ನಿಮ್ಮ ಪ್ರೀತಿಗೆ ,ಅದರ ರೀತಿಗೆ...ಕಣ್ಣ ಹನಿಗಳೇ ಕಾಣಿಕೆ !

ನಿಮ್ಮ ಪ್ರೀತಿಗೆ ,ಅದರ ರೀತಿಗೆ...ಕಣ್ಣ ಹನಿಗಳೇ ಕಾಣಿಕೆ !

ಬಿಡದೆ ಬೆನ್ನೆತ್ತಿ ಕಾಡುವ ಕಳೆದ ಕ್ಷಣಗಳಿಗೆ

ಹೆದರಿಕೊಂಡು ನೆಲ ನೋಡಿ ನಡೆವಾಗ

ಧುತ್ತನೆ ಎದುರಾಗಿ ಮುಗುಳ್ನಕ್ಕವರು!

 

ಭವಿಷ್ಯದ ದಿಗಿಲ ಸಿಡಿಲಿಗೆ

ನಿಂತ ನೆಲ ಬಾಯ್ಬಿಟ್ಟoತಾದಾಗ

ಬೀಳದಂತೆ ಬಿಗಿಯಾಗಿ ಅಂಗೈ ಹಿಡಿದವರು !.

 

ಯಾರದ್ದೋ ಹಂಗು ನನಗ್ಯಾಕೆ

ನಾ ಇರೋದೇ ಹೀಗೆ ಎಂದಾಗ

ತಪ್ಪು  ತಿದ್ದಿ ಬುದ್ದಿ ಹೇಳಿದವರು!

 

ನೋವಿಗೂ ಮೀರಿ ಕನಸುಗಳ ಪಿಸುಗುಟ್ಟಿ

ಒಳಗೆ ಸಾಧನೆಯ ಛಲವಿದೆಯೆಂದು ತಿಳಿದಾಗ

ಬೆನ್ನು ತಟ್ಟಿ ನೆತ್ತಿ ನೇವರಿಸಿದವರು!

 

ತಮ್ಮ ಪಾದದ ಗಾಯ ಮರೆತು

ದೂರ ತೀರದ ದಾರಿಯ  ತುಂಬಾ

ಎಂದೂ ಬಾಡದ ಹೂವ ಹಾಸಿದವರು!

 

ಮನಸ್ಸು ಮಗುವಾಗಿಸಿಕೊಂಡು

ನೀನೇ ಸರಿ ನೀನೆ ಗುರಿ ಎಂದು

ತುಳುಕದ ತುಂಬಿದ ಕೊಡವನ್ನು ಪುನಃ ನೆನಪಿಸಿದವರು !

Rating
No votes yet

Comments