ಅರಳಿವೆ ತನು ಮನಗಳು!

ಅರಳಿವೆ ತನು ಮನಗಳು!

ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!

ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!

ಗ: ನೀನೇತಕೆ ಕೂತಿರುವೆ ಹೀಗೆ, ಮರತಂತೆ ಜಗವಾ

ಹೆ: ನಿನ್ನ ಸಂಗದಿ ನನ್ನೇ ನಾನು ಮರೆತೆ, ಹಾಗೆ ಮರೆತೆ ಜಗವಾ

ಗ: ಸರಸಕ್ಕೆ, ಮಿಲನಕ್ಕೆ ಕಾದಿವೆ ಮೈಮನಗಳು...

ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!

ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!

ಹೆ: ಒಮ್ಮೆ ಹೇಳು ನೀ, ನಿನ್ನ ಈ ಪ್ರೀತಿ ನಿಜವೇನಾ

ಗ: ನಿನ್ನಾಣೆಗೂ ನಾ ನಿನ್ನ ಬಿಡೆನು ನಂಬು ನೀ ನನ್ನ

ಹೆ: ಈ ಮಧುರ ನುಡಿಗಾಗಿ ಕಾಯುತ್ತಿದ್ದವೀ ಕಿವಿಗಳು

ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!

ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!

ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!
************************************

ಇದು, ಒಂದು ಹಳೇ ಹಿಂದೀ ಚಲನಚಿತ್ರಗೀತೆಯ ಧಾಟಿಯಲ್ಲಿದೆ... :)

Rating
No votes yet

Comments