ನೆನಪಾಗುತ್ತವೆ ಶನಿವಾರದ ಕ್ಲಾಸುಗಳು

ನೆನಪಾಗುತ್ತವೆ ಶನಿವಾರದ ಕ್ಲಾಸುಗಳು

ಕವನ

ನೆನಪಾಗುತ್ತವೆ ಶನಿವಾರದ ಕ್ಲಾಸುಗಳು

ಚಳಿಯ ಮೊರೆತದ ಚಳವಳಿಗಳು

ಬೆಚ್ಚನೆಯ ಬೆತ್ತದ ಏಟುಗಳು

ತಂಗಳು ಮುದ್ದೆಯ ಮೊಸರಿನ ರುಚಿಗಳು

 

ತುಟಿ ಅಲುಗಾಡಿಸುವ ಇಂಗ್ಲೀಷ್ ಮೇಸ್ತ್ರರ ಕ್ಲಾಸುಗಳು

ನಾಲಿಗೆ ಚಪ್ಪರಿಸುವ ಕನ್ನಡದ ಕವನಗಳು

ಚರಿತ್ರೆಯ ಗೊರಕೆಯ ಸಂಭ್ರಮಗಳು

ಅರ್ಥವಾಗದ ಗಣಿತದ ಗಣನೆಗಳು

 

ಮಗ್ಗಿ ಹೇಳದ ಮಲ್ಲಿಯ ಭಯಗಳು

ಬ್ಯಾಗಿನಲ್ಲಿರುವ ಬಿಸಿ ಬಿಸಿ ರೊಟ್ಟಿಗಳು

ಮಾಸ್ತರರ ಗಟ್ಟಿ ಧ್ವನಿಯ ಮಾತುಗಳು

ಮತ್ತೇರಿಸುವ ಮಾನವನಿಲ ಸ್ಪೋಟಗಳು

 

ಮತ್ತೆ ಮತ್ತೆ ನೆನಪಾಗುತ್ತವೆ ಶನಿವಾರದ ಕ್ಲಾಸುಗಳು

ನೆತ್ತಿಗೆರಿದ ಬ್ಯಾಗಿನ ನೇರಳೆಯ ಕಲೆಗಳು

ಆಟದಲ್ಲಿ ಬಿದ್ದು ಆದ ಗಾಯದ ಮಚ್ಚೆಗಳು

ಹುಡುಗಿಯರ ಜೊತೆಗಿನ ತರಲೆ ತಂಟೆಗಳು.

Comments