ವಚನ ಸಾಹಿತ್ಯ ದ ಸರಕಾರೀ ಸೈಟು ಕೆಲಸ ಮಾಡ್ತಾ ಇದೆ!
ನನಗೆ ವಚನ ಸಾಹಿತ್ಯದ ಬಗ್ಗೆ in general ಕನ್ನಡ ಸಾಹಿತ್ಯ / ಭಾಷೆ ಬಗ್ಗೆ ಆಸಕ್ತಿ ಮರುಕಳಿಸಿದ್ದು ದೇಶದಾಚೆ ಇರಬೇಕಾದ ಪರಿಸ್ತಿತಿಯಿಂದಲೇ.
ಆಗಲೇ ನನಗೆ www.vachanasahitya.org ಮತ್ತು ಸಂಪದ ಗಳ ಪರಿಚಯವಾಗಿದ್ದು.
www.vachanasahitya.org ಪರಿಚಯವಾದ ಕೆಲವೇ ತಿಂಗಳುಗಳಲ್ಲಿ ಆ ಸೈಟು ನಿಂತೂ ಹೋಯ್ತು. ಇದರ ಬಗ್ಗೆ ಸಂಪದದಲ್ಲಿ ಒಮ್ಮೆ ಪ್ರಸ್ತಾಪಿಸಿಯೂ ಇದ್ದೆ.
ನಂತರ ಭಾರತಕ್ಕೆ ಬಂದಾಗ ಕನ್ನಡ ಸಂಸ್ಕೃತಿ ಇಲಾಖೆಗೆ ಫೋನ್ ಮಾಡಿದ್ದೆ. ಸ್ವತ ನಿರ್ದೇಶಕರಾದ ಮನು ಬಳಿಗಾರರೆ ಮಾತಾಡಿ ಕೆಲ ದಿನಗಳ ನಂತರ ಹೆಚ್ಚಿನ ವಿಷಯ ತಿಳುಸ್ತೀನಿ ಅಂದಿದ್ದರು. ನಂತರ ಮಾತಾಡಿದಾಗ , ಈ ಸೈಟು ಮಾಡಿಕೊಟ್ಟವರ ಜೊತೆ ಸರ್ಕಾರಕ್ಕೆ ಕಾಪಿರೈಟು ವಿಷಯದ ಬಗ್ಗೆ ಗೊಂದಲವಿರುವಂತೆ ಅನ್ನಿಸಿತು.ಅವರು ಅದನ್ನು ನಿವಾರಿಸಿ ಆದಷ್ಟು ಬೇಗೆ NIC (National Infarmatics Center) ಗೆ ಅಪ್ಲೋಡ್ ಮಾಡಲಾಗುತ್ತೆ ಅಂದಿದ್ದರು.
ನಂತರ ನನ್ನ ಗಮನ ಆ ಕಡೆ ಹೋಗಲೇ ಇಲ್ಲ.
ಈ ನಡುವೆ vachanasahitya.org ಸರಿಹೋಗುವ ಯಾವ ಲಕ್ಷಣಗಳೂ ಇಲ್ಲ ಅಂತ ಅನ್ನಿಸಿ ಹರಿಪ್ರಸಾದ್ ಜೊತೆ ಹೊಸ ಸೈಟ್ ಬಗ್ಗೆ ಮಾತಾಡಬೇಕು ಅನ್ಸಿತ್ತು. ನನ್ನ ತಾಪತ್ರಯಗಳನ್ನು ಮುಗಿಸಿಕೊಂಡು, ಈ ತಿಂಗಳ ಕೊನೆಗೆ ಈ ಬಗ್ಗೆ ಮಾತಾಡೋಣ, ಒಂದು ಸೈಟು ಮಾಡಿಕೊಡು ಅಂತ ಹರ್ಷನಿಗೆ ಹೇಳಿದ್ದೆ.
ಆದರೆ..........
ಆದರೆ ಇಂದು ಆಕಸ್ಮಿಕವಾಗಿ ಈ vachanasahitya.org ಗೆ ಹೋದರೆ http://www.vachanasahitya.gov.in ಗೆ ಲಿಂಕ್ ಕೊಡ್ತಾ ಇದೆ.
ಕೊನೆಗೂ ಈ ಸೈಟು ವರ್ಕ್ ಆಗ್ತಾ ಇದೆ. ಮನು ಬಳಿಗಾರ್ ಅವರ (ಮತ್ತು ಈ ಈ ಬಗ್ಗೆ ಕೆಲಸ ಮಾಡಿದವರ ) ಪ್ರಯತ್ನಕ್ಕೆ, ಕಾಳಜಿಗೆ ಒಂದು ಥ್ಯಾಂಕ್ಸ್ ಹೇಳೋಣ ಅಂತ ಬ್ಲಾಗು!
ಅಂದಹಾಗೆ http://dasasahitya.gov.in ಸಹ ವರ್ಕ್ ಆಗ್ತಾ ಇದೆ
Comments
ಉ: ವಚನ ಸಾಹಿತ್ಯ ದ ಸರಕಾರೀ ಸೈಟು ಕೆಲಸ ಮಾಡ್ತಾ ಇದೆ!
ಉ: ವಚನ ಸಾಹಿತ್ಯ ದ ಸರಕಾರೀ ಸೈಟು ಕೆಲಸ ಮಾಡ್ತಾ ಇದೆ!