ಮರಳುಗಾಡಿನಲ್ಲಿ ಮಲೆನಾಡು!

ಮರಳುಗಾಡಿನಲ್ಲಿ ಮಲೆನಾಡು!

ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ  ಪಶ್ಚಿಮ ಘಟ್ಟ, ಹಲವಾರು ನದಿಗಳು, ನೂರಾರು ಜಲಪಾತ ಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿ ಗಳು, ದಟ್ಟ ಕಾನನ ಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿದೆತ್ತಣ ಸಂಭಂದ? ಓಮನ್ ದೇಶದ ದಕ್ಷಿಣ ಭಾಗದ  ದೋಫರ್ ಎನ್ನುವ ಪ್ರಾಂತ್ಯ ಇಂತಹ ಗಿರಿಶಿಖರಗಳಿಂದ ತುಂಬಿದೆ, ಅಲ್ಲಲ್ಲಿ ಹರಿಯುವ ನದಿಗಳು, ಚಿಕ್ಕ ಚಿಕ್ಕ ಜಲಪಾತಗಳು, ನದಿ ತೊರೆಗಳು ನಮ್ಮ ಮಲೆನಾಡನ್ನು ಜ್ನಾಪಿಸುತ್ತವೆ. ಕಛೆರಿಯ ಕೆಲಸದ ಸಲುವಾಗಿ ಕುಟುಂಬ ಸಮೇತ ಇಲ್ಲಿ ಠಿಕಾಣಿ ಹೂಡಿದ್ದೀನಿ, ಸಾಧ್ಯವಾದಾಗಲೆಲ್ಲ  ಇಂತಹ ಸ್ಥಳಗಳಿಗೆ ಹೋಗಿ ಬರುತಿದ್ದೇನೆ. ಸಲಾಲ್ಹ ಎನ್ನುವ ನಗರ ದೋಫರ್ ಪ್ರಾಂತ್ಯದ ರಾಜಧಾನಿ ಹಾಗು ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ. ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಬಹು ಜನಪ್ರಿಯ. ಸುತ್ತ ಮುತ್ತಲಿನ ಅರಬ್ ದೇಶಗಳಾದ, ಸೌದಿ ಅರೇಬಿಯ, ಯುಏಇ, ಕತಾರ್, ಬಹ್ರೇನ್, ಕುವೈತ್ ಮತ್ತಿತರ ಅರಬ್ ದೇಶಗಳ ಪ್ರಜೆಗಳು ಅವರ ದೇಶದಲ್ಲಿರುವ ಬಿಸಿವಾತಾವರಣದಿಂದ ತಪ್ಪಿಸಿಕೊಳ್ಳಲು ಸಲಾಲ್ಹ ದಲ್ಲಿನ ತಂಪಾದ ಹವೆ ಮತ್ತು ವಾತಾವರಣ ವನ್ನು ಸವಿಯಲು ಸಾಮನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಭೇಟಿಯಿಡುತ್ತಾರೆ. ಸರಕಾರ ಸಹ ಪ್ರವಾಸಿ ಹಬ್ಬ ವನ್ನಾಗಿ ಆಚರಿಸಿ ಪ್ರೋತ್ಸಾಹ ನೀಡುತ್ತದೆ. ಕೆಳಗಡೆಯಿರುವ ಫೋಟೊಗಳು ಈ ಸ್ಥಳದ ಬಗ್ಗೆ ಕುತುಹಲ ಮೂಡಿಸುವುದು ಸುಳ್ಳಲ್ಲ. ಒಮಾನ್ ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗು ಈ ಸ್ಥಳದ ಬಗ್ಗೆ ಅರಿವಿರುತ್ತದೆ ಹಾಗು ಸಾಧ್ಯವಾದವರೆಲ್ಲರು ಭೇಟಿಯಿತ್ತಿರುತ್ತಾರೆ. ಯಾರ ಬಾಯಲ್ಲಿ ಕೇಳಿದರು ಒಮಾನ್ ನಲ್ಲಿ ನೋಡೊದಿಕ್ಕೆ ಏನಿದೆ ಅಂದ್ರೆ ಎಲ್ಲರು ಹೇಳೋದೆ ಸಲಾಲ್ಹ.

ಮಸ್ಕತ್ ನಿಂದ ೧೦೦೦ ಕಿಲೋ ಮೀಟರ್ ದೂರದಲ್ಲಿದೆ.

 

ರಂಗನಾಥ.ಪಿ.ಎಸ್

 

 

ನಾನಿರುವ ಮನೆಯ ಮುಂದಿನ ತೋಟ

 

 

ಪಿಕ್ನಿಕ್ ಗೆ ಹೋದಾಗ ರಸ್ತೆಯ ಮಧ್ಯದಲ್ಲಿ ನನ್ನ ಮಗಳು ಮತ್ತು ಮಗ

 

ಕಾಡಿನಲ್ಲಿ ಒಂಟೆಗಳು

 

ಬೋಟಿಂಗ್ ತಾಣ

 

 

ಮಗ್ಸೇಲ್ ಬೀಚ್ ಹತ್ತಿರ ಒಂದು ಬೆಟ್ಟ

 


 

 

 

 

 

 

 

ಕೆಳಗಿನ ಚಿತ್ರಗಳ ಕೃಪೆ: ಅಂತರ್ಜಾಲ 

 

 

ಮಳೆಗಾಲದಲ್ಲಿ ದುಮ್ಮಿಕ್ಕಿ ಹರೆಯುವ ಜಲಪಾತ

 

ವಾದಿ ದರ್ಬಾತ್ ನಲ್ಲಿರುವ ಜಲಪಾತ, ಮಳೆಗಾಲ ದಲ್ಲಿ ಮಾತ್ರ ಹರಿಯುತ್ತದೆ

ಚಿಕ್ಕ ಚಿಕ್ಕ ತೊರೆಗಳು

 

 

 

 

ಅಯ್ನ್ ಘಾರ್ಜಿಜ್ ಗೆ ಹೋಗುವ ನುಣುಪಾದ ರಸ್ತೆ

Rating
No votes yet

Comments