ರಾಜೀವ್ ದೀಕ್ಷಿತ್ ಇನ್ನಿಲ್ಲ....

ರಾಜೀವ್ ದೀಕ್ಷಿತ್ ಇನ್ನಿಲ್ಲ....

 ಅಜಾದಿ ಬಚಾವೋ ಆಂದೋಲನದ ಹರಿಕಾರ ರಾಜೀವ ದೀಕ್ಷಿತ ಇನ್ನಿಲ್ಲ. ಸ್ವದೇಶಿ ಚಳವಳಿಗಾಗಿ ಜೀವನ ಮುಡುಪಾಗಿಟ್ಟಿದ್ದ ರಾಜೀವ ನಿನ್ನೆ ಜಾರ್ಖಂಡನಲ್ಲಿ  ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.   ಪ್ರಕರ ವಾಗ್ಮಿ, ಸುರಸುಂದರ ವ್ಯಕ್ತಿತ್ವದ ರಾಜೀವ ದೀಕ್ಷಿತ ಭಾಷಣ ನಿಗದಿಯಾದರೆ, ಸಾವಿರಾರು ಮಂದಿ ಸೇರುತ್ತಿದ್ದ ಕಾಲವೂ ಒಂದಿತ್ತು. ವಿದೇಶೀ ಕಂಪನಿಗಳ ವಿರುದ್ಧ ಸಮರ ಸಾರಿದ್ದ ದೀಕ್ಷಿತ ಇದೇ ಕಾರಣದಿಂದ ಸುಮಾರು 200ಕ್ಕೂ ಹೆಚ್ಚು ಖಟ್ಲೆಗಳನ್ನು ದೇಶಾದ್ಯಂತ ಎದುರಿಸುವಂತಾಯಿತು. ಎಂಎನಸಿಗಳ ರಾಜೀವ ಬಾಯಿ ಬಾಯಿ ಮುಚ್ಚಿ ಹಲವು ಬಗೆ0ು ಪ್ರ0ುತ್ನಗಳನ್ನೂ ಮಾಡಿದ್ದವು. ಸ್ವಾತಂತ್ರ್ಯ ಚಳವಳಿ ನಂತರ ದೇಶವ್ಯಾಪಿ ನಡೆದ ಅತೀ ದೊಡ್ಡ ಚಳವಳಿ ಸ್ವದೇಶಿ ಜಾಗೃತಿ. ಇನ್ನೇನು ಇಡೀ ದೇಶವೇ ಸ್ವದೇಶಿ ಉತ್ಪನ್ನಗಳನ್ನು ಬಳಸುತ್ತದೆ. ವಿದೇಶಿ ಕಂಪನಿಗಳು ವ್ಯಾಪಾರವಿಲ್ಲದೇ ಬಾಗಿಲು ಮುಚ್ಚತ್ತವೆ ಎಂದೇ ಭಾವಿಸಲಾಗಿತ್ತು. ಆದರೆ, ಅದು ಹಾಗಾಗಲಿಲ್ಲ..ಏಕೋ ಏನೋ...  ಏನೇ ಆಗಲಿ ಒಬ್ಬ ಎಂಜಿನಿ0ುರಿಂಗ ಪದವೀಧರನಾಗಿ ರಾಜೀವ ದೀಕ್ಷಿತ ದೇಶದಲ್ಲಿ ಮೂಡಿಸಿದ ಸ್ವದೇಶಿ ಸಂಚಲನ ಅದ್ಭುತವಾದದ್ದು...ಮರೆ0ುಲಾಗದಂತದ್ದು.....

Comments