ಒಯ್ದರಾತನ ದಂಡಿನಾಳ್ಗಳು
ಒಯ್ದರಾತನ ದಂಡಿನಾಳ್ಗಳು
ಹೊಯ್ದರಾತನ ಬಾರು ಹಗ್ಗದಿ
ಗೆಯ್ದರಾತನ ಹಾಸ್ಯರಾಜನ ಸೋಗು ತೊಡಿಸುತಲಿ
ಕೊಯ್ದರಾತನ ತಲೆಯ ಮುಳ್ಳಿಂ
ಬಯ್ದರಾತಗೆ ರಾಜ ಎನುತಲಿ
ಕೈದುವೆನುತಲಿ ಕೊಟ್ಟಾ ಬೆತ್ತದಿ ಹೊಡೆದರಾತನಿಗೆ
ಈ ಷಟ್ಪದಿ ಯಾರದಿರಬಹುದು ಊಹಿಸಬಲ್ಲಿರಾ? ಇದು ಜರ್ಮನಿಯಿಂದ ಧಾರವಾಡಕ್ಕೆ ಬಂದು ಕನ್ನಡ ಕಲಿತು ಕನ್ನಡಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ರೆವೆರೆಂಡ್ ಕಿಟ್ಟೆಲ್‍ರವರದ್ದು. ಅವರ ಹೆಸರು ವಿಶ್ವವಿಖ್ಯಾತವಾಗಲು ಅವರ ಕನ್ನಡ-ಇಂಗ್ಲೀಷ್ ಡಿಕ್ಶನರಿ ಕಾರಣವಾಗಿದೆ.
Rating
Comments
ಏಸು