ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
೧೯೬೭ರಲ್ಲಿ ಮೊದಲಮುದ್ರಣ ಕಂಡ ಮತ್ತು ಡಾ|| ಶಂ. ಬಾ. ಜೋಶಿಯವರು ಬರೆದ 'ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ' ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಹೇಳಿದ ವಿಷಯಗಳು ಸುಮಾರಾಗಿ ಹೀಗೆ . - ಆರ್ಯಾವರ್ತದ ಕೆಳಗೆ ಅಂದರೆ ವಿಂಧ್ಯಪರ್ವತಗಳ ಕೆಳಗೆ ಇರುವ ದಕ್ಷಿಣಾಪಥದಲ್ಲಿ ಇದ್ದುದು ಕನ್ನಡಭಾಷೆಯೇ. ಕಾವೇರಿಯಿಂದ ಗೋದಾವರಿ ಅಷ್ಟೇ ಅಲ್ಲ ಅದಕ್ಕೂ ಮೇಲಕ್ಕೆ ನರ್ಮದಾ ನದಿವರೆಗಿನ ಭೂಪ್ರದೇಶವು ಕನ್ನಡ ನುಡಿಯು ಬಳಕೆಯಿದ್ದ ಪ್ರದೇಶ. ಮೂಲಕರ್ಣಾಟ ಇದ್ದದ್ದು ಮಧ್ಯ ಭಾರತದಲ್ಲಿ . ಈ ಬಗ್ಗೆ ವೇದಗಳಲ್ಲಿಯೂ ಕುರುಹುಗಳಿವೆ. ಋಷಿಮುನಿಗಳೆಂದು ನಾವು ಹೇಳುವ ಜನರಲ್ಲಿ ಋಷಿಗಳು ಆರ್ಯರು. ಮುನಿಗಳು ಆರ್ಯೇತರರು , ದ್ರವಿಡರು (ಅಂದರೆ ಸಂಕುಚಿತ ಅರ್ಥದಲ್ಲಿನ ತಮಿಳರಲ್ಲ. ಇವರನ್ನು ಶಂಬಾರವರು 'ಕಂದಮಿಳರು' ಎಂದು ಕರೆಯುತ್ತಾರೆ. 'ದ್ರವಿಡರು' ಶಬ್ದದ ಅರ್ಥ ಓಡಿಸಲ್ಪಟ್ಟವರು. ). ಮುನಿಗಳು ಐಹಿಕ ಜೀವನಕ್ಕೆ ಮುನಿದವರು. ಸಂನ್ಯಾಸಿ ಸಂಪ್ರದಾಯ ಇವರದೇ , ಯೋಗವೂ ಈ ಜನರದೇ ಕೊಡುಗೆ. ಇಂದಿನ ಕರ್ನಾಟಕದಲ್ಲಿ ಆಗ ಇದ್ದದ್ದು ಕುಂತಲ, ಬನವಾಸಿ, ಎಮ್ಮೆನಾಡು ಅಥವಾ ಮಹಿಷಮಂಡಲ ಮುಂತಾದ ಪ್ರದೇಶಗಳು. ಸಂಸ್ಕೃತಕ್ಕೆ ಮರುಳಾಗಿ ಸಂಸ್ಕೃತೀಕರಣಗೊಂಡು ಕನ್ನಡ ಅಲ್ಲಿಂದ ಕಾಲು ಕಿತ್ತಿತು. ದಕ್ಷಿಣಕ್ಕೆ ಸರಿಯಿತು. ಕನ್ನಡವು ಜೈನಧರ್ಮದೊಂದಿಗೆ ಸಮೀಕರಣಗೊಂಡಿದ್ದು ಇನ್ನೊಂದು ಕಾರಣ . ಮರಾಠೀ , ಗುಜರಾತೀ , ಪ್ರಾಕೃತ ಭಾಷೆಗಳು ರೂಪಗೊಂಡಿದ್ದು ಆವಾಗ.
ಪುಸ್ತಕ ಓದಿ ಮುಗಿಸಿದಾಗ ನನ್ನಲ್ಲಿ ಉಳಿದದ್ದಿಷ್ಟು . ನೀವೂ ಓದಿ ನೋಡಿ.
Comments
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
In reply to ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ by hamsanandi
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
In reply to ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ by thesalimath
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
In reply to ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ by shreekant.mishrikoti
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
In reply to ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ by thesalimath
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
In reply to ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ by pisumathu
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
In reply to ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ by hamsanandi
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ
In reply to ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ by jokumar
ಉ: ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ