ಹೌದೌದು! ಅವರೊಬ್ಬರು ಮಾತ್ರವೇ “ಎಡವಟ್ಟು”!
ಡಿ. 6ರ ‘ವಿಜಯ ಕರ್ನಾಟಕ’ದಲ್ಲಿ, ಸಂತೋಷ್ ಹೆಗ್ಡೆಯವರೇ, ನೀವೊಬ್ಬರು ಮಾತ್ರಾ ಯಾಕೆ ಹೀಗೆ? ಎಂಬ ನಡುಪುಟ ಲೇಖನ ಪ್ರಕಟವಾಗಿದೆ. ನನಗಂತೂ ಅದರ ಪ್ರಾಮಾಣಿಕತೆ ಕರಳು ಮಿಡಿಯಿತು. ಇದರಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ವೈಯಕ್ತಿಕ ಶ್ರೇಷ್ಠತೆ ಮತ್ತು ನಮ್ಮ ರಾಜಕೀಯ ಸಂದರ್ಭದ ಸಾರ್ವತ್ರಿಕ ಭ್ರಷ್ಟತೆಗಳು ಒಂದರ ಕೆಳಗೊಂದು ಅಭಿವ್ಯಕ್ತಗೊಂಡಿರುವುದು ಪರಿಣಮಕಾರಿಯೆನಿಸಿತು!
ವ್ಯಕ್ತಿಯೊಬ್ಬರ ಸಂಸ್ಕಾರವಂತಿಕೆ, ಪ್ರಾಮಾಣಿಕ ಕಳಕಳಿಗಳು ಅವರ ವೈಯಕ್ತಿಕ ಪುಣ್ಯ. ಅಂಥವರಿಂದ ಲೋಕಕ್ಕೆ ಮಹದುಪಕಾರವಾಗುವುದೂ ಸತ್ಯವೇ. ಆದರದು ಕೇವಲ ತಾತ್ಕಾಲಿಕ; ಅವರ ಅಧಿಕಾರಾವಧಿ ಮುಗಿಯುವವರೆಗೆ ಮಾತ್ರಾ ಇರುವಂಥದು! ಲೇಖಕರು ಹೇಳಿರುವಂತೆ Surely their presence will be felt more in their absence! ಸುಳ್ಳಲ್ಲ. ಆದರೆ ಭ್ರಷ್ಟ ರಾಜಕೀಯದವರ, ಗುಲಾಮ ಅಧಿಕಾರಶಹಿಗಳ, ನೀಚ ಧರ್ಮಾಧಿಪತಿಗಳ ಪಾಪವಾದರೋ, ಸಾರ್ವಜನಿಕ ಜೀವನದಲ್ಲಿ ಸಾರೋದ್ಧರವಾಗಿ ಮುಂದುವರೆಯುತ್ತಲೇ ಇರುವಂಥದು. ಇದಕ್ಕಲ್ಲವೇ ಶಾಸ್ವತ ಪರಿಹಾರ ಬೇಕಾಗಿರುವುದು?
ನ್ಯಾ. ಸಂತೋಷ್ ಹೆಗಡೆಯವರಿಗೆ, ಅಂತಹ ಬೇರೆ ಜ್ಞಾತಾಜ್ಞಾತ ಸುಜೀವಿಗಳಿಗೆ, ಸಭ್ಯ ಸಮಾಜ ಜೀವಿಗಳ ಬಗ್ಗೆ ಪ್ರಾಮಾಣಿಕ ಸಹಾನುಭೂತಿಯಿರುವುದೇ ಆದರೆ, ಅವರು ಅಂತಹ ಸಾತ್ವಿಕರನ್ನು ಸಂಘಟಿಸಲಿ; ಬಹುಜನ ಆಧಾರವಿಲ್ಲದೆ ಅಧಿಕಾರ-ರಾಜಕೀಯ ನಡೆಸುವುದು ಸಾಧ್ಯವಾಗದಂತೆ ಪ್ರಜಾಪ್ರಭುತ್ವ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನ ಮಾಡಲಿ. ಆ ಮೂಲಕವಾದರೂ ಈ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಮನುಷ್ಯತ್ವದ ಮರ್ಯಾದೆ ಬಂದರೂ ಬರಬಹುದಲ್ಲವೇ? ಸಭ್ಯ ಸಮಾಜ ಜೀವನ ಬಯಸುವ ಜೀವಿಗಳು ದಯವಿಟ್ಟು ಏನಾದರೂ ಅನ್ನಿ!
Comments
ಉ: ಹೌದೌದು! ಅವರೊಬ್ಬರು ಮಾತ್ರವೇ “ಎಡವಟ್ಟು”!
ಉ: ಹೌದೌದು! ಅವರೊಬ್ಬರು ಮಾತ್ರವೇ “ಎಡವಟ್ಟು”!