ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?

ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?

ದ್ವೈತ - ಜೀವಾತ್ಮ, ಪರಮಾತ್ಮ ಬೇರೆ, ಬೇರೆ.
ಅದ್ವೈತ - ಎರಡೂ ಒಂದೇ.
ವಿಶಿಶ್ಟಾದ್ವೈತ - ?? ಏನು ಹೇಳುತ್ತದೆ?

ಈ ಮೂರು ತತ್ವಗಳಲ್ಲಿ ಯಾವುದು ಸರಿ?

ದ್ವೈತಿಗಳು ಸಮರ್ಥಿಸುವುದೇನೆಂದರೆ, ಪರಮಾತ್ಮ ಸರ್ವ ಸಮರ್ಥ. ಹಾಗಿದ್ದು ನಾವೇ ಬ್ರಹ್ಮ ಎಂಬುದು ಸರಿಯೇ? ಎಂದು. ಹಾಗೆಯೇ ಅವರು ತಾರತಮ್ಯವಾದವನ್ನು ಒಪ್ಪುತ್ತಾರೆ.

ಅದ್ವೈತಿಗಳು ಹೇಳುತ್ತಾರೆ, ಅಹಂ ಬ್ರಹ್ಮಾಸ್ಮಿ. ಹಾಗೂ ತಾರತಮ್ಯವಾದವನ್ನು ಒಪ್ಪುವುದಿಲ್ಲ. ’ಯಥಾ ಶಿವಮಯೋ ವಿಷ್ಣು, ಏವ ವಿಷ್ಣು ಮಯಶ್ಶಿವಃ’ ಎಂದು ಹೇಳುತ್ತಾರೆ.

ಹಾಗೆಯೇ, ಜೀವಾತ್ಮದ ಸ್ವರೂಪ ತರ್ಕಕ್ಕೆ ನಿಲುಕದ್ದು ಎಂದು ವೇದಗಳಲ್ಲಿ ಹೇಳಿವೆ ಎಂದು ಕೇಳಿದ್ದೇನೆ.

ಇನ್ನೊಂದು ಸಂದೇಹ. ದ್ವೈತಿಗಳೆಲ್ಲರೂ ಋಗ್ವೇದದವರೇ? ಅಥವಾ ಯಜುರ್ವೇದದವರೂ ಇರುತ್ತಾರೆಯೆ?. ಏಕೆಂದರೆ, ’’ಯಥಾ ಶಿವಮಯೋ ವಿಷ್ಣು, ಏವ ವಿಷ್ಣು ಮಯಶ್ಶಿವಃ’ ಇದು ಯಜುರ್ವೇದದಲ್ಲಿ ಬರುತ್ತದೆ.

ತಿಳಿದವರು ಈ ವಿಶಯದಲ್ಲಿ ಹೆಚ್ಚಿನ ಮಾಹಿತಿ ನೀಡಬೇಕಾಗಿ ವಿನಂತಿ.

Rating
Average: 3 (1 vote)

Comments