“ಕರ್ನಾಟಕದ ತರ‍್ಲೆ ಜನ”!

“ಕರ್ನಾಟಕದ ತರ‍್ಲೆ ಜನ”!

                ‘ಕರ್ನಾಟಕದ ಜನ ತರ‍್ಲೆ ಬುದ್ಧಿಯವರು’ ಎಂಬ ಹೊಸ ದರ್ಶನವನ್ನು ಹಿರಿಯ ದಾರ್ಶನಿಕ ಡಾ. ಎಸ್. ಎಲ್. ಭೈರಪ್ಪನವರು ಕರ್ನಾಟಕದ ಜನತೆಯ ಮೇಲೆ ಪ್ರಹಾರ ಮಾಡಿರುವುದಾಗಿ ಪತ್ರಿಕೆಯೊಂದರಲ್ಲಿ ವರಿಯಾಗಿದೆ.


                ರಾಜ್ಯದ ದಿನನಿತ್ಯದ ತರ‍್ಲೆ ರಾಜಕೀಯವನ್ನೇ ಅವರು ಈ ರೀತಿ ಹೇಳಿರಬಹುದು. ಹಾಗಾದರೆ ಈ ತರ‍್ಲೆ, ರಾಜ್ಯದ ಬಹುಸಂಖ್ಯೆಯ ಮಹಾಜನತೆಯದೋ ಅಥವಾ ಹೊಸದಾಗಿ ಅಧಿಕಾರದ ರುಚಿ ಕಂಡು ಗುಳಕಾವಣೆಯಲ್ಲೂ ಅಡ್ಡಕಸಬಿತನ ತೋರಿ ಸಿಕ್ಕಿಹಾಕಿಕೊಳ್ಳುತ್ತಿರುವ ಮೌಲ್ಯವಂತ ಪಕ್ಷದ ರಜಕಾರಣಿಗಳದ್ದೋ ಇಲ್ಲಾ ಅವರನ್ನು ಅಧಿಕಾರಕ್ಕೆ ತಂದು ಇನ್ನೂ ಹಾಡಿಹೊಗಳುತ್ತಿರುವ ವಂಧಿಮಾಗಧ ಬೆಂಬಲಿಗರದ್ದೋ ಎನ್ನುವ ಜಿಜ್ಞಾಸೆಯನ್ನೂ ಈ “ದರ್ಶನ” ಹುಟ್ಟಿಸೀತು!


                ಗುಜರಾತಿನ ನರೇಂದ್ರ ಮೋದಿಯವರನ್ನೂ ಅವರು ಸಕಾರಣವಗಿಯೇ ಹೊಗಳಿದ್ದಾರೆ. ಮೋದಿಯವರಾದರೋ “ಒರಿಜಿನಲ್” ನಾಯಕ; ವಿರೋಧ ಪಕ್ಷಕ್ಕಿಂತಾ ಹೆಚ್ಚಾಗಿ ತಮ್ಮದೇ ಪಕ್ಷವನ್ನು ಎದುರಿಸಿ ಗೆದ್ದ ಗುಂಡಿಗೆವಂತನೆಂದೂ ಒಪ್ಪಬಹುದು! ಆದರೆ ಬೇರೆ ಒಬ್ಬೊಬ್ಬ ನಾಯಕನೂ, ಒಬ್ಬ ನರೇಂದ್ರ ಮೋದಿ ಅಥವಾ ಒಬ್ಬ ನಿತೀಶ್ ಕುಮಾರ್ ಆಗಿರುವುದು ಸಾಧ್ಯವೇ?


 ಆದ್ದರಿಂದ ತರ‍್ಲೆ ಎಂಬ ಅಭಿದಾನವನ್ನು, ಸೈದ್ಧಾಂತಿಕವಾಗಿ ಜನರ ಮೇಲೆ ಹೊರೆಸಿ ಕೈತೊಳೆದುಕೊಳ್ಳುವುದಕ್ಕಿಂತಾ, ಸಾಧ್ಯವಾದರೆ ರಾಜಕೀಯ ಪಕ್ಷಗಳೇ ಮಾನ-ಮರ‍್ಯಾದೆ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು ಇನ್ನೂ ಒಳ್ಳೆಯದಾಗಲಾರದೇ? 

Comments