕು ಎಂದು ಕೊಂಡ ಹೊತ್ತಿಗೆ, ಡ್ರವರ್ ಮೇಲಿದ್ದ ಅರವಿಂದ್ ನ ಮೊಬೈಲ್ ಕಣ್ಣಿಗೆ ಬಿತ್ತು.

ಈಗೀಗ ಅವನಿಗೂ ತುಂಬಾ ಕೆಲಸ, ತಡ ರಾತ್ರಿ ನಾವೆಲ್ಲರೂ ಮಲಗಿದ ಮೇಲೆ ರೂಂ ಗೆ ಬರುತಿದ್ದ, ಮರುದಿನ ನಾವೆಲ್ಲರೂ ಏಳಬೇಕಾದರೆ ಆಫೀಸ್ ಗೆ ಹೋಗಿ ಆಗುತಿತ್ತು.ಇವತ್ತೂ ನಾನು ಏಳುವಾಗಲೇ ಅವನದ್ದು ಎಲ್ಲ ತಯಾರಿ ಮುಗಿದಿತ್ತು."ಅರ್ರೆ ಆಫೀಸ್ ಗೆ ಹೋಗುವ ತರಾತುರಿಯಲ್ಲಿ ಪುಣ್ಯಾತ್ಮ ಮೊಬೈಲ್ ಮರೆತ್ತಿದ್ದಾನೆ !!" ಎಂದು ಆ ಮೊಬೈಲ್ ಅನ್ನು ನನ್ನ ಕಿಸೆ ಯಲ್ಲಿ ಹಾಕಿ, ಮನೆಯನ್ನು ಲೋಕ್ ಮಾಡಿ ಆಫೀಸ್ ತಲುಪಿದೆ.

ಆಫೀಸ್ ತಲುಪುತಿದ್ದಂತೆ ಮೆನೆಜೆರ್ ಮತ್ತು ಕ್ಲೈಂಟ್ ಗಳ ಕಿರಿಕಿರಿ ನಡುವೆ ನನಗೆ ಅರವಿಂದ್ ಗೆ ಮೊಬೈಲ್ ಕೊಡಲು ನೆನಪಾಗಲೇ ಇಲ್ಲ, ಸಂಜೆ ಆಫೀಸ್ ನಿಂದ ಹೊರಟಾಗ ಜೇಬಲ್ಲಿದ್ದ ಮೊಬೈಲ್ ವೈಬ್ರಶನ್ ಆದಾಗ ಅದರ ನೆನಪಾದದ್ದು,ಈ ವಿಚಾರ ಅವನಲ್ಲಿ ಹೇಳುವ ಎಂದು ಅವನ ಆಫೀಸ್ ಎಕ್ಸ್ಟೆನ್ಶನ್ ಗೆ ಕರೆ ಮಾಡಿದೆ, ಯಾರೂ ಕರೆ ಎತ್ತಲಿಲ್ಲ,ಅವ ಮನೆ ದಾರಿಯಲ್ಲಿರುವ ಎಂದು ಸುಮ್ಮನಾದೆ.

ನಮ್ಮ  ಮನೆ ಬಿಲ್ಡಿಂಗ್ ತಲುಪುವಾಗ ಹಿಡಿ ಬಿಲ್ಡಿಂಗ್ ನಲ್ಲಿ ಯಾರು ಇರಲಿಲ್ಲ, ಎಲ್ಲ ಹಬ್ಬಕ್ಕೆಂದು ತಮ್ಮತಮ್ಮ ಊರಿಗೆ ಹೋಗಿದ್ದರು, ನಾನು ಕೆಳಗಿನ ಪಾರ್ಕಿಂಗ್ ಮತ್ತು ಮಳಿಗೆ ಮೆಟ್ಟಲು ಸಾಲುಗಳ ದೀಪ ಹೊತ್ತಿಸಿ, ಮೂರನೇ ಮಹಡಿ ತಲುಪಿದೆ.ಬೆಳಗ್ಗೆ ಹಾಕಿದ್ದ ಬೀಗ ಹಾಗೆ ಬಿಗಿಯಾಗಿತ್ತು, ಆದರೆ ಬೆಳಗ್ಗೆ ಆರಿಸಿ ಹೋಗಿದ್ದ ಒಳಗಿನ ಕೋಣೆಯ ದೀಪ ಉರಿಯುತ್ತಿತ್ತು, ನಾನು ಬೆಳಗ್ಗೆ ಮರೆತಿದ್ದರು ಮರೆತಿರ ಬಹುದು ಎಂದು ಕೊಂಡು, ಬೀಗ ತೆಗೆದು ಒಳ ಹೊಕ್ಕಾಗ ಆಶ್ಯರ್ಯ ಕಾದಿತ್ತು.

ಅರವಿಂದ್ !!!! ಮನೆಯಲ್ಲಿ ಬಂಧಿ ಯಾಗಿದ್ದ. :(
ಇಬ್ಬರ ನಡುವಿನ ಕಾಮ್ಮುನಿಕೆಶನ್ ಗಾಪ್ ಅವನನ್ನು ೪ ಅಂತಸ್ತಿನ ಜೈಲಿನ ಏಕೈಕ ಬಂಧಿ  ಮಾಡಿತ್ತು!!!

ಅವ ಯಾಗಿನಂತೆ ಅಂದೂ ಆಫೀಸ್ ಗೆ ಹೋಗಿದ್ದು ನಿಜ ಆದರೆ ನಡುವೆ ಏನೋ ಡಾಕುಮೆಂಟ್ ತರಲು ಮನೆಗೆ ಬಂದಿದ್ದ ಒಳ ಕೊನೆಯಲ್ಲಿ ಅವ ಡಾಕುಮೆಂಟ್ ಹುಡುಕುವುದರಲ್ಲಿ ನಿರತ ನಾಗಿದ್ದರೆ , ನಾನು ನನ್ನ ಗಡಿಬಿಡಿಯಲ್ಲಿ ಅವನ ಇರುವನ್ನು ಗಮನಿಸಲಿಲ್ಲ, ಬೀಗ ಜಡಿದು ಆಫೀಸ್ ಸೇರಿದೆ, ಅಲ್ಲಿ ಯಾವುದೇ ಸಂಪರ್ಕಿಸಲು ಮಾಧ್ಯಮ ಇಲ್ಲದ ಅವನು ಸೆರೆಮನೆ ವಾಸ ಅನುಭವಿಸಿದ.

ಕಾಮತ್ ಕುಂಬ್ಳೆ

Rating
No votes yet

Comments