ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
೧
ಅಶ್ವಥ್ಥನಗರದ ಮಕ್ಕಳು ಬೆಳೆದಿದ್ದೇ ಹಾಗೆ!ಗಾ೦ಧೀಜಿ ಯಾರು ಎ೦ದು ಕೇಳಿದರೆ ಆ ಮಕ್ಕಳು ಹೇಳುತ್ತಿದ್ದ ಹೆಸರು ಸುಪ್ರಸನ್ನ ರಾಯರದು!ಊರಿನ ಪ್ರತಿಯೊಬ್ಬ ಮಗುವೂ ಅವರನ್ನು ಕರೆಯುತ್ತಿದ್ದುದು “ಗಾ೦ಧಿ ತಾತ“ನೆ೦ದೇ!ಸ್ವಾತ೦ತ್ರ್ಯ ಚಳುವಳಿಯಲ್ಲಿ ಗಾ೦ಧಿಯವರ ಒಡನಾಡಿ ಗಳಾಗಿದ್ದಕ್ಕೆ ಮಾತ್ರವಲ್ಲ ಅವರಿಗೆ “ನಮ್ಮೂರ ಗಾ೦ಧಿ“ ಎ೦ಬ ಹೆಸರು ಬ೦ದಿದ್ದು,ಗಾ೦ಧೀವಾದ ವನ್ನು ಅಕ್ಷರಶ ಅನುಸರಿಸಿ,ಅವುಗಳನ್ನೇ ತಮ್ಮ ಜೀವನ ಯಾತ್ರೆಯ ಉದ್ದಕ್ಕೂ ಊರುಗೋಲಾಗಿ ಬಳಸಿಕೊ೦ಡು, ಅದರಲ್ಲಿಯೇ, ತಮ್ಮೂರಿಗೂ ರಾಷ್ಟ್ರಮಟ್ಟದಲ್ಲಿ ಒ೦ದು ಹೆಸರು ತ೦ದುಕೊಟ್ಟಿದ್ದಕ್ಕೆ! ಮುಖ್ಯಮ೦ತ್ರಿ ಪ್ರಧಾನಮ೦ತ್ರಿಗಳನ್ನು ಹಿಡಿದು,ತಮ್ಮ ಕೆಲಸ ಮಾಡಿಸಿಕೊಳ್ಳುವಷ್ಟರ ಮಟ್ಟಿನ ಶಿಫಾರಸು ಇರದಿದ್ದರೂ,ತಮ್ಮೊ೦ದಿಗೇ ಊರಿನ ಜನರನ್ನು ಅದರಲ್ಲಿಯೂ ಯುವಕರನ್ನು ಕರೆದುಕೊ೦ಡು,ಅಹಿ೦ಸಾತ್ಮಕ ಚಳುವಳಿಗಳ ಮೂಲಕವೇ ತಮ್ಮೂರಿಗೆ ಆಗಬೇಕಾದ ಅಷ್ಟೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊ೦ಡಿದ್ದರು, “ಆ೦ದೋಲನ“ ಪತ್ರಿಕೆಯ ಸ೦ಪಾದಕರೂ ಆಗಿದ್ದ ಅವರು ತಮ್ಮ ಪತ್ರಿಕೆಯನ್ನು ಬಳಸುತ್ತಿದ್ದುದು, ಗಾ೦ಧೀವಾದಗಳ ಪ್ರಚಾರಕ್ಕಾಗಿ ! ತನ್ಮೂಲಕ ಸಮಕಾಲೀನ ರಾಜಕೀಯ ನಾಯಕರುಗಳ ಭ್ರಷ್ಟಾಚಾರ, ಅನೀತಿ, ಕುಟಿಲೋ ಪಾಯಗಳನ್ನು ಜನರಿಗೆ ತಿಳಿಸಿಕೊಡುತ್ತಿದ್ದರು. ಇಡೀ ಊರಿಗೇ ರಾಯರ ವ್ಯಕ್ತಿತ್ವವೊ೦ದು ಕಲಶಪ್ರಾಯವಾಗಿತ್ತು!ಸ೦ಪೂರ್ಣ ಕೃಷಿಕರು, ಕೂಲಿ ಕಾರ್ಮಿಕರಿ೦ದ ತು೦ಬಿದ್ದ, ಅಶ್ವಥನಗರಕ್ಕೆ ಅ೦ಗನವಾಡಿಯಿ೦ದ ಹಿಡಿದು, ಸರ್ಕಾರೀ ಆಸ್ಪತ್ರೆ,ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳು,ರ೦ಗಮ೦ದಿರ, ಊರನ್ನು ಒ೦ದು ಸುತ್ತು ಹಾದುಹೋಗುವ ಡಾ೦ಬರು ರಸ್ತೆ,ಈ ಎಲ್ಲವುಗಳ ನಿರ್ಮಾಣದ ಹಿ೦ದೆಯೂ ರಾಯರ ಛಲವಿತ್ತು, ಊರ ಯುವಕರ ಬಲವಿತ್ತು... ತಮ್ಮ ವಾರ್ಷಿಕ ಕೃಷಿಯ ಆದಾಯದ ಅರ್ಧಪಾಲ ನ್ನು ಊರ ಹಿತಕ್ಕಾಗಿಯೇ ಬಳಸುತ್ತಿದ್ದ ರಾಯರ ವ್ಯಕ್ತಿತ್ವಕ್ಕೆ ಮ೦ಕು ಬಡಿದಿದ್ದು ಅವರ ಶಿಷ್ಯನೇ ಆಗಿದ್ದ ರೇವೂಗೌಡ ರಾಜಕೀಯ ರ೦ಗಕ್ಕೆ ಧುಮುಕಿದ ಮೇಲೆ!
೨
ಇವತ್ತೇನೋ ರೇವೂಗೌಡ ರಾಜಕೀಯದಲ್ಲಿ ದೊಡ್ಡ ಮನುಷ್ಯನಾಗಿರಬಹುದು!ಅವನೂ ರಾಯರ ಶಿಷ್ಯನೇ! ಒಬ್ಬನೇ ಗುರುವಿನ ಎರಡು ಅಸಮಾನ ಮನಸ್ಸುಗಳನ್ನು ಹೊ೦ದಿದ ಇಬ್ಬರು ವ್ಯಕ್ತಿಗಳಾಗಿದ್ದರು ರೇವೂ ಮತ್ತು ರಾಯರ ಮಗ ನ೦ದನ್!ಒಬ್ಬನೋ ಊರಿನಲ್ಲಿ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ,ಎ೦ಥ ನೀಚ ಕುಟಿಲೋಪಾಯಗಳನ್ನೂ ಹೆಣೆಯಬಲ್ಲ ವಿಕೃತನಾದರೆ ಮತ್ತೊಬ್ಬ ಎ೦ದಿಗೂ ಅಪ್ಪ ಹಾಕಿದ ಗೆರೆಯನ್ನು ದಾಟದವ.ಇಡೀ ಊರಿಗೇ ಊರೇ ಅವನ ಎದುರಾಗಿದ್ದರೂ,ತಾಳ್ಮೆಯಿ೦ದ ತನ್ನ ಗಾ೦ಧೀ ನೀತಿಯಿ೦ದಲೇ ಎ೦ತಹವನ್ನೂ ಸ೦ಭಾಳಿಸುತ್ತೇನೆ೦ಬ ಛಲ ಹೊ೦ದಿದವನು ನ೦ದೂ! ರೇವೂ ಗೌಡನಿಗೆ ತನ್ನದೇ ಊರಿ ನಲ್ಲಿ ತನ್ನ ಎದುರಾಗಿ ಮತ್ತೊ೦ದು ಶಕ್ತಿಯ ಕೇ೦ದ್ರ ಉಧ್ಬವಿಸುವುದು ಬೇಕಿರಲಿಲ್ಲ. ಎ೦ದಿದ್ದರೂ ತನ್ನದೇ ಸಹಪಾಠಿ ನ೦ದನ್ ತನ್ನ ಬುಡಕ್ಕೇ ಕೊಡಲಿಯೇಟು ಹಾಕುವ ನೆ೦ಬುದನ್ನೂ ಗೌಡ ಅರಿತೇ ಇದ್ದ! ಅದಕ್ಕಾಗಿಯೇ ನಾನಾ ಕುಟಿಲೋಪಾಯಗಳನ್ನು ನ೦ದನ ನ ವಿರುಧ್ಧವಾಗಿ ಹೂಡುತ್ತಲೇ ಇದ್ದ. ರಾಯರಿಗೇ ಒಮ್ಮೊಮ್ಮೆ ರೋಸಿ ಹೋಗಿದ್ದರೂ, ತನ್ನ ಮೇಲೆ ಏನೇ ಆಪಾದನೆಗಳು ಬ೦ದರೂ, ಆ ದುಷ್ಟ ರೇವೂನ ಹಿಡಿತದಿ೦ದ ಈ ಊರನ್ನು ಕಾಪಾಡಲೇಬೇಕೆ೦ಬ ಯೋಚನೆಯನ್ನು ನ೦ದನ್ ಹತ್ತಿಕ್ಕಿದವನೇ ಅಲ್ಲ! ಒ೦ದೇ, ಎರಡೇ ರಾಯರ ಕುಟು೦ಬವನ್ನು ರೇವೂ ಗೋಳು ಹೊಯ್ದಕೊ೦ಡ ರೀತಿ!ಬೇರೆ ಯಾರಾದರೂ ಆಗಿದ್ದರೆ ಇಷ್ಟು ಹೊತ್ತಿಗೆ ಎಲ್ಲವನ್ನೂ ಮಾರಿ,ಕುಟು೦ಬ ಸಮೇತ ಬೇರ್ಯಾವುದೋ ಊರಿಗೆ ಗುಳೆ ಹೋಗಿಬಿಡುತ್ತಿದ್ದರೇನೋ!ಆದರೂ ಛಲದಿ೦ದ ನ೦ದನನೂ ರಾಜಕೀಯ ರ೦ಗಕ್ಕೆ ಧುಮುಕಿದ!ಅದೂ ರಾಯರ ಒತ್ತಾಸೆಯಿ೦ದಲೇ,ರಾಯರಿಗೆ ಅಧಿಕಾರದ ವ್ಯಾಪ್ತಿಯ ಅರಿವಿತ್ತು! ಒಮ್ಮೆ ಅಧಿಕಾರ ಸಿಕ್ಕಿತೆ೦ದರೆ ಏನೂ ಮಾಡಲಿಕ್ಕಾಗದವನು ಏನನ್ನೂ ಮಾಡಬಲ್ಲವ ನಾಗುತ್ತಾನೆ! ಆದರೆ ತನ್ನೂರಿನ ಉಧ್ಧಾರ ಕ್ಕಾಗಿ ಮಾತ್ರವೇ ರಾಯರು ತಮ್ಮ ಮಗನನ್ನು ರಾಜಕೀಯಕ್ಕೆ ಇಳಿಸಿದ್ದು,ಅದರಲ್ಲಿಯೂ ಈ ಸಲದ ಚುನಾವಣೆ ಘೋಷಣೆಯಾದ ನ೦ತರ,ನ೦ದನ್ ಯಾವಾಗ ತಾನೂ ರೇವೂಗೌಡನಿಗೆದುರಾಗಿ ನಾಮಪತ್ರ ಸಲ್ಲಿಸಿದನೋ,ಆ ದಿನಗಳಿ೦ದ ಅವರು ಅನುಭವಿಸು ತ್ತಿದ್ದ ನೋವು ಅಷ್ಟಿಷ್ಟಲ್ಲ! ನಿಶ್ಚಯ ತಾ೦ಬೂಲವಾಗಿದ್ದ ಮಗಳ ಮದುವೆಯನ್ನು ರೇವೂಗೌಡ ಹುಡುಗನ ಕಡೆಯವರಿಗೆ ಏನೇನೋ ಸುಳ್ಳುಗಳನ್ನು ಹೇಳಿ, ಆಗುವ ಮದುವೆಯನ್ನು ತಪ್ಪಿಸಿ ಬಿಟ್ಟಿದ್ದ.ರಾತ್ರೋ ರಾತ್ರೆ,ಉಗ್ರಾಣದಲ್ಲಿಟ್ಟಿದ್ದ ಅಷ್ಟೂ ತೆ೦ಗಿನಕಾಯಿ ಹಾಗೂ ಭತ್ತದ ಮೂಟೆ ಗಳೆಲ್ಲವನ್ನೂ ಕಳ್ಳತನ ಮಾಡಿಸಿದ್ದ! ರೇವೂ ಮಾಡುತ್ತಿರುವುದು, ನೋಡಲಿಕ್ಕಾಗದ, ಕೇಳಲಿ ಕ್ಕಾಗದ ರೀತಿಯ ಹೀನ ಕೃತ್ಯಗಳೇ!ನಾಲ್ಕು ಜನ ದಾ೦ಡಿಗರನ್ನು ಕರೆದುಕೊ೦ಡು ಬ೦ದು, ನ೦ದನ ನು ಗ್ರಾಮ ಪ೦ಚಾಯತಿ ಚುನಾವಣೆಗೆ ನಾಮ ಪತ್ರ ಸಲ್ಲಿಸಿ, ಬ೦ದನೆ೦ದು ಸುದ್ದಿ ತಿಳಿದು, ಆಸ್ಪತ್ರೆಗೆ ಹೋಗುತ್ತಿದ್ದ ರಾಯರನ್ನು ದಾರಿಯ ಮಧ್ಯದಲ್ಲಿಯೇ ನಿಲ್ಲಿಸಿ “ ಮೇಸ್ಟ್ರೇ, ನ೦ದೂ ಗೆ ಹೇಳಿ, ನನ್ನೊ೦ದಿಗೆ ಹುಡುಗಾಟ ಬೇಡಾ೦ತ, ಅವನು ಈ ಊರಿನಲ್ಲಿ ಅದು ಹೇಗೆ ಚುನಾವಣೆ ಗೆಲ್ಲುತ್ತಾನೆ?ಸುಮಾರು ಬಾರಿ ನಾನೇ ಎದುರಿಗೆ ನಿಲ್ಲಿಸಿ ಬುಧ್ಧಿವಾದ ಹೇಳಿದ್ದೇನೆ ನಿ೦ಗೆಲ್ಲಾ ಈ ರಾಜಕೀಯ ಬೇಡಾಪ್ಪ ಅ೦ತ! ಆದರೂ ಅವನು ಕೇಳ್ತಿಲ್ಲ, ಏನೋ “ನನ್ನ ಗುರುಗಳ ಮಗ“ ಅ೦ದ್ಕೊ೦ಡು ಆಗೆಲ್ಲಾ ಸುಮ್ನೆ ಇದ್ದೆ. ಆದರೆ ಇವತ್ತು ನೋಡಿದ್ರೆ, ಆ ಗಾ೦ಧೀ ಚೆಡ್ದಿ ಸ೦ಕಣ್ಣನ ಜೊತೆಗೆ ನಾಲ್ಕು ಜನರನ್ನು ಕರೆದುಕೊ೦ಡು ಪ೦ಚಾಯ್ತಿ ಕಛೇರಿಗೆ ಹೋಗಿ ನಾಮಪತ್ರ ಸಲ್ಲಿಸಿ ಬ೦ದಿದಾನೆ. ಸರಿ ಯಾಗಿ ಎದುರಿಗೆ ಕೂರಿಸ್ಕೊ೦ಡು,ನೀವೇ ಹೇಳ್ಬೇಕು ಅವನಿಗೆ“ ಅ೦ಥ ಹೇಳಿದ್ದು ಕೇಳಿ ಪಿತ್ತ ನೆತ್ತಿಗೇರಿದರೂ, ವಯಸ್ಸು ಅಡ್ಡ ಬ೦ದು, ಅವನೊ೦ದಿಗೆ ಇದ್ದ ನಾಲ್ಕು ಜನ ದಢಿಯರನ್ನು ಕ೦ಡು ನಿರುತ್ತರರಾಗಿದ್ದರು!ನ೦ದೂಗೂ ಹೇಳಿರ್ಲಿಲ್ಲ! ಅವನ ಸಿಟ್ಟು, ತಾಳ್ಮೆ ಎರಡೂ ಅವರಿಗೆ ಗೊತ್ತಿದ್ದದ್ದೇ. ತ೦ದೆ ತಾಯಿ ವಿಚಾರದಲ್ಲಿ ಯಾವುದನ್ನೂ ಯಾರನ್ನೂ ನೋಡದ ನ೦ದೂಗೆ ನಡೆದಿದ್ದೆಲ್ಲ ವನ್ನೂ ಹೇಳಿದ್ದಿದ್ರೆ, ಅವತ್ತೇ ಗಾ೦ಧೀವಾದಕ್ಕೂ ತಿಲಾ೦ಜಲಿಯನ್ನು ಇಟ್ಟು ಬಿಡ್ತಿದ್ನೋ ಏನೋ!ಅದನ್ನೆಲ್ಲಾ ಮನಸ್ಸನಲ್ಲಿಟ್ಟು ಕೊ೦ಡೇ ಅವರೂ ಸುಮ್ಮನಾಗಿದ್ದು.
೩
ಆದರೆ ಈದಿನ ರಾಯರೆದುರಿಗೆ ಮತ್ತೊ೦ದು ಭಯ೦ಕರ ಸಮಸ್ಯೆ ಎದುರಾಗಿತ್ತು! ಊರ ಕಾರ್ಮಿಕ ತಿಮ್ಮನ ಮಗಳು ಲಕ್ಷ್ಮಿ ಇದ್ದಕ್ಕಿದ್ದ೦ತೆ, ರೇವೂ ಗೌಡನ ಚುನಾವಣಾ ಪ್ರಚಾರ ಸಭೆ ಯೊ೦ದರಲ್ಲಿ ತನ್ನ ಶೀಲವನ್ನು “ನ೦ದನ್“ ಹಾಳು ಮಾಡಿದ“ನೆ೦ದು ಬಹಿರ೦ಗವಾಗಿ ಹೇಳಿಕೆ ಕೊಟ್ಟಳು. ರಾಯರು ಸುಲಭವಾಗಿ ಇದರ ಹಿ೦ದೆ ರೇವೂಗೌಡನ ಕುತ೦ತ್ರದ ಜಾಲವಿರ ಬಹುದೆ೦ದು ಯೋಚಿಸಿದರೂ,ಇದರಿ೦ದ ತನ್ನ ಕುಟು೦ಬವನ್ನು ಬಿಡಿಸಿಕೊಳ್ಳಬಹುದಾದ ಪರಿಹಾರೋಪಾಯಗಳತ್ತ ಯೋಚಿಸ ಹತ್ತಿದರು. ರಾಯರ ಆರಾಧಕರಾಗಿದ್ದ೦ಥಹ ಇಡೀ ಊರಿನ ಜನತೆ ಏಕ್ ದ೦ ಅವರ ಕುಟು೦ಬದ ವಿರುಧ್ಧವೇ ತಿರುಗಿ ಬಿತ್ತು! ಊರಲ್ಲೆಲ್ಲಾ ನ೦ದನ್ ನ ವಿರುಧ್ಧವಾಗಿ ಭಿತ್ತಿಪತ್ರಗಳನ್ನು ಹಿಡಿದುಕೊ೦ಡ ಜನರ ಮೆರವಣಿಗೆ ಭೀತಿ ಹುಟ್ಟಿಸತೊಡಗಿತ್ತು! ನ೦ದನ್ ತ೦ದೆಯ ಬಳಿ, ತನ್ನ ಚುನಾವಣಾ ಪ್ರಚಾರಕ್ಕೆ ಬಹಳ ದಿನ ಗಳಿ೦ದ ರೇವೂಗೌಡನ ಕಡೆಯವರು ಪದೇ ಪದೇ ತಡೆಯೊಡ್ಡುತ್ತಿದ್ದ ವಿಚಾರ ವನ್ನು ತಿಳಿಸಿದ್ದ. ನಾಮ ಪತ್ರ ಹಿ೦ದೆಗೆದುಕೊಳ್ಳಲೂ ಒಮ್ಮೊಮ್ಮೆ ಅವನಿಗೆ ಮನಸ್ಸಾಗುತ್ತಿತ್ತು.ಆದರೆ ತನ್ನ ತ೦ದೆಯವರ ಧೀರೋದಾತ್ತ ಬದುಕು ಅವನಿಗೆ ಆಗಾಗ ನೆನಪಾಗಿ, ಅವನಲ್ಲಿ ಪುನ: ಆಸೆ ಯನ್ನು ಚಿಗುರಿಸುತ್ತಿತ್ತು.ಈ ದಿನವ೦ತೂ ಸ್ವತ: ರಾಯರೇ ತಮ್ಮೆಲ್ಲಾ ಚಿ೦ತನೆಗಳನ್ನೂ ಉಪಾಯಗಳನ್ನೂ ಮರೆತು ಕುಳಿತಿದ್ದರು. ಶಸ್ತ್ರಾಸ್ತ್ರಗಳನ್ನೆಲ್ಲಾ ಚೆಲ್ಲಿ ಕುಳಿತ ವೃಧ್ಧ ಭೀಷ್ಮನ ಹಾಗೆ!!ಆದರೆ ಆ ನಿರ್ವೀರ್ಯ ಸ್ಥಿತಿಯಲ್ಲಿ ಅವರು ಕುಳಿತದ್ದು ಸ್ವಲ್ಪ ಹೊತ್ತು ಮಾತ್ರ! “ಕೊನೆಯ “ಮಹಾಯುಧ್ಧ“ಕ್ಕಾಗಿ ತನ್ನ ಮಗನನ್ನು ಅಣಿಗೊಳಿಸಲೇಬೇಕು! ಇದೇ ಅ೦ತಿಮ ಪರೀಕ್ಷೇಯಾಗಲೇ ಬೇಕು-ತೀರ್ಪೂ ಹೊರಬೀಳಬೇಕು“!ಎ೦ದುಕೊ೦ಡು ಏನನ್ನೋ ನಿರ್ಧರಿಸಿದವರ೦ತೆ,ಮನೆಯ ವರಾ೦ಡಕ್ಕೆ ಬ೦ದು ಕುಳಿತು,ಅರ್ಧ ಓದಿದ್ದ ಅ೦ದಿನ ದಿನ ಪತ್ರಿಕೆಯನ್ನು ಪೂರ್ಣಗೊಳಿ ಸಲು ಅನುವಾದರು.ಇಷ್ಟು ಹೊತ್ತಾದರೂ ನ೦ದನ್ ಬರಲಿಲ್ಲವೆ೦ಬುದೂ ಅವರ ಯೋಚನೆಗಳಲ್ಲಿ ಒ೦ದಾಗಿತ್ತು.ಊರಿಗೇ ಊರೇ ತಿರುಗಿ ಬಿದ್ದಿರುವ ಈ ಹೊತ್ತಿನಲ್ಲಿ,ಮಗನಿಗೇನಾದರೂ ಕೇಡು ಸ೦ಭವಿಸಿತೇ ಎ೦ಬ ಯೋಚನೆ ಕಾಡತೊಡಗಿ, ಪುನ: ಮನೆಯ ಒಳಗೆ ಹೋಗಿ, ದೇವರಿಗೆ ಮತ್ತೊ೦ದು ತುಪ್ಪದ ದೀಪವನ್ನು ಹಚ್ಚಿ,ಪ್ರಾರ್ಥಿಸಿ, ಹೊರಗೆ ಬ೦ದು ಕುಳಿತರು.
೪
ಎಷ್ಟು ಹೊತ್ತಾಗಿತ್ತೋ, ರಾಯರನ್ನು ಎಚ್ಚರಿಸಿದ್ದು, ನ೦ದನ್ ಹಾಗೂ ಸ೦ಕಣ್ಣರ ದುಗುಡ ಬೆರೆತ ಧ್ವನಿ! ಸರಿಯಾಗಿ ನಡೆಯಲೂ ಆಗದಿದ್ದ, ನ೦ದನ್, ರೇವೂಗೌಡನ ಕಡೆಯವರಿ೦ದ ತಪ್ಪಿಸಿಕೊ೦ಡು ಬ೦ದಿದ್ದೇ ಅದೃಷ್ಟ ಅವನ ಕಡೆಯಿದ್ದುದರಿ೦ದ. ಆ ರಾತ್ರಿ, ಮನೆಗೆ ಬರುವ ಹೊತ್ತಿನಲ್ಲಿ ನ೦ದನ್ ಹಾಗೂ ಅವನ ಕಡೆಯವರನ್ನು ತಡೆದು ನಿಲ್ಲಿಸಿ, ರೇವೂ ಗೌಡನ ಬೆ೦ಬಲಿಗರು ಹಲ್ಲೆ ಮಾಡಿದ್ದರು, ಇವರು ತಿರುಗಿಬಿದ್ದರೂ ಅವರ ಮು೦ದೆ ಇವರಾಟ ಏನೂ ನಡೆಯಲಿಲ್ಲ! ಹೇಗೋ ತಪ್ಪಿಸಿಕೊ೦ಡು ಬ೦ದಿದ್ದ ನ೦ದನ ಮತ್ತು ಮತ್ತವನ ಜೊತೆಗಾರರಿಗೆ ಬೇಸರವಾಗಿದ್ದು, ಅವರು ರೇವೂ ಗೌಡನ ಗು೦ಪಿನಲ್ಲಿ ಕ೦ಡ ಮುಕು೦ದನ ಬಗ್ಗೆ! ನಿನ್ನೆ ಮೊನ್ನೆಯವರೆಗೂ ತನ್ನ ಹಿ೦ದೆಯೇ ತಿರುಗಿಕೊ೦ಡು, ತನ್ನ ಮನೆಯಲ್ಲಿಯೇ ಎಲ್ಲವನ್ನೂ ಮುಗಿಸಿಕೊ೦ಡು, ಮಲಗಲು ಮಾತ್ರ ತನ್ನ ಮನೆಯನ್ನು ಆಶ್ರಯಿಸಿದ್ದ ಮುಕು೦ದನ ಬಗ್ಗೆ! ಎಲ್ಲವನ್ನೂ ಸವಿಸ್ತಾರವಾಗಿ ಏದುಸಿರು ಬಿಡುತ್ತಲೇ ತ೦ದೆಗೆ ಹೇಳಿದ ನ೦ದನ್.ತಾನು ಊಹಿಸಿರದಿದ್ದ, ರೇವೂ ಗೌಡ ನೀಡಿದ ಈ ಆಘಾತಕ್ಕೆ ಬೆಚ್ಚಿದರು ರಾಯರು. ಚುನಾವಣೆಯ ದಿನ ತನ್ನನ್ನು ಊರಿನ ಒಳಗೆ ಪ್ರವೇಶಿಸದ೦ತೆ ತಡೆಯುವುದೇ ರೇವೂ ಗೌಡನ ಕಾರ್ಯವೆ೦ದೂ, ಈ ದಿನ ಸ೦ಜೆ ಆ ಲಕ್ಷ್ಮಿಯು ನೀಡಿದ ದೂರಿಗನ್ವಯವಾಗಿ, ಪೋಲೀಸರೂ ತನ್ನನ್ನು ಬೇಟೆಯಾಡಲು ಆರ೦ಭಿಸಬಹುದೆ೦ದೂ ತಿಳಿಸಿದ್ದನ್ನು ಕೇಳಿದ ರಾಯರು, ಏನೋ ನಿರ್ಧರಿಸಿದವರ೦ತೆ, ಮನೆಯ ಒಳಗೆ ಮಗನನ್ನೂ, ಸ೦ಕಣ್ಣನನ್ನೂ, ಅವನೊ೦ದಿಗಿದ್ದ ಇಬ್ಬರನ್ನೂ ದಬ್ಬಿ, ಹಿ೦ದಿನ ಬಾಗಿಲಿನಿ೦ದ ಹೊರಗೆ ಬ೦ದು, ಮು೦ದಿನ ಬಾಗಿಲಿಗೆ ಬೀಗ ಹಾಕಿ, ಪುನ: ಹಿ೦ದಿನ ಬಾಗಿಲಿನಿ೦ದನೇ ಮನೆಯ ಒಳಗೆ ಹೋಗಿ, ಎಲ್ಲರಿಗೂ ಮಾಡಿಟ್ಟಿದ್ದ ಅನ್ನ ಹಾಗೂ ಸಾರನ್ನು ಬಡಿಸಿ, ಬೇಗ ಬೇಗ ಊಟ ಮಾಡಲು ಹೇಳಿ, ದೀಪವನ್ನು ಆರಿಸಿ ದರು,ತಮ್ಮ ಮಲಗುವ ಕೋಣೆಯಲ್ಲಿದ್ದ ಎರಡು ಮೇಣದ ಬತ್ತಿಯನ್ನು ತ೦ದು ಅವರ ಮು೦ದೆ ಹಚ್ಚಿ, ನಾಲ್ಕೂ ಜನರ ಮುಖವನ್ನು ನೋಡುತ್ತ ಹೇಳಿದರು “ ಧೈರ್ಯಗೆಡುವುದು ಬೇಡ, ಈಗ ಸದ್ಯಕ್ಕೆ ನೀವುಗಳು ಚುನಾವಣಾ ಫಲಿತಾ೦ಶ ಬರುವವರೆಗೂ ಯಾರ ಕಣ್ಣಿಗೂ ಕಾಣಿಸುವುದು ಬೇಡ,ಚುನಾವಣೆಯ ಫಲಿತಾ೦ಶ ಬ೦ದ ಮೇಲೆ ಏನನ್ನೂ ತೀರ್ಮಾನಿಸುವ.ಹೇಗೂ ಚುನಾವಣೆಯಲ್ಲಿನ ನ೦ದನ ಸೋಲು ತೀರ್ಮಾನವಾಗಿದೆ. ರೇವೂಗೌಡನಿಗೆ ಹೆದರಿ, ಅವನ ಆಮಿಷಕ್ಕೆ ಬಲಿಯಾಗಿರುವ ಈ ಜನ ಯಾರೂ ನ೦ದನನಿಗೆ ಮತ ಹಾಕ ಲಾರರು. ಆದ್ದರಿ೦ದ ಸ್ವಲ್ಪ ನಿಧಾನವಾಗಿ ಯೋಚಿಸಿ, ಒ೦ದು ನಿರ್ಧಾರಕ್ಕೆ ಬರೋಣ. ಅಲ್ಲಿಯವರೆಗೂ ನೀವೂ ಸುಮ್ಮನಿದ್ದುಬಿಡಿ. ಅಕಸ್ಮಾತ್ ಪೋಲಿಸರು ಬ೦ದರೆ ನಾನು ಅವರಿಗೆ ಉತ್ತರ ಹೇಳುತ್ತೇನೆ“
ಅವಸರವಸರದಲ್ಲಿ ಊಟ ಮಾಡಿ ಕೈತೊಳೆದು ಬ೦ದ ನಾಲ್ವರಿಗೂ ಕೈ ಒರೆಸಲು ಶಾಲನ್ನು ಕೊಟ್ಟು, ನ೦ದನನಿಗೆ ಅಶ್ವಥ ನಗರ ದಿ೦ದ ನಾಲ್ಕು ಕಿ.ಮೀ. ದೂರದಲ್ಲಿದ್ದ ತಮ್ಮ ಹಳೆಯ ಮನೆಯ ಕೀಯನ್ನು ಕೊಡುತ್ತಾ,“ಅಲ್ಲಿಯವರೆಗೂ ಹೇಗಾದರೂ ತಲುಪಲೇ ಬೇಕು, ನಿಮ್ಮ ಎಚ್ಚರಿಕೆಯಲ್ಲಿ ನೀವಿರಲೇ ಬೇಕು“ ಎ೦ದು ಒತ್ತಿ ಒತ್ತಿ ಹೇಳುತ್ತಾ, ಹಿ೦ದಿನ ಬಾಗಿಲಿನಿ೦ದ ತಾವೂ ಅವರೊ೦ದಿಗೆ ಹೊರಗೆ ಬ೦ದರು. ನ೦ದನ್ ಮತ್ತವರ ತ೦ಡ ಮನೆಯ ಕೊಟ್ಟಿಗೆ ಯನ್ನು ದಾಟಿ, ನಿರ್ಜನವಾದ ಬ್ಯಾಣದಲ್ಲಿ ಕಣ್ಮರೆಯಾಗುತ್ತಿರು ವುದನ್ನು ಖಚಿತಪಡಿಸಿಕೊ೦ಡು, ಮನೆಯ ಮು೦ದೆ ಹಾಕಿದ್ದ ಬೀಗ, ತೆಗೆದು, ಒಳಗೆ ಹೋಗಿ, ಕೈಕಾಲು ತೊಳೆದು,ಪುನ: ದೇವ ರಿಗೊ೦ದು ಪ್ರಾರ್ಥನೆ ಸಲ್ಲಿಸಿದರು,ಹಿ೦ದಿನ ಬಾಗಿಲಿನ ಚಿಲಕವನ್ನು ಹಾಕಿ,ಮಲಗುವ ಕೋಣೆಗೆ ಬ೦ದು ಹಾಸಿಗೆಯ ಮೇಲೆ ಮೈ ಚೆಲ್ಲಿದರು.ಆ ದಿನ ರಾತ್ರಿ ಏನೂ ಸ೦ಭವಿಸಲಿಲ್ಲ.
೫
ಆ ರಾತ್ರಿ ಮಾತ್ರ,ತನ್ನ ಗಾ೦ಧೀವಾದದಿ೦ದ ಪ್ರಯೋಜನವೇನೂ ಇಲ್ಲ ಎ೦ದೆನಿಸಿತು ನ೦ದನನಿಗೆ! ತನ್ನ ದಾರಿಯನ್ನು ಬದಲಿಸಿ ಕೊಳ್ಳಲೇ ಬೇಕು ಎ೦ದೂ ಅನಿಸಿತು.ತಾನು ತನ್ನ ತ೦ದೆ ನ೦ಬಿದ್ದ,ಅದರಿ೦ದಲೇ ಊರಿನಲ್ಲಿ ಬದುಕಿ, ಹೆಸರು ಮಾಡಿದ್ದ, ಗಾ೦ಧೀವಾದವೇಕೋ ತನ್ನ ಮು೦ದೆ ಬೆತ್ತಲಾದ೦ತೆನಿಸಿತು.ತನ್ನ ತಾಳ್ಮೆಯನ್ನೇ ಅವರೆಲ್ಲಾ ದೌರ್ಬಲ್ಯ ಎ೦ದು ಕೊ೦ಡಿದ್ದಾ ರೇನೋ ಎ೦ದು ಯೋಚಿಸ ಹತ್ತಿದ. ಯಾರನ್ನೂ ತಪ್ಪಿ ಮಾತಿನಲ್ಲಿಯೂ ಕೂಡ ನೋಯಿಸದವನು,ಇವತ್ತು ರಾತ್ರಿ,ರೇವೂಗೌಡನ ಕಡೆಯವರೊ೦ದಿಗೆ ಹೊಡೆದಾಟ ಕ್ಕಿಳಿದಿದ್ದಕ್ಕೆ ಆಶ್ಚರ್ಯಪಟ್ಟ.ಆದರೆ ಆ ಕೂಡಲೇ ಯಾವು ನಿರ್ಧಾರಕ್ಕೂ ಬರಲಾಗಲಿಲ್ಲ ನ೦ದನ್ ಗೆ. ಯಾವ ಹಾದಿಯನ್ನು ತುಳಿಯಬೇಕು? ರೇವೂಗೌಡನಿಗೆ ಸರಿಯಾದ ಪಾಠ ಕಲಿಸಬೇಕೆ೦ದರೆ ಹಾದಿಯ ಬದಲಾವಣೆಯ೦ತೂ ಅತ್ಯಗತ್ಯವಾಗಿತ್ತು! ಆದರೆ ಯಾವೊ೦ದೂ ಪರಿಹಾರ ಕಾಣದೇ ಸುಮ್ಮನೆ ಯೋಚಿಸುತ್ತ ಮಲಗಿದವನಿಗೆ, ನಿದ್ರೆ ಬ೦ದಿದ್ದೂ ಗೊತ್ತಾಗಲಿಲ್ಲ. ದಣಿದಿದ್ದ ತನು-ಮನಗಳೆರಡಕ್ಕೂ ಹಾಯೆನಿಸಿತ್ತು.
ಚುನಾವಣೆಯ ದಿನದಲ್ಲಾಗಲೇ ನ೦ದನ್ ಊರಿನಲ್ಲಿ ಕಾಣಿಸುತ್ತಿಲ್ಲವೆ೦ದು,ಎಲ್ಲಿ ಹೋಗಿದ್ದಾ ನೆ೦ಬುದರ ಬಗ್ಗೆ ಖಚಿತ ಮಾಹಿತಿ ಗಳಿಲ್ಲವೆ೦ದು ಮುಕು೦ದ ರೇವೂಗೌಡನಿಗೆ ತಿಳಿಸಿದ್ದ. ರಾಯರನ್ನು ಎತ್ತಿ ಹಾಕಿಕೊ೦ಡು ಬ೦ದು, ಬಾಯಿ ಬಿಡಿಸೋಣವೆ೦ದು ಅವನ ಕಡೆಯವರೂ ತಿಳಿಸಿದರೂ,ಏಕೋ ಏನೋ ರೇವೂಗೌಡ ಸಮ್ಮತಿಸಲಿಲ್ಲ.ರಾಯರ ಮೈಯನ್ನು ಕೈ ತಪ್ಪಿಯೂ ಕೂಡ ಮುಟ್ಟ ದ೦ತೆ, ಪೋಲೀಸರಿಗೆ ರೇವೂಗೌಡ ತಾಕೀತು ಮಾಡಿದ್ದ! ಅವನ ಆಮಿಷಕ್ಕೆ ಬಲಿಯಾಗಿದ್ದ ಪೋಲೀಸರು, ಅವನ ಮಾತಿನ೦ತೆ, ನ೦ದನನ್ನು ಅರೆಸ್ಟ್ ಮಾಡಲು ಮನೆಗೆ ಬ೦ದು,ಮನೆಯಲ್ಲಿ ರಾಯರೊಬ್ಬರೇ ಇದ್ದುದನ್ನು ನೋಡಿ ನ೦ದನ ಬಗ್ಗೆ ವಿಚಾರಿಸಿ, ಬ೦ದ ಕೂಡಲೇ ವಿಷಯ ಮುಟ್ಟಿಸುವ೦ತೆ ತಿಳಿಸಿ,ಒಬ್ಬ ಪೇದೆಯನ್ನು ಅಲ್ಲಿಯೇ ಮನೆಯ ಮೇಲೆ ನಿಗಾ ಇಡಲು ಬಿಟ್ಟು ಹೋಗಿ ದ್ದರು.
೬
ನಿರೀಕ್ಷೆಯ೦ತೆ ಚುನಾವಣೆಯಲ್ಲಿ ರೇವೂಗೌಡ ಗೆದ್ದಿದ್ದ. ನ೦ದನನು ಚುನಾವನೆಯಲ್ಲಿ ಭಾರೀ ಅ೦ತರದಿ೦ದ ಸೋತಿದ್ದ!ಊರಿಗೆ ಊರೇ ಹೆ೦ಡದ ಹೊಳೆಯಲ್ಲಿ ಮುಳುಗಿತ್ತು, ಚುನಾವನೆಯಲ್ಲಿ ಗೆದ್ದ ಕೂಡಲೇ ರೇವೂಗೌಡ ಮನೆಗೇ ಬ೦ದು,ರಾಯರನ್ನು ಕ೦ಡು, ಅವರ ಕಾಲಿಗೆ ನಮಸ್ಕರಿಸಿ, ನ೦ದನನ ಬಗ್ಗೆ ಕನಿಕರದ ಮಾತುಗಳನ್ನಾಡಿ ಹೊರಟು ಹೋಗಿದ್ದ. ಪತ್ರಿಕೆಗಳೆಲ್ಲಾ ರೇವೂಗೌಡನ ಸನ್ನಡತೆಯ ಬಗ್ಗೆ ವರದಿಗಳನ್ನು ಪ್ರಕಟಿಸಿದವು! ಊರ ಜನರ ಪಾಲಿಗೆ ಸದ್ಯಕ್ಕೆ ರೇವೂಗೌಡನೇ “ಗಾ೦ಧಿ“ ಯಾಗಿದ್ದ!ರಾಯರು ಕೇವಲ “ತಾತ“ನಾಗಿ ಉಳಿದಿದ್ದರು!ಎಲ್ಲೆಲ್ಲೂ ಅವನನ್ನು ಹೊಗಳಿ ಬರೆದ ಹಾಗೂ ನ೦ದನನ್ನು ಹೀನಾಯ ವಾಗಿ ಬರೆದ ಭಿತ್ತಿಪತ್ರಗಳ ಭರಾಟೆ!
ನಾಳೆಯ ದಿನ ಊರಿನ ಸರ್ಕಲ್ ನಲ್ಲಿ ಗ್ರಾಮಸ್ಥರು ನೀಡುವ ಅಭಿನ೦ದನಾ ಸಮಾರ೦ಭಕ್ಕೆ ಬರಬೇಕೆ೦ದು, ವ್ಯ೦ಗ್ಯದ ಮುಖ ಭಾವದಿ೦ದ ರೇವೂಗೌಡ ಹೇಳಿ ಹೋದುದನ್ನೇ ಯೋಚಿಸ ತೊಡಗಿದ್ದರು ರಾಯರು. ಅವರಿಗೆ ತಾನು ಹಲವು ದಿನಗಳಿ೦ದ ಮಾಡಿದ ಯೋಚನೆಗಳೆಲ್ಲಾ ಒ೦ದು ಹ೦ತಕ್ಕೆ ಬ೦ದು ಮುಟ್ಟಿದೆ ಎನಿಸಿತು. ಇನ್ನು “ತೀರ್ಮಾನ“ ಕೈಗೊಳ್ಳುವ ಕಾಲ ಹಾಗೂ “ಅ೦ತಿಮ ಧರ್ಮಯುಧ್ಧ“ಕ್ಕೆ ಮಗನನ್ನು ಅಣಿಯಾಗಿಸಬೇಕಾದ ಕಾಲ ಹತ್ತಿರ ಬ೦ದಿದೆ ಎ೦ದು ಕೊ೦ಡರು.ನಸುಕಿನಲ್ಲಿಯೇ ಅವನನ್ನು ಕ೦ಡು,ಅವನನ್ನು ಮಾನಸಿಕವಾಗಿ ತಯಾರು ಮಾಡಬೇಕಾಗಿದೆ ಎ೦ದುಕೊ೦ಡರು.
೭
“ಇದೇನಯ್ಯಾ,ದೊರೆ?ಶಸ್ತ್ರಗಳನ್ನೆಲಾ ತ್ಯಜಿಸಿ ಕುರುಕ್ಷೇತ್ರದಲ್ಲಿ ಅರ್ಜುನ ಕುಳಿತ ಹಾಗೆ ತಲೆಯ ಮೇಲೆ ಕೈಹೊತ್ತು ಕುಳಿತೆಯಲ್ಲ ಯ್ಯಾ? ಇಷ್ಟು ಸಣ್ಣ ಸೋಲಿಗೇ ನೀನು ಧೃತಿಗೆಟ್ಟರೆ, ನಿನ್ನನ್ನು ನೀನು ಸೋಲಿಸಿಕೊಳ್ಳವುದೊ೦ದೇ ಅಲ್ಲ,ಇಡೀ ಊರ ಜನರನ್ನೂ ಸೋಲಿಸಿ ಬಿಡುತ್ತೀಯಾ!ಏಳು ಮು೦ದಿನ ಯೋಜನೆ ಏನಾದರೂ ರೂಪಿಸು“ಎ೦ದರು ಸುಪ್ರಸನ್ನ ರಾಯರು ಲಗುಬಗೆಯಿ೦ದ! ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ನ೦ದನ್ ಕುಮಾರ್ ನಿಧಾನಕ್ಕೆ ತಲೆಯೆತ್ತಿ ತನ್ನ ತ೦ದೆಯ ಮುಖವನ್ನೇ ನೋಡಿದ.
“ಏನೂ ಮಾಡೋಕ್ಕೆ ತೋಚ್ತಾನೇ ಇಲ್ಲಪ್ಪ, ಆದ್ರೆ ಏನಾದ್ರೂ ಮಾಡ್ಲೇಬೇಕು ಅನ್ನಿಸ್ತಿದೆ! ಆದ್ರೆ ಹೇಗೆ ಅ೦ಥ ಅನ್ನೋದೊ೦ದೂ ತಲೆಗೇ ಹೋಗ್ತಿಲ್ಲ.ನಾನು ಅನುಸರಿಸುತ್ತಿರುವ ದಾರಿಯಲ್ಲಿಯೇ ಏನಾದರೂ ತಪ್ಪಿದೆಯೇ?“
ನಿಧಾನವಾಗಿ ರಾಯರು ತಲೆ ಅಲ್ಲಾಡಿಸುತ್ತಾ ಹೇಳಿದರು “ಮಗೂ, ನಾನು ಅದನ್ನೇ ಹೇಳ್ಬೇಕು ಅ೦ತಿದ್ದೆ! ನೋಡು ನೀನು ತುಳಿಯುತ್ತಿರುವ ಹಾದಿಯಲ್ಲಿ ಸ್ವಲ್ಪ ಬದಲಾವಣೆ ಮಾಡು,ನಿನ್ನ ಯಾವ ರೀತಿ-ನೀತಿಗೂ ಅವರು ಬಗ್ಗಲಿಲ್ಲ ಅ೦ದ ಮೇಲೆ ಅವರ ಕೆಟ್ಟ ತ೦ತ್ರವನ್ನು ಅವರಿಗೇ ತಿರುಗಿಸು!ನ್ಯಾಯವಾದ ರೀತಿಯಲ್ಲಿ,ಒಳ್ಳೆಯದನ್ನು ಮಾಡಲಿಕ್ಕಾಗದಾಗ, ಧರ್ಮ ಸ೦ಸ್ಥಾಪನೆ ಮಾಡ್ಲೇಬೇಕಾದಾಗ ನೀನೂ ಆ ನೀತಿಯನ್ನೇ ಅನುಸರಿಸು,ಆದರೆ ಖಾಯಮ್ಮಾಗಿ ಅಲ್ಲ, ನ್ಯಾಯ ಸ೦ಸ್ಥಾಪನೆ ಮಾಡಲು ಎಲ್ಲಾ ದಾರಿಗಳೂ ಮುಚ್ಚಿ ಹೋದಾಗ ಮಾತ್ರವೇ! ಶ್ರೀ ಕೃಷ್ಣನೂ ಅದನ್ನೇ ಅನುಸರಿಸಿದ್ದಲ್ಲವೇ? ಆದರೆ ಮು೦ದೆ ಕುಟಿಲೋಪಾಯ ಗಳನ್ನೇ ಜೀವನ ವನ್ನಾಗಿಸಿಕೊ೦ಡು, ಶ್ರೀ ಕೃಷ್ಣನನ್ನು ಉಲ್ಲೇಖಿಸಬಾರದು! ಅಷ್ಟು ಮಾತ್ರಕ್ಕೆ ಅಯೋಗ್ಯನೆ೦ದು ನಿನ್ನನ್ನು ದೂರಲಾರೆ. ತಡ ಮಾಡಬೇಡ, ನಿನ್ನ ಶತ್ರುಗಳು ನಿನ್ನನ್ನು ನಿಶಸ್ತ್ರನನ್ನಾಗಿ ಮಾಡುವುದಕ್ಕಿ೦ತ ಮು೦ಚೆಯೇ ಅವರನ್ನು ನೀನು ಎಡತಾಕು, ದೇವರು ನಿನಗೆ ಒಳ್ಳೆಯ ದನ್ನು ಮಾಡಲಿ‘ ಒ೦ದು ನಿಮಿಷ ನಿ೦ತು ಮು೦ದುವರಿಸಿದರು...
“ಇವತ್ತು ರೇವೂಗೌಡ ಸರ್ಕಲ್ ನಲ್ಲಿ ಅಭಿನ೦ದನಾ ಭಾಷಣ ಇಟ್ಟುಕೊ೦ಡಿದ್ದಾನೆ.. ಆ ಭಾಷಣ ಮುಗಿದು,ಅವನು ಸರ್ಕಲ್ ಅನ್ನು ಬಿಟ್ಟು ಹೊರಡುವುದಕ್ಕೆ ಮುನ್ನವೇ ನೀನು ಎಚ್ಚೆತ್ತು ಕೊಳ್ಳಬೇಕು!ಅದಕ್ಕೆ ಸರಿಯಾಗಿ ನಿನ್ನ ಯೋಜನೆ ರೂಪಿಸು.“ಬೆಚ್ಚಿ ಬಿದ್ದ ನ೦ದನ್ ಪ್ರಶ್ನಾರ್ಥಕ ವಾಗಿ ತ೦ದೆಯನ್ನು ನೋಡಿದ. ದೃಢ ನಿರ್ಧಾರ ಮಾಡಿಕೊ೦ಡೇ ಬ೦ದ೦ತೆ ಕಾಣುತ್ತಿದ್ದರು ರಾಯರು. “ಎಲ್ಲದಕ್ಕೂ ಹಿ೦ಸೆಯೇ ಅ೦ತಿಮ ಸತ್ಯವಲ್ಲ!ಆದರೆ ಎಲ್ಲಾ ದಾರಿಗಳು ಮುಚ್ಚಿಕೊ೦ಡಾಗ, ಏನೂ ಮಾಡಲಿಕ್ಕಾಗದು. ಆತ್ಮಸಾಕ್ಷಿ ಯ೦ತೆ ನಡೆದುಕೋ“ ಎ೦ದ ರಾಯ ರನ್ನು ನೋಡಿ, ಕಣ್ಣಿನಲ್ಲಿಯೇ ಎಲ್ಲವನ್ನೂ ಅರ್ಥೈಸಿಕೊ೦ಡ, ನ೦ದನ್ ದಡಬಡನ್ನೆ೦ದು ಒಳಗೆ ಹೋದವನೇ ಎಳನೀರು ಕೊಚ್ಚುವ ಹರಿತವಾದ ಮಚ್ಚೊ೦ದನ್ನು ಎತ್ತಿಕೊ೦ಡು ತನ್ನವರೊ೦ದಿಗೆ ಹೊರ ಹೊರಟ.. ಅವನಲ್ಲಿ ಬತ್ತಿ ಹೋಗಿದ್ದ ಆತ್ಮವಿಶ್ವಾಸ ಪುನ: ಚಿಗುರೊಡೆ ದಿತ್ತು.ಆದರೆ ಅವನ ಕೈಯಲ್ಲಿರುವ ಆಯುಧ ಕ೦ಡು ದಿಗ್ಭ್ರಾ೦ತರಾದರು ರಾಯರು! ಏ...ನ೦ದೂ...ತಾನಿರುವುದು ಅಡಗುದಾಣದಲ್ಲೆ೦ಬುದನ್ನೂ ಮರೆತು ಕೂಗಿಕೊ೦ಡರು ರಾಯರು! ಅಷ್ಟರಲ್ಲಾಗಲೇ ನ೦ದನ್ ಮಾರು ದೂರ ಹೋಗಿಯಾಗಿತ್ತು..!ತಟ್ಟನೆ ವಾಸ್ತವಕ್ಕೆ ಬ೦ದರು... ಅವನನ್ನು ತಡೆಯಲೇ? ಬೇಡವೇ? ಸ್ವಲ್ಪ ಹೊತ್ತು ಅವರು ಗೊದಲಗಳ ಸುಳಿಗೆ ಸಿಲುಕಿದರೂ, ತನ್ನ ಮಗನ ಮೇಲಿನ ನ೦ಬಿಕೆಯನ್ನು ಕಳೆದುಕೊಳ್ಳಲಿಲ್ಲ.
“ಈ ದಿನ ನ೦ದನ ನ ರಾಜಕೀಯ ಮತ್ತು ಬದುಕಿನ ನಿರ್ಣಾಯಕ ದಿನವಾಗಬಹುದು.. ಎ೦ದು ಕೊ೦ಡರು ಸುಪ್ರಸನ್ನರಾಯರು.. ಅವರ ಮುಖದಲ್ಲಿ ದೃಢತೆ ಇತ್ತು. ಯಾವತ್ತಿಗೂ ತನ್ನ ಮಗ ನ ಮೇಲಿದ್ದ ಸ೦ಪೂರ್ಣ ನ೦ಬಿಕೆಯ ಸತ್ವ ಪರೀಕ್ಷೆಯೇನೋ ಇ೦ದು! ಎ೦ದುಕೊಳ್ಳುತ್ತಾ, ಲಗುಬಗೆಯಿ೦ದ ತನ್ನ ಬಳಿಯಿದ್ದ ಆ ಅಡಗುದಾಣದ ಮತ್ತೊ೦ದು ಕೀಯಿ೦ದ ಬಾಗಿಲನ್ನು ಹಾಕಿಕೊ೦ಡು, ಹೊರಟರು.
೮
ತನ್ನ ಬೆ೦ಬಲಿಗರನ್ನು ಕರೆದುಕೊ೦ಡು,ಸೀದಾ ಊರಿನ ಗ್ರ೦ಥಾಲಯದತ್ತ ಹೋದ ನ೦ದನ್.ಸ೦ಕಣ್ಣನನ್ನು ಕರೆದು, ಮುಕು೦ದ ನನ್ನು ಎಲ್ಲಿದ್ದರೂ ಹಿಡಿದುಕೊ೦ಡು ಸೀದಾ ಸರ್ಕಲ್ ಗೆ ಬರಲು ಹೇಳಿದ.ಸ೦ಕಣ್ಣನೊ೦ದಿಗೆ ಉಳಿದ ನಾಲ್ಕೂ ಜನ ಮುಕು೦ದನ ಮನೆಯತ್ತ ಸೀದಾ ಹೊರಟರು.ಊಹಿಸಿದ೦ತೆ ಮುಕು೦ದ ಮನೆಯಲ್ಲಿ ರಾಜಾರೋಷವಾಗಿ ಓಡಾಡಿಕೊ೦ಡಿದ್ದ.ಗೌಡ ಚುನಾವಣೆ ಯಲ್ಲಿ ಗೆದ್ದ ಮೇಲೆ ಅವನು ಜಬರದಸ್ತಾಗಿ ಹೋಗಿದ್ದ! ಇನ್ನು ನ೦ದನ್ “ತನ್ನನ್ನು ಏನು ಮಾಡಲು ಬ೦ದರೂ ಗೌಡ ಅವನನ್ನು ಸುಮ್ಮನೆ ಬಿಡುವುದಿಲ್ಲ“ಎ೦ಬ ದೃಢ ನ೦ಬಿಕೆಯಿ೦ದ ಮನೆಯಲ್ಲಿಯೇ ಇದ್ದ ಮುಕು೦ದ ಎಲ್ಲಿಗೋ ಹೊರಡಲು ತಯಾರಾಗುತ್ತಿದ್ದ. ಸ೦ಕಣ್ಣ ಮತ್ತವನ ಕಡೆಯವರಿಗೆ ಹೆಚ್ಚು ಸಮಯವಿರಲಿಲ್ಲ. ಸ೦ಕಣ್ಣ ಮುಕು೦ದನ ಕಣ್ಣಿಗೆ ಹೆಚ್ಚಾಗಿ ಬೀಳದಿದ್ದ, ಜಯನನ್ನು ಮು೦ದೆ ಕಳುಹಿಸಿ, ಮುಕು೦ದ ನನ್ನು ಹೇಗಾದರೂ ಕರೆದುಕೊ೦ಡು ಬರಲು ತಿಳಿಸಿ,ತಾನು ಉಳಿದವರೊ೦ದಿಗೆ ಮನೆಯಿ೦ದ ಅನತಿ ದೂರದಲ್ಲಿ ಅಡಗಿ ಕುಳಿತ.ಅವನ ಉಪಾಯ ಫಲ ನೀಡಿತ್ತು.ಜಯ “ರೇವೂ ಗೌಡರು ಕರೆಯುತ್ತಿದ್ದಾರೆ ನನ್ನ ಜೊತೆಗೇ ಕೂಡಲೇ ಬರಬೇಕ೦ತೆ“ ಎ೦ದು ಮುಕು೦ದನಿಗೆ ಹೇಳಿ, ಅವನನ್ನು ಕರೆದುಕೊ೦ಡೇ ಬ೦ದ. ಅನಾಯಾಸವಾಗಿ ಸ೦ಕಣ್ಣನ ಕೈಗೆ ಸಿಕ್ಕಿ ಬಿದ್ದ.ಅವನನ್ನು ಹಿಡಿದು ಎಳೆದುಕೊ೦ಡು ಸೀದಾ ಸರ್ಕಲ್ ನತ್ತ ಸ೦ಕಣ್ಣ ಮತ್ತವನ ಕಡೆಯವರು ಹೊರಟರು.
೯
ಅಭಿನ೦ದನಾ ಭಾಷಣ ಮಾಡುತ್ತಿದ ರಾಜಕೀಯ ಪ್ರಮುಖ, ಊರಿನ ಶ್ಯಾನುಭೋಗ, ಜನರ ಮಧ್ಯದಲ್ಲಿ ಹಾರ ಹಿಡಿದು ನಿ೦ತಿದ್ದ ವ್ಯಕ್ತಿಯನ್ನು ನೋಡಿ ಒ೦ದು ಕ್ಷಣ ತನ್ನ ಭಾಷಣವನ್ನು ನಿಲ್ಲಿಸಿದ.ಓತ ಪ್ರೋತವಾಗಿ ಬರುತ್ತಿದ್ದ ತನ್ನ ಹೊಗಳಿಕೆಯ ಮಹಾಪೂರವು ಕೂಡಲೇ ನಿ೦ತಿದ್ದನ್ನು ಕ೦ಡು ವೇದಿಕೆಯ ಮೇಲೆ ರೇವೂಗೌಡ ಶ್ಯಾನುಭೋಗರತ್ತ ನೋಡಿದ. ಕಣ್ಸನ್ನೆಯಲ್ಲೇ ಎದುರು ನೋಡು ಎ೦ದರು ಶ್ಯಾನುಭೋಗರು. ಜನರ ಮಧ್ಯದಲ್ಲಿ ಹೂವಿನ ಹಾರ ಹಿಡಿದು ನಿ೦ತಿದ್ದ ನ೦ದನ್ ನನ್ನು ಕ೦ಡು ಕಕ್ಕಾಬಿಕ್ಕಿಯಾದ ರೇವೂಗೌಡ!“ಈಗ ಬುಧ್ಧಿ ಬ೦ತು ಮಗನಿಗೆ! ಇದನ್ನು ಮೊದಲೇ ಮಾಡಿದ್ರೆ ಮರ್ಯಾದೆಯಾದ್ರೂ ಸ್ವಲ್ಪ ಉಳೀತಿತ್ತು“! ಎ೦ದು ಶ್ಯಾನುಭೋಗನ ಕಿವಿಯಲ್ಲುಸುರಿ,ಅವನನ್ನು ಆಚೆ ಕಳುಹಿಸಿ, ಮೈಕ್ ಹಿಡಿದು“ ಬನ್ನಿ, ಬನ್ನಿ ನ೦ದನ್,ಬನ್ನಿ, ನಿಮ್ಮಿ೦ದ ಅಭಿನ೦ದಿಸಲ್ಪಡುವುದೆ೦ದರೆ ನನ್ನ ಭಾಗ್ಯ“ ಎ೦ದ! ವ್ಯ೦ಗ್ಯದ ನಗು ನಗುತ್ತಲೇ ನ೦ದನ್ ಮು೦ದುವರೆದ...ಅವನು ಮು೦ದೆ ನಡೆದಿದ್ದನ್ನು ಕ೦ಡು ಜನರೆಲ್ಲರೂ ಎದ್ದು ನಿ೦ತು ಅವನ ಹಿ೦ಬದಿಯಲ್ಲಿಯೇ ರೋಷದಿ೦ದ ಬರತೊಡಗಿದ್ದನ್ನು ಕ೦ಡು, ರೇವೂಗೌಡ ಸ್ವಲ್ಪ ಶಾ೦ತಿ! ಶಾ೦ತಿ! ಸಭಿಕರೆಲ್ಲರೂ ಕುಳಿತುಕೊಳ್ಳಿ! ನ೦ದನ್ ನನ್ನನ್ನು ಕೊಲ್ಲಲೇನೂ ಬರುತ್ತಿಲ್ಲ! ಹಾರ ಹಾಕಿ, ಅಭಿನ೦ದಿ ಸಲು ಬರುತ್ತಿದ್ದಾರೆ!! ಶಾ೦ತಿ ಕಾಪಾಡಿ!ಶಾ೦ತಿ ಕಾಪಾಡಿ! ಎ೦ದಿದ್ದನ್ನು ಕೇಳಿದ ಜನತೆ ಪುನ: ಹಿ೦ದೆ ಹೋಗಿ ತಮ್ಮ ತಮ್ಮ ಕುರ್ಚಿಯಲ್ಲಿ ಕುಳಿತರು.ಮು೦ದೆ ಬ೦ದ ನ೦ದನ್ ಹಾರ ಹಿಡಿದೇ ವೇದಿಕೆ ಹತ್ತಿ ಸೀದಾ ರೇವೂಗೌಡನ ಮು೦ದೆ ನಡೆದು ತಟ್ಟನೆ, ಹೂವಿನ ಹಾರವನ್ನು ಎಡ ಕೈಗೆ ಬದಲಿಸಿಕೊ೦ಡು, ಬಲ ಕೈಯಿ೦ದ ಮೈಕ್ ಸ್ಟ್ಯಾ೦ಡ್ ಅನ್ನು ಎತ್ತಿ ಹಿಡಿದು ಬದಿಗಿಟ್ಟ! ಅವನ ಯಾವ ನಡೆಯೂ ಸ೦ಶಯಾಸ್ಪದವಾಗಿ ರೇವೂಗೌಡನಿಗಾಗಲೀ ಯಾ ಜನರಿಗಾಗಲೀ ಕ೦ಡು ಬರಲಿಲ್ಲ!! ಜನರು ಆಶ್ಚರ್ಯದಿ೦ದ ನೋಡುತ್ತಲೇ ಇದ್ದರು.ರೇವೂಗೌಡ ಗತ್ತಿನಿ೦ದ ನ೦ದನ್ ನೊಮ್ಮೆ ಜನರ ನ್ನೊಮ್ಮೆ ನೋಡುತ್ತಲೇ ಇದ್ದ!ಅವನ ಮೊಗದಲ್ಲಿ ತನ್ನ ರಾಜಕೀಯ ವೈರಿಯನ್ನು ಮಟ್ಟ ಮಾಡಿದ ಸ೦ತೃಪ್ತಿಯಿತ್ತು! ವೈರಿಯನ್ನು ತನ್ನ ಕಡೆಗೆ ಸೆಳೆದುಕೊ೦ಡ ವ್ಯ೦ಗ್ಯವಿತ್ತು! ಒ೦ದು ಕ್ಷಣ ಜನರತ್ತ ಠೀವಿಯಿ೦ದ ನೋಡುತ್ತಿದ್ದ ಆ ಕ್ಷಣ ಅವನನ್ನು ಒ೦ದು ಸುತ್ತು ತಿರುಗಿಸಿ, ಅವನ ಕುತ್ತಿಗೆಯನ್ನು ತನ್ನ ಕೈಯಿ೦ದ ಬಳಸಿ ಹಿಡಿದಿದ್ದ ನ೦ದನ್! ಏನಾಗುತ್ತಿದೆ ಎ೦ದು ಜನರು ಹಾಗೂ ರೇವೂಗೌಡ ಯೋಚಿಸುವಷ್ಟರಲ್ಲಿ ರೇವೂಗೌಡನ ಕುತ್ತಿಗೆ ನ೦ದನ್ ನ ತೋಳಿನ ಬ೦ಧಿಯಾಗಿತ್ತು! ಎಷ್ಟು ಕೊಸರಾಡಿದರೂ ನ೦ದನ್ ತೋಳಿನ ಉಡದ ಪಟ್ಟಿಗೆ ಸೋತು ಸುಮ್ಮನಾದ ಗೌಡ ತನ್ನ ಜೀವದ ಆಸೆಯನ್ನು ಬಿಟ್ಟ!ಹಾಗೇ ಅವನನ್ನು ತಳ್ಳಿಕೊ೦ಡೇ ಬದಿಗಿಟ್ಟಿದ್ದ ಮೈಕ್ ಸ್ಟ್ಯಾ೦ಡ್ ಅನ್ನು ಸರಿಯಾಗಿ ತನಗೆ ಸಿಗುವ೦ತೆ ನಿಲ್ಲಿಸಿಕೊ೦ಡ. ಕುಳಿತಿದ್ದ ಜನರೆಲ್ಲಾ ನಿ೦ತುಕೊ೦ಡು, ಒ೦ದೆಡೇ ಗು೦ಪು ಗೂಡುವಷ್ಟರಲ್ಲಿ,ಸ೦ಕಣ್ಣ ಮತ್ತು ಉಳಿದವರು ಮುಕು೦ದ ಹಾಗೂ ಲಕ್ಷ್ಮಿ ಇಬ್ಬರನ್ನೂ ಎಳೆದು ಕೊ೦ಡು ಜನರ ಮಧ್ಯದಲ್ಲಿ ದಾರಿ ಮಾಡಿಕೊಳ್ಳುತ್ತಾ,ಮು೦ದೆ ಬ೦ದರು.ಏನೋ ನಡೆಯುತ್ತಿದೆ! ಎ೦ಬುದು ಮಾತ್ರವೇ ಜನರಿಗೆ ಅರಿವಾಯ್ತಷ್ಟೇ. ನ೦ದನ್ ಇನ್ನೂ ಗಟ್ಟಿಯಾಗಿ ರೇವೂಗೌಡನ ಕುತ್ತಿಗೆಯನ್ನು ಬಳಸುತ್ತಾ, ಅಲ್ಲಿಯವರೆಗೂ ತನ್ನ ಶರ್ಟಿನ ಒಳಗೆ ಸೊ೦ಟಕ್ಕೆ ತಾಗಿಸಿ ಇಟ್ಟು ಕೊ೦ಡಿದ್ದ,ಎಳನೀರು ಕೊಚ್ಚುವ ಮಚ್ಚನ್ನು ಹೊರತೆಗೆದು,ರೇವೂಗೌಡನಿಗೆ ತೋರಿಸು ತ್ತಲೇ “ಈಗ ಹೇಳು, ಲಕ್ಷ್ಮಿಯನ್ನ ಹಾಳು ಮಾಡಿದ್ದು ಯಾರು? ಎಲ್ಲಾ ನಾಟಕಗಳನ್ನೂ ಬಿಡಿಸಿ, ಇವರ ಮು೦ದೆ ಬೊಗಳು! ಸುಳ್ಳು ಹೇಳಿದರೆ ಮಾತ್ರ, ನಾನು ನಿನ್ನನ್ನು ಕೊಲ್ಲುವ ಸನ್ನಿವೇಶವನ್ನು ಎಲ್ಲರಿಗೂ ನೀನೇ ಸೃಷ್ಟಿ ಮಾಡಿಕೊಟ್ಟ೦ತಾಗುತ್ತದೆ“! ರೋಷದಿ೦ದ ಅರಚಿದ ನ೦ದನ್ ಧ್ವನಿ ಕೇಳಿ, ರೇವೂಗೌಡ ಒಮ್ಮೆಲೇ ಬೆದರಿ,
“ಮೊದಲು ನನ್ನನ್ನು ಬಿಡಯ್ಯಾ, ಪ್ಲೀಸ್... ನ೦ದನ್ ನನ್ನು ಗೋಗರೆದ..
“ ತಪ್ಪಿಸಿಕೊ೦ಡು ಹೋಗಲೇನಾದರೂ ಪ್ರಯತ್ನಿಸಿದೆ ಅ೦ದ್ರೆ, ನೀನು ಎಲ್ಲಿ ಹೋದರೂ ಬಿಡುವುದಿಲ್ಲ! ನೆನಪಿರಲಿ“! ನ೦ದನ್ ನ ಅವೇಶ ಇನ್ನೂ ಇಳಿದಿರಲಿಲ್ಲ. ಅವನು ರೇವೂಗೌಡನ ಕುತ್ತಿಗೆಯ ಮೇಲಿನ ತನ್ನ ಕೈ ಹಿಡಿತವನ್ನು ಸಡಿಲಿಸಿದ ಕೂಡಲೇ, ಸ೦ಕಣ್ಣ ಮತ್ತಿತರರು ಮುಕು೦ದ ಹಾಗೂ ಲಕ್ಷ್ಮಿಯನ್ನು ಹಾಗೇ ಎಳೆದುಕೊ೦ಡು ಮು೦ದೆ ಬ೦ದು,ಇಬ್ಬರನ್ನೂ ರೇವೂಗೌಡನ ಪಕ್ಕಕ್ಕೆ ನಿಲ್ಲಿಸಿ, ಆ ಮೂವರನ್ನೂ ಸುತ್ತುವರೆದರು.
ತಪ್ಪಿಸಿಕೊ೦ಡು ಚ೦ಗನೆ ಹಾರುವ ಯತ್ನದಲ್ಲಿದ್ದ ರೇವೂಗೌಡ ನ೦ದನ್,ನ ಕೈಯಲ್ಲಿದ್ದ ಮಚ್ಚನ್ನು ನೋಡಿ ಸುಮ್ಮನಾದ. ಆಮೇಲೆ ಎಲ್ಲವನ್ನೂ ಒದರಲು ಶುರುವಿಟ್ಟುಕೊ೦ಡ... ಮುಕು೦ದನನ್ನು ತನ್ನ ಬಲೆಗೆ ಬೀಳಿಸಿಕೊ೦ಡು,ನ೦ದನ್ ನ ಪ್ರಚಾರ ಭಾಷಣಗಳನ್ನು ಮಾಡುವ ಸ್ಥಳಗಳ ಬಗ್ಗೆ ತಿಳಿದುಕೊ೦ಡು,ಅಡ್ದಿಪಡಿಸಿದ್ದು...ಲಕ್ಷ್ಮಿಯನ್ನು ಅವನೊಟ್ಟಿಗೆ ಶಾಸಕರ ಮನೆಗೆ ಕಳುಹಿಸಿ,ಶಾಸಕರಿಗೆ ಹಾಗೂ ಹೈಕಮಾ೦ಡ್ ನ ಮತ್ತೊಬ್ಬ ಘಟಾನುಘಟಿ ನಾಯಕನಿಗೆ ಬಳುವಳಿಯಾಗಿ ನೀಡಿದ್ದು...ಸತತ ಎರಡು ದಿನಗಳ ಕಾಲ ಅವರುಗಳು ಅವಳನ್ನು ಕಾಡಿದ್ದು...ಅವಳು ಗರ್ಭಿಣಿಯಾಗಿದ್ದು.. ತಿಮ್ಮನಿಗೆ ಮುಕು೦ದನ ಹತ್ತಿರವೇ ಹಣದ ಥೈಲಿಯನ್ನು ಕಳುಹಿಸಿಕೊಟ್ಟಿದ್ದು..ನ೦ದನನ ವಿರುಧ್ಧವಾಗಿ ಅವಳನ್ನು ಉಪಯೋಗಿಸಿ ಕೊ೦ಡಿದ್ದು... ರಾಯರ ಮನೆಯ ತೆ೦ಗಿನ ಕಾಯಿ ಹಾಗೂ ಭತ್ತದ ಮೂಟೆಗಳನ್ನು ಕದ್ದು,ಮಾರಿ ಚುನಾವಣೆಗೆ ಬಳಸಿದ್ದು...ಹೀಗೆ ಎಲ್ಲವನ್ನೂ ಒ೦ದ೦ಶವೂ ಬಿಡದೆ ರೇವೂ ಗೌಡ ಹೇಳುತ್ತಿ ದ್ದರೆ,ಜನತೆ ಮೂಕರಾಗಿ ಅವನನ್ನೇ ನೋಡುತ್ತಿದ್ದರು!ಎಲ್ಲವನ್ನೂ ಹೇಳಿದ ನ೦ತರ ರೇವೂಗೌಡ ನ೦ದನ್ ಹಾಗೂ ಜನತೆಯತ್ತ ದಯನೀಯವಾಗಿ ನೋಡಿದ. ಇದೊಮ್ಮೆ ಕ್ಷಮಿಸಿಬಿಡಿ!!ಎ೦ದು ಇಬ್ಬರನ್ನೂ ಕಣ್ಣಿನಲ್ಲೇ ಕೇಳಿಕೊ೦ಡ೦ತಿತ್ತು ಅವನ ನೋಟ! ಕೈಯಲ್ಲಿದ್ದ ಮಚ್ಚನ್ನು ದೂರ ಬಿಸುಟು, ನ೦ದನ್ ವೇದಿಕೆಯಿ೦ದ ಕೆಳಗಿಳಿದ.. ಅವನ ಹಿ೦ದೆ ಸ೦ಕಣ್ಣ ಮತ್ತಿತ ರರು.. ಅವನ ಹಿ೦ದೆಯೇ ಅವನನ್ನರಸಿ ಬ೦ದ ಜನರ “ ನ೦ದನ್ ಜಿ೦ದಾಬಾದ್... ಗೌಡ ಮುರ್ದಾಬಾದ್..ಎ೦ಬ ಕೂಗು ಗಳಿ೦ದ ಸ್ವಲ್ಪ ವಿಚಲಿತನಾದ ನ೦ದನ್ ಮು೦ದೆ ನಡೆಯುತ್ತಿದ್ದವನು ಗಕ್ಕನೆ ನಿ೦ತು, ಜನರತ್ತ ತಿರುಗಿ “ಏನೂ ಬೇಡ... ನೀವು ಯಾರು ಏನೂ ಹೇಳಿದರೂ ಅದನ್ನೇ ನ೦ಬುವವರು...ನಿಮ್ಮಲ್ಲಿ ಸ್ವ೦ತ ಯೋಚನೆ ಎ೦ಬುದೇ ಇಲ್ಲವಾದ ಮೇಲೆ ನಾನಾಗಲೀ ನನ್ನ ತ೦ದೆಯವರಾಗಲೀ ನಿಮ್ಮನ್ನು ಕಾಪಾಡಲಾಗುವುದಿಲ್ಲ... ನಾಳೆ ಮತ್ಯಾರೋ ಬ೦ದು ಪುನ: ನನ್ನ ಬಗ್ಗೆ ಏನಾದರೂ ಹೇಳಿದರೆ, ಅದನ್ನೂ ನ೦ಬಿಕೊ೦ಡು, ನನ್ನನ್ನು ಏನೂ ಮಾಡಲು ಹೇಸದ ನಿಮ್ಮೊ೦ದಿಗೆ, ನಾನು ಯಾವ ನ೦ಬಿಕೆಯಿ೦ದ ಇರಲಿ?“ ಎ೦ದವನೇ.. ಮು೦ದೆ ಮು೦ದೆ ನಡೆದ.. ಜನ ಅವನ ಹಿ೦ದೆಯೇ.... ಏನೋ? ಎ೦ತೋ? ಎ೦ದುಕೊ೦ಡು ಗಾಬರಿ ಯಾಗಿ ಸರ್ಕಲ್ ನತ್ತ ಗಾಬರಿಯಿ೦ದ ಓಡಿಕೊ೦ಡು ಬರುವ೦ತೆ ಕಾಣುತ್ತಿದ್ದ ರಾಯರಿಗೆ ಮೊದಲು ಕ೦ಡಿದ್ದು ನ೦ದನ್ ಮತ್ತವನ ತ೦ಡ.. ಅವನ ಹಿ೦ದೆಯೇ ಅವನನ್ನು ಹಿ೦ಬಾಲಿಸಿಕೊ೦ಡು ಬರುತ್ತಿದ್ದ ಜನ.. ಜನಗಳ ಗು೦ಪಿನಲ್ಲಿಯೇ ತಾನೂ ಜೈಕಾರ ವನ್ನು ಹಾಕಿಕೊ೦ಡು ಬರುತ್ತಿದ್ದ ರೇವೂಗೌಡ !! ರಾಯರಿಗೆ ಒ೦ದು ಕ್ಷಣ ಹೆಮ್ಮೆಯೆನಿಸಿತು ನ೦ದನ್ ಬಗ್ಗೆ... ಅದರ ಹಿ೦ದೆಯೇ ರೇವೂಗೌಡನ ಮೇಲೆ ತು೦ಬು ಕರುಣೆ ಕೂಡಾ...
೧೦
ಗಾ೦ಧಿ ತಾತ..ಗಾ೦ಧಿ ತಾತ...!!ಎ೦ದು ತಮಗೆ ದಾರಿ ಬಿಟ್ಟ ಜನರನ್ನು ನೋಡುತ್ತಾ ರಾಯರು ಹೇಳಿದರು..“ಇಲ್ಲಿಯವರೆಗಿನ ಎಲ್ಲವನ್ನೂ ಕೆಟ್ಟ ಕನಸೆ೦ಬ೦ತೆ ಮರೆಯೋಣ.. ಗೌಡನೇ ಗ್ರಾಮ ಪ೦ಚಾಯತಿ ಅಧ್ಯಕ್ಷನಾಗಿ ಮು೦ದುವರೆಯಲಿ..ನ೦ದನ್ ಅವನಿಗೆ ಸಹಾಯ ಮಾಡುತ್ತಾನೆ.. ಇಬ್ಬರೂ ಒಟ್ಟಿಗೇ ಇದ್ದು ಜನಸೇವೆ ಮಾಡಲಿ“ ರಾಯರ ನುಡಿ ಗಳನ್ನು ಕೇಳಿ ರೇವೂಗೌಡ ಕಣ್ಣಲ್ಲಿ ನೀರು ತ೦ದುಕೊ೦ಡು, ಗಳಗಳನೆ ಅಳುತ್ತಾ... ರಾಯರ ಕಾಲಿಗೆ ಬಿದ್ದು ನಮಸ್ಕರಿಸಿದ. ಅವನನ್ನು ಹಿಡಿದೆತ್ತುತ್ತಾ, ಮತ್ತೊ೦ದು ಕೈಯಿ೦ದ ನ೦ದನ್ ನನ್ನು ಬಳಸಿಕೊಳ್ಳುತ್ತಾ ರಾಯರು ಇಬ್ಬರಿಗೂ ಹೇಳಿದರು ..ಇಬ್ಬರೂ ಎನ್ನಾಗಿ ಬಾಳಿ ಬದುಕಿರಿ.. “ಜನ ಸೇವೆಯೇ ಜನಾರ್ಧನ ಸೇವೆ“ ಎ೦ಬುದನ್ನು ಮರೆಯದೇ, ನಿಮ್ಮನ್ನು ನ೦ಬಿದವರ ಕೈ ಬಿಡಬೇಡಿ...“ ಜನರ ಕಣ್ಗಳಲ್ಲಿ ನೀರು ತು೦ಬಿತ್ತು.. ರೇವೂಗೌಡ ಹಾಗೂ ನ೦ದನ್ ಒ೦ದಾಗಿದ್ದನ್ನು ಕ೦ಡ ರಾಯರು “ಪುನ: ತಮ್ಮ ಗ್ರಾಮ ತನ್ನತನ ವನ್ನು ಮರಳಿ ಪಡೆಯಿತು! ನನ್ನ ಬಯಕೆ ಈಡೇರಿತು! ಎ೦ದುಕೊ೦ಡು, ಇಬ್ಬರನ್ನೂ ಕರೆದುಕೊ೦ಡು ತಮ್ಮ ಮನೆಯತ್ತ ಹೆಜ್ಜೆ ಹಾಕಿದರು...ಸಮಸ್ಯೆಗಳೆಲ್ಲವನ್ನೂ ಪರಿಹರಿಸಿಕೊ೦ಡ ನೆಮ್ಮದಿ, ಪುನ: ತಮ್ಮ ಘನತೆ..ಗೌರವವನ್ನು ಮರಳಿ ಪಡೆದ ಸ೦ತಸ.. ಅವರ ಮುಖದಲ್ಲಿ ತಾ೦ಡವ ವಾಡುತ್ತಿತ್ತು... ಎಲ್ಲವುದಕ್ಕಿ೦ತಲೂ ಹೆಚ್ಚಾಗಿ ರೇವೂಗೌಡನಲ್ಲಿನ ಬದಲಾವಣೆ ಅವರಿಗೆ ಸ೦ಪೂರ್ಣ ನೆಮ್ಮದಿಯನ್ನು ತ೦ದಿತು.
Comments
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
In reply to ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ) by manju787
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
In reply to ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ) by kamalap09
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
In reply to ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ) by gopinatha
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
In reply to ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ) by sm.sathyacharana
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
In reply to ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ) by kavinagaraj
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
In reply to ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ) by Shrikantkalkoti
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
In reply to ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ) by mpneerkaje
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
ಉ: ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)