ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!
ಇದನ್ಯಾವ ಪರಿ ಬಣ್ಣಿಸಲಿ, ಇದ ನಾನೇನೆಂದು ಬಣ್ಣಿಸಲಿ
ಆನಂದದ ಈ ಪರಿಯನುಭವ ಬಲು ವಿರಳವೀ ಬಾಳಿನಲಿ
ನಾವೆಣಿಸಿದಂತೆ ಎಲ್ಲಾ ನಡೆಯುವುದಿಲ್ಲ ಎಂಬುದು ಸತ್ಯ
ಆದರೂ ಏನೇನೋ ಎಣಿಕೆಗಳು ನಮ್ಮ ಮನದಲ್ಲಿ ನಿತ್ಯ
ನಿನ್ನನ್ನು ಸಂಪರ್ಕಿಸಲು ಸಾಧ್ಯವಿದ್ದೆಡೆಯೆಲ್ಲಾ ತಡಕಾಡಿದ್ದೆ
ಸಂಪರ್ಕಿಸುವ ಮಾರ್ಗ ಅರಿಯದೇ ನಾನು ಚಡಪಡಿಸಿದ್ದೆ
ಮಾತಾಡಬೇಕೆಂಬ ತವಕ ಏಕೆಂಬುದ ನಾನರಿಯದಾಗಿದ್ದೆ
ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗದು ಎಂಬುದೂ ಗೊತ್ತಿದ್ದದ್ದೆ
ನಿನ್ನೆ ಅದೇಕೋ ಕುತೂಹಲ ಉತ್ತುಂಗಕ್ಕೇರಿತ್ತು ಎಂದೆನ್ನಲೇ
ಮತ್ತೆ ಹುಡುಕಾಡಿ ಸಿಗದಾಗ, ಕೊರಗುತ್ತಿದ್ದೆ ನಾ ಮನದಲ್ಲೇ
ಇಂದು ಮುಂಜಾನೆ ನಿನ್ನ ಅನಿರೀಕ್ಷಿತ ಸಂದೇಶವ ಓದಿದಾಗ
ನನ್ನ ಕಣ್ಣುಗಳ ನಂಬಲಾಗದೇ ನಾ ಬೆರಗಾಗಿ ಹೋದೆನಾಗ
ಸಂಪರ್ಕ ಸಾಧಿಸಿ, ಮಾತುಗಳೆರಡನಾಡಿ ಮರೆಯುವುದಕ್ಕಲ್ಲ
ಸ್ನೇಹವೆಂಬುದು ನಾವಳಿದಮೇಲೂ ಜಗದಿ ಉಳಿಯಬೇಕಲ್ಲಾ?
************************
Rating
Comments
ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!
In reply to ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...! by Jayanth Ramachar
ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!
In reply to ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...! by asuhegde
ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!
In reply to ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...! by Jayanth Ramachar
ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!
In reply to ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...! by asuhegde
ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!
ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!
In reply to ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...! by gopaljsr
ಉ: ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!