ಒಲ್ಲೆ ಅಂದವಳು....

ಒಲ್ಲೆ ಅಂದವಳು....

ಕವನ
 ಕವಿತೆ ಬರೆಯುವೆ ನಿನಗಾಗಿ
ಹಾಡೂ ಹಾಡುವೆ ಒಲವಿಗಾಗಿ
ಒಲ್ಲೆ ಅಂದವಳು ನೀನೆ ಅಲ್ಲವೇ...

ಬಾಳ
ಬೆಳದಿಂಗಳಲ್ಲಿ ಚಿತ್ತಾರ
ಮೂಡಿಸುವೆ ಕತ್ತಲಲ್ಲೂ ನೀನ್ನೆ
ನೋಡುವೆ ಮುಸ್ಸಂಜೆಯಲ್ಲೂ
ನಿನ್ನೇ ಕಾಣುವೆ. ದೂರವಿರು ಅಂದವಳೂ
ನೀನೆ ಅಲ್ಲವೇ..

ಉಸಿರ ವರತೆಯಲ್ಲಿ ನಿನ್ನ ನಿರೀಕ್ಷೆನೆ ಇದೆ
ಮನದ ಗೂಡಲ್ಲಿ ನಿನ್ನದೇ ೋವಿದೆ
ಕೇಳಿ ಸುಮ್ಮನಿರುವವಳು ನೀನೆ ಅಲ್ಲವೇ...

ಬೇಡ
ಚೆಲುವೆ ನೀನು ನೀನಾಗಿರು ನಾನು
ನಾನಾಗಿರುವೆ  ನಮಗೇಕೆ ಬೇಕು ಪ್ರೀತಿಯ
ವ್ಯವಹಾರ ಅದು ಪ್ರೇಮಿಗಳಿಗಲ್ಲವೇ...
ನಾವಂತು ಇನ್ನೂ ಅರ್ಥ ಮಾಡಿಕೊಳ್ಳದ
ಸ್ನೇಹಿತರಲ್ಲವೇ....


-ರೇವನ್

Comments